ಐಪಿಎಲ್ ನಲ್ಲಿ ಕಳ್ಳಾಟವಾಡಿ ಡೆಲ್ಲಿ ತಂಡದ ನಾಯಕ ರಿಷಬ್ ಪಂತ್ ಸಿಕ್ಕಿ ಬಿದ್ದಿದ್ದಾರೆ.
ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಮಧ್ಯೆ ಪಂದ್ಯ ನಡೆದಿತ್ತು. ಈ ವೇಳೆ ಟಾಸ್ ಗೆದ್ದು ಲಕ್ನೋ ಮೊದಲು ಬ್ಯಾಟಿಂಗ್ ಗೆ ಮುಂದಾಯಿತು. ಪಂದ್ಯದ 5ನೇ ಓವರ್ ನಲ್ಲಿ ಇಶಾಂತ್ ಶರ್ಮಾ ಎಸೆದ ಚೆಂಡು ಲೆಗ್ ಸೈಡ್ ನತ್ತ ವೈಡ್ ಆಗಿತ್ತು. ಕೂಡಲೇ ಫೀಲ್ಡ್ ಅಂಪೈರ್ ವೈಡ್ ನೀಡಿದ್ದರು. ಆಗ ಪಂತ್ ರಿವ್ಯೂ ಮೊರೆ ಹೋದರು. ಪರಿಶೀಲನೆ ವೇಳೆ ಅದು ವೈಡ್ ಆಗಿತ್ತು. ಆಗ ನಾನು ರಿವ್ಯೂ ಪಡೆದಿಲ್ಲ ಎಂದು ಪಂತ್ ಅಂಪೈರ್ ಜೊತೆ ವಾಗ್ವಾದಕ್ಕೆ ಇಳಿದರು.
ನಾನು ಡಿಆರ್ ಎಸ್ ಪಡೆದಿಲ್ಲ. ರಿವ್ಯೂ ಕಡಿತ ಮಾಡುವಂತಿಲ್ಲ ಎಂಬ ವಾದ ನಡೆಸಿದರು. ಆಗ ರಿಪ್ಲೇನಲ್ಲಿ ರಿಷಭ್ ರಿವ್ಯೂಗೆ ಮನವಿ ಸಲ್ಲಿಸುತ್ತಿರುವುದನ್ನು ತೋರಿಸಲಾಯಿತು. ಬಿಗ್ ಸ್ಕ್ರೀನ್ನಲ್ಲಿ ರಿವ್ಯೂ ಅಪೀಲ್ಗೆ ಮನವಿ ಸಲ್ಲಿಸುತ್ತಿರುವುದು ಕಾಣುತ್ತಿದ್ದಂತೆ ಪಂತ್ ಕಿರಿಕ್ ನಿಲ್ಲಿಸಿ ಕೀಪಿಂಗ್ ಕಡೆಗೆ ನಡೆದರು.
ಇದೀಗ ಮೋಸದಾಟದ ವಿಡಿಯೋ-ಫೋಟೋಗಳು ವೈರಲ್ ಆಗಿದ್ದು, ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಅಂಪೈರ್ ಗೊಂದಲಕ್ಕೆ ತಳ್ಳುವವರನ್ನು ಕಠಿಣ ಕ್ರಮಕ್ಕೆ ಗುರಿಯಾಗಿಸಬೇಕು ಎಂದು ಹಲವರು ಆಗ್ರಹಿಸುತ್ತಿದ್ದಾರೆ.