Rohit-sharma | ದಿನೇಶ್ ಮೇಲೆ ರೋಹಿತ್ ಶರ್ಮಾ ಗರಂ
ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟಿ 20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು. ಭಾರತದ ಪರ ಹಾರ್ದಿಕ್ ಪಾಂಡ್ಯ 71 ಅಜೇಯ 71 ರನ್, ಕೆ.ಎಲ್.ರಾಹುಲ್ 55 ರನ್, ಸೂರ್ಯ ಕುಮಾರ್ ಯಾದವ್ 46 ರನ್ ಗಳಿಸಿದರು.
ಇತ್ತ ಆಸ್ಟ್ರೇಲಿಯಾ ತಂಡ 19.2 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಸೀಸ್ ಪರ ಕ್ಯಾಮರೋನ್ ಗ್ರಿನ್ 61 ರನ್, ಮ್ಯಾಥ್ಯೂ ವೇಡ್ 45 ರನ್ ಗಳಿಸಿದರು. ಉಭಯ ತಂಡಗಳ ನಡುವಿನ ಪಂದ್ಯ ಮುಂದಿನ ಶುಕ್ರವಾರ ನಡೆಯಲಿದೆ.
ಈ ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ಇನ್ನಿಂಗ್ಸ್ ನಲ್ಲಿ ಒಂದು ಆಸಕ್ತಿದಾಯಕ ಘಟನೆ ನಡೆಯಿತು. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮೇಲೆ ಮೈದಾನದಲ್ಲಿಯೇ ಕೋಪಗೊಂಡರು.
ಮ್ಯಾಚ್ ರಿವ್ಯೂ ವಿಷಯದಲ್ಲಿ ಟೀಂ ಇಂಡಿಯಾ ಕೊಂಚ ತಡ ಮಾಡಿದ ಪರಿಣಾಮ ಆಸೀಸ್ ಬ್ಯಾಟರ್ ಗ್ರಿನ್ ಉಳಿದುಕೊಂಡರು.
ಚಹಾಲ್ ಬೌಲಿಂಗ್ ನಲ್ಲಿ ಗ್ರಿನ್ ಸ್ವೀಪ್ ಶಾಟ್ ಗೆ ಪ್ರಯತ್ನಿಸಿದರು. ಆದ್ರೆ ಬಾಲ್ ಪ್ಯಾಡ್ ಗೆ ಟಚ್ ಆಗಿದ್ದು, ಬೌಲರ್, ಕೀಪರ್ ಔಟ್ ಗಾಗಿ ಅಪೀಲ್ ಮಾಡಿದರು. ಆ ಬಳಿಕ ಟಿವಿ ರಿವ್ಯೂನಲ್ಲಿ ಬಾಲ್ ವಿಕೆಟ್ ಗೆ ಟಚ್ ಆಗಿದ್ದು ಗೊತ್ತಾಯಿತು.
ಇದಾದ ನಂತರ 12 ನೇ ಓವರ್ ನಲ್ಲಿ ಉಮೇಶ್ ಬೌಲಿಂಗ್ ನಲ್ಲಿ ಸ್ಮಿತ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆಗ ಬಾಲ್ ಬ್ಯಾಟ್ ಗೆ ಟಚ್ ಆಗುತ್ತಾ ದಿನೇಶ್ ಕೈ ಸೇರಿತು. ಕೂಡಲೇ ಕಾರ್ತಿಕ್ ಔಟ್ ಗೆ ಮನವಿ ಮಾಡಿದ್ರೂ ಅಂಪೈರ್ ನಾಟೌಟ್ ಎಂದರು. ಟೀಂ ಇಂಡಿಯಾ ರಿವ್ಯೂ ತೆಗೆದುಕೊಂಡು ಯಶ ಸಾಧಿಸಿತು.
ಮ್ಯಾಕ್ಸ್ ವೆಲ್ ವಿಚಾರದಲ್ಲೂ ಇದೇ ಪುನರಾವರ್ತಿಸಿತು. ಆಗ ರೋಹಿತ್ ಶರ್ಮಾ ನಿನಗೆ ಎಷ್ಟು ಸಾರಿ ಹೇಳಬೇಕು, ಗಟ್ಟಿಯಾಗಿ ಅಪೀಲ್ ಮಾಡುವಂತೆ ಎಂದು ತಮಾಷೆಯಾಗಿ ರೋಹಿತ್ ದಿನೇಶ್ ಕಾರ್ತಿಕ್ ಮುಖ ಹಿಡಿದುಕೊಂಡರು. ಇದಕ್ಕೆ ಸಂಬಂದಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.