ಹೊಸದಿಲ್ಲಿ, ಮೇ 30 : ಕೊರೋನಾ ವೈರಸ್ ಸೋಂಕನ್ನು ಪರೀಕ್ಷಿಸಲು ಭಾರತ ಸರ್ಕಾರ ಆರೋಗ್ಯ ಸೇತು ಆ್ಯಪ್ ಅನ್ನು ಪರಿಚಯಿಸಿದೆ. ಕೊರೊನಾ ಸೋಂಕು ತಡೆಗಟ್ಟುವ ಮಾರ್ಗಸೂಚಿಗಳಲ್ಲಿ ಪ್ರತಿಯೊಬ್ಬರು ತಮ್ಮ ಮೊಬೈಲ್ ಗೆ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡುವುದು ಕೂಡ ಕಡ್ಡಾಯ.
ಇದೀಗ ಸರ್ಕಾರ ಆರೋಗ್ಯ ಸೇತು ಆ್ಯಪ್ ನ ಮೂಲಕೋಡ್ ಅನ್ನು ತೆರೆಯುವುದಾಗಿ ತಿಳಿಸಿದ್ದು, ಈ ಆ್ಯಪ್ ನಲ್ಲಿರುವ ಲೋಪದೋಷಗಳನ್ನು ಕಂಡು ಹಿಡಿದವರಿಗೆ ರೂ. 4 ಲಕ್ಷದ ತನಕ ನಗದು ಬಹುಮಾನ ಕೊಡುವುದಾಾಗಿ
ಕೊಡುವುದಾಗಿ ಘೋಷಿಸಿದೆ.
ಅಪ್ಲಿಕೇಶನ್‌ನಲ್ಲಿ ಯಾವುದೇ ದೋಷಗಳನ್ನು ಯಾರು ಬೇಕಾದರೂ ವರದಿ ಮಾಡಬಹುದು. ಆಸಕ್ತಿವುಳ್ಳವರು ‘ಸೆಕ್ಯುರಿಟಿ ವಲ್ನರಬಿಲಿಟಿ ರಿಪೋರ್ಟ್’ ಎಂಬ ವಿಷಯದೊಂದಿಗೆ(ಸಬ್ಚೆಕ್ಟ್) bugbounty@nic.in ಗೆ ಇಮೇಲ್ ಮಾಡಬಹುದಾಗಿದೆ. ಬಳಕೆದಾರರು ಆರೋಗ್ಯ ಸೇತು ಆ್ಯಪ್ ಸುಧಾರಣೆಗೆ ಸಲಹೆ ಸೂಚನೆ ಕೂಡ ನೀಡಬಹುದಾಗಿದ್ದು, ಕೋಡ್ ಇಂಪ್ರೂವ್ಮೆಂಟ್ ಎಂಬ ವಿಷಯದ ಸಾಲಿನೊಂದಿಗೆ ಇಮೇಲ್ ಕಳುಹಿಸಬಹುದಾಗಿದೆ.
ಆರೋಗ್ಯ ಸೇತು ಆ್ಯಪ್ ನಲ್ಲಿನ ದೋಷಗಳನ್ನು ಕಂಡುಹಿಡಿದವರಿಗೆ ಅಥವಾ ವರದಿ ಮಾಡಿದವರಿಗೆ ₹ 3 ಲಕ್ಷ ನೀಡಲಾಗುವುದು. ಪ್ರತಿ ದೋಷಕ್ಕೆ ₹ 1 ಲಕ್ಷ ನೀಡಲಾಗುವುದು. ಮೂಲ ಕೋಡ್‌ನಲ್ಲಿ ಸುಧಾರಣೆಗಳನ್ನು ಸೂಚಿಸುವವರಿಗೆ ₹ 1 ಲಕ್ಷದವರೆಗೆ ನೀಡಲಾಗುತ್ತದೆ.ಬಗ್ ಬೌಂಟಿ ಕಾರ್ಯಕ್ರಮವು ಮೇ 27 ರಂದು ಪ್ರಾರಂಭವಾಗಿದ್ದು ಜೂನ್ 26 ರವರೆಗೆ ಮುಂದುವರಿಯುತ್ತದೆ.
ಆಸಕ್ತರು ಈ ಅವಧಿಯೊಳಗೆ ತಮ್ಮ ವರದಿಗಳನ್ನು ಸಲ್ಲಿಸಬೇಕಿದ್ದು, ಬಗ್ ಬೌಂಟಿ ಕಾರ್ಯಕ್ರಮದ ಪೂರ್ಣ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಇಲ್ಲಿ ಕಾಣಬಹುದು. https://innovate.mygov.in/aarogyasetu-bug-bounty/#tab1








