ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿದ್ದು, ಅನುಮುಲ ರೇವಂತ್ ರೆಡ್ಡಿ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವುದು ಬಹುತೇಕವಾಗಿ ಖಚಿತವಾಗಿದೆ ಎನ್ನಲಾಗಿದೆ.
ರೇವಂತ್ ಕಲ್ವಕುರ್ತಿ ವಿಧಾನಸಭಾ ಕ್ಷೇತ್ರದ ಕೊಂಡರೆಡ್ಡಿಪಲ್ಲಿಯವರು. ನವೆಂಬರ್ 8, 1969 ರಂದು ನರಸುಮ ರೆಡ್ಡಿ ಮತ್ತು ರಾಮಚಂದ್ರಮ್ಮ ಎಂಬ ಕೃಷಿ ಕುಟುಂಬಕ್ಕೆ ಜನಿಸಿದ ರೇವಂತ್, ಸಹೋದರಿ ಸೇರಿದಂತೆ ಏಳು ಒಡ ಹುಟ್ಟಿದವರ ಪೈಕಿ ನಾಲ್ಕನೆಯವರು.
ಅವರು 2006 ರಲ್ಲಿ ಮಿಡ್ಜಿಲ್ ಮಂಡಲದಿಂದ ZPTC ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದಿದ್ದರು. ಒಂದು ವರ್ಷದ ನಂತರ, ಅವರು ಮಹೆಬೂಬ್‌ನಗರದಿಂದ ಸ್ಥಳೀಯ ಸಂಸ್ಥೆಗಳ ಕೋಟಾದ ಅಡಿಯಲ್ಲಿ MLC ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅದು ಮಹತ್ವದ ತಿರುವು ಪಡೆಯಿತು.