Rishabh Shetty : ಪವನ್ ಕಲ್ಯಾಣ್ ರೀತಿಯೇ ರಾಜಕೀಯಕ್ಕೆ ರಿಷಭ್ !!! ಇಬ್ಬರಲ್ಲೂ ಇದೇ ಕಾಮನ್ ಪಾಯಿಂಟ್…
ಪವನ್ ಕಲ್ಯಾಣ್, ತೆಲುಗು ಚಿತ್ರರಂಗದಲ್ಲಿ ಈ ಹೆಸರಿಗೊಂದು ಕ್ರೇಜ್ ಇದೇ. ಆತನ ಕೆರಗೆ ಹೂಗೊಟ್ಟು ಸಾಗರೋಪಾದಿಯ ಬರುವಂತ ಜನಾಭಿಮಾನವಿದೆ. ಹಿಟ್ ಆರ್ ಫ್ಲಾಫ್ ಇದಕ್ಕೆಲ್ಲ ತಲೆಕಡೆಸಿಕೊಳ್ಳದೇ ತನ್ನದೇ ದಾರಿಯಲ್ಲಿ ಸಾಗುವ ಈ ನಟ ಇದೀಗ ರಾಜಕೀಯದಲ್ಲಿ ತನ್ನ ಹೆಜ್ಜೆ ಊರಲು ಟೊಂಕ ಕಟ್ಟಿ ನಿಂತಿದ್ದಾರೆ.
ಇದೀಗ ನಟ ಪವನ್ ಕಲ್ಯಾಣ್ ಜೊತೆಗೆ ಹೋಲಿಸಿ ನಟ ರಿಷಬ್ ಶೆಟ್ಟಿ ಸಹ ಚರ್ಚೆಗೆ ಬಂದಿದ್ದಾರೆ. ಇವರಿಬ್ಬರ ಸಿನಿಮಾ ಜರ್ನಿ ಒಂದೇ ರೀತಿ ಕಾಣಿಸುತ್ತಿರುವುದರಿಂದ ರಿಷಭ್ ಶೆಟ್ಟಿ ಸಹ ನಟ ಪವನ್ ಕಲ್ಯಾಣ್ ರೀತಿ ರಾಜಕೀಯಕ್ಕೆ ಎಂಟ್ರಿ ಕೊಡಬಹುದು ಎಂದು ಕನ್ನಡ ತೆಲುಗು ಕೆಲ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಇವರಿಬ್ಬರಿಗೂ ಸಮೀಕರಿಸಬಲ್ಲ ಆ ನಡೆ ಯಾವುದಪ್ಪ ಅಂದರೇ ಅದು ಸಿನಿಮಾ ನಿರ್ದೇಶನ. ಹೌದು.. ನಟ ಪವನ್ ಕಲ್ಯಾಣ್ ನಾಯಕ ನಟನಾಗಿ ನಟಿಸುತ್ತಲೇ ನಿರ್ದೇಶನಕ್ಕೂ ಕಾಲಿಟ್ಟಿದ್ದರು. ಇದೇ ರೀತಿ ರಿಷಬ್ ಶೆಟ್ಟಿ ಸಹ ನಿರ್ದೇಶನದ ಜೊತೆ ಜೊತೆಗೆ ನಾಯಕ ನಟನಾಗಿಯೂ ತಮ್ಮ ಛಾಪೂ ಮೂಡಿಸಿದ್ದಾರೆ. ಇವರಿಬ್ಬರೂ ಆಕ್ಷನ್ ಕಟ್ ಹೇಳಲಿಕ್ಕೂ ಸೈ ಅಂತೇಯೇ ನಟಿಸಲೂ ಸೈ ಎಂಬುದನ್ನ ತೋರಿಸಿದ್ದಾರೆ.
ಇದೀಗ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಂತೆಯೇ ನಟ ರಿಷಬ್ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಇಬ್ಬರೂ ನಟರ ಕಾಮನ್ ಪಾಂಟಿಟ್ ಗಳನ್ನ ಮುಂದಿಟ್ಟು ಇಬ್ಬರೂ ಅಭಿಮಾನಿಗಳು ಹೋಲಿಕೆ ಮಾಡುತ್ತಿದ್ದಾರೆ…
Rishabh Shetty: Rishabh is into politics like Pawan Kalyan!!! This is the common point in both of them…