ಒಂದೇ ಪಂದ್ಯದಲ್ಲಿ ದ್ರಾವಿಡ್, ಧೋನಿ ದಾಖಲೆ ಉಡೀಸ್
1 min read
ಒಂದೇ ಪಂದ್ಯದಲ್ಲಿ ದ್ರಾವಿಡ್, ಧೋನಿ ದಾಖಲೆ ಉಡೀಸ್ rishabh pant breaks rahul dravid m s dhoni record saaksha tv
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಅಬ್ಬರದ ಬ್ಯಾಟಿಂಗ್ ಮೂಲಕ 85 ರನ್ ಗಳಿಸಿದ್ದಾರೆ.
ಸಂಕಷ್ಟದ ಪರಿಸ್ಥಿತಿಯಲ್ಲಿ ಕ್ರೀಸ್ ಗೆ ಬಂದ ರಿಷಬ್ ಪಂತ್ ನಾಯಕ ಕೆ.ಎಲ್.ರಾಹುಲ್ ಜೊತೆ ಸೇರಿ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಜೊತೆಗೆ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.
ಈ ಪಂದ್ಯದಲ್ಲಿ 85 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ವಿಕೆಟ್ ಕೀಪರ್ ಗರಿಷ್ಠ ರನ್ ಪೇರಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಹಿಂದೆ 2001ರಲ್ಲಿ ರಾಹುಲ್ ದ್ರಾವಿಡ್ ಅವರು ಡರ್ಬಾನ್ ನಲ್ಲಿ 77 ರನ್ ಸಿಡಿಸಿದ್ದರು. 2013ರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಜೋಹಾನ್ಸ್ ಬರ್ಗ್ ನಲ್ಲಿ ಆಕರ್ಷಕ 65 ರನ್ ದಾಖಲಿಸಿದ್ರು. ಇದೀಗ ಈ ದ್ರಾವಿಡ್ ಅವರ ದಾಖಲೆಯನ್ನು ರಿಷಬ್ ಅಳಿಸಿಹಾಕಿದ್ದಾರೆ.