ಪಾಟ್ನಾ: ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಬೆಂಗಾವಲು ಪಡೆಯ ವಾಹನ ಅಪಘಾತವಾಗಿರುವ ಘಟನೆ ನಡೆದಿದೆ.
ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಾಹನದ ಚಾಲಕ ಮೊಹಮ್ಮದ್ ಹಲೀಂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 6 ಜನ ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೇ, ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನಾಗರಿಕರಿಗೆ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಸದ್ಯ ತೇಜಸ್ವಿ ಯಾದವ್ ರಾಜ್ಯಾದ್ಯಂತ ‘ಜನ್ ವಿಶ್ವಾಸ್ ಯಾತ್ರೆ ಕೈಗೊಂಡಿದ್ದಾರೆ. ಈ ವೇಳೆ ಬೆಂಗಾವಲು ಪಡೆಯಲ್ಲಿ ಸ್ಕೌಟ್ ವಾಹನ ಕೂಡ ಇತ್ತು. ನಾಲ್ಕು ಪಥದ ವಾಹನ ರಾಂಗ್ ಸೈಡ್ ಗೆ ಹೋಗಿತ್ತು. ಈ ವೇಳೆ ಎದುರು ಬರುತ್ತಿದ್ದ ವಾಹನ ಡಿಕ್ಕಿಯಾಗಿ ಈ ಘಟನೆ ನಡೆದಿದೆ.