ಟೀಂ ಇಂಡಿಯಾ ಸೋಲಿಗೆ ಕಾರಣ ಬಿಚ್ಚಿಟ್ಟ ಪಂತ್
ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಟೀಂ ಇಂಡಿಯಾ ಸತತ ಎರಡನೇ ಸೋಲು ಕಂಡಿದೆ.
ಈ ಹಿನ್ನೆಲೆಯಲ್ಲಿ ಹಂಗಾಮಿ ನಾಯಕ ರಿಷಬ್ ಪಂತ್ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಎರಡನೇ ಪಂದ್ಯದ ಮಧ್ಯೆ ಭಾಗದಲ್ಲಿ ನಾವು ಇನ್ನೂ ಹೆಚ್ಚಾಗಿ ಬೌಲಿಂಗ್ ಮಾಡಿದ್ದರೇ ಚೆನ್ನಾಗಿರುತ್ತಿತ್ತು.
ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದುಕೊಂಡು ಕಂ ಬ್ಯಾಕ್ ಮಾಡುತ್ತೇವೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ಐದು ಪಂದ್ಯಗಳ ಟಿ 20 ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಂಡಿದೆ.
ಅದರಂತೆ ಪಕ್ಕಾ ಲೆಕ್ಕಾಚಾರದೊಂದಿಗೆ ಭಾರತಕ್ಕೆ ಬಂದಿರುವ ದಕ್ಷಿಣ ಆಫ್ರಿಕಾ ತಂಡ ದೆಹಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಜಯ ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಿತ್ತು.
ಇದಾದ ಬಳಿಕ ಇದೀಗ ಕಟಕ್ ನಡೆದ ಪಂದ್ಯದಲ್ಲಿ ಎರಡನೇ ಟಿ 20 ಪಂದ್ಯದಲ್ಲೂ ಕೂಡ ಆಫ್ರಿಕಾ ತಂಡ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು.
ಈ ಗುರಿ ಬೆನ್ನಟ್ಟಿದ ಸೌತ್ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು.
ಈ ಗೆಲುವಿನೊಂದಿಗೆ ಸೌತ್ ಆಫ್ರಿಕನ್ ತಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು.
ಈ ಸೋಲು ರಿಷಬ್ ಪಂತ್ ಗೆ ಸಾಮಾನ್ಯವಾಗಿ ನಿರಾಸೆಯನ್ನುಂಟು ಮಾಡಿದೆ. ಕೆ.ಎಲ್.ರಾಹುಲ್ ಇಂಚೂರಿಯಾದ ಕಾರಣ ಪಂತ್ ಗೆ ಟೀಂ ಇಂಡಿಯಾ ನಾಯಕತ್ವ ಪಟ್ಟ ಸಿಕ್ಕಿದೆ.

ಹೀಗಾಗಿ ಸಿಕ್ಕ ಅವಕಾಶದಲ್ಲಿ ನಾಯಕರಾಗಿ ಮಿಂಚಬೇಕು ಎಂದು ಕೊಂಡಿದ್ದ ಪಂತ್ ಗೆ ಕಳೆದ ಎರಡು ಪಂದ್ಯಗಳಲ್ಲಿ ನಿರಾಸೆ ಎದುರಾಗಿದೆ.
ಇನ್ನು ಕಟಕ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತ ಬಳಿಕ ಮಾತನಾಡಿದ ರಿಷಬ್ ಪಂತ್, ನಾವು 10 ರಿಂದ 15 ರನ್ ಗಳನ್ನು ಹೆಚ್ಚಾಗಿ ಗಳಿಸಬೇಕಿತ್ತು.
ಮೊದಲ ಏಳರಿಂದ ಎಂಟು ಓವರ್ ಗಳಲ್ಲಿ ಭುವನೇಶ್ವರ್ ಕುಮಾರ್ ಸೇರಿದಂತೆ ವೇಗದ ಬೌಲರ್ ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು.
ಆದ್ರೆ ಆ ನಂತರ ನಾವು ಪಂದ್ಯದಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಸೆಕೆಂಡ್ ಆಫ್ ನಲ್ಲಿ ವಿಕೆಟ್ ಬೇಕಿದ್ದ ಸಂದರ್ಭದಲ್ಲಿ ನಮಗೆ ವಿಕೆಟ್ ಸಿಗಲಿಲ್ಲ.
ಕ್ಲಾಸೆನ್, ಬವುಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ನಾವು ಇನ್ನೂ ಸ್ವಲ್ಪ ಚೆನ್ನಾಗಿ ಬೌಲಿಂಗ್ ಮಾಡಿದ್ದರೇ ಒಳ್ಳೆ ರಿಸಲ್ಟ್ ಬರುತ್ತಿತ್ತು.
ಇನ್ನು ನಾವು ಇನ್ನುಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿದ್ದೇವೆ ಎಂದು ಪಂತ್ ಹೇಳಿದ್ದಾರೆ.