Rohit Shrama | ಮುಂಬೈ ನಾಯಕತ್ವಕ್ಕೆ ರೋಹಿತ್ ಗುಡ್ ಬೈ..?

1 min read
ipl-rohit-sharma-worst-batting-record saaksha tv

ipl-rohit-sharma-worst-batting-record saaksha tv

ಮುಂಬೈ ನಾಯಕತ್ವಕ್ಕೆ ರೋಹಿತ್ ಗುಡ್ ಬೈ..?

ಇಂಡಿಯನ್ ಪ್ರಿಮಿಯರ್ ಲೀಗ್ ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿದ್ದಾರಾ..? ಎಂಬ ಪ್ರಶ್ನೆ ಸದ್ಯ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ. ಜೊತೆಗೆ ಈ ವಿಚಾರವಾಗಿ ಕ್ರಿಕೆಟ್ ಪಂಡಿತರು ಕೂಡ ಚರ್ಚೆ ನಡೆಸುತ್ತಿದ್ದಾರೆ.

ಇದಕ್ಕೆ ಕಾರಣ  ಸ್ವತಃ ರೋಹಿತ್ ಶರ್ಮಾ ಅವರೇ ನೀಡಿರುವ ಹೇಳಿಕೆ…!!

rohit sharma goodbye to mumbai indians captaincy  saaksha tv

ಹೌದು..! ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರೋಹಿತ್ ಶರ್ಮಾ ಲಕ್ಕಿ ಕ್ಯಾಪ್ಟನ್. ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಬಾರಿ ಐಪಿಎಲ್ ಟ್ರೋಪಿಯನ್ನ ಎತ್ತಿ ಹಿಡಿದಿದ್ದಾರೆ. ಜೊತೆಗೆ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಾ ಐಪಿಎಲ್ ನಲ್ಲಿ ಮುಂಬೈಗೆ ಅತಿ ಹೆಚ್ಚು ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ನಾಯಕರಾಗಿದ್ದಾರೆ.  

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡ ಎದುರಾಳಿಗಳ ಮೇಲೆ ಎಷ್ಟರ ಮಟ್ಟಿಗೆ ಸವಾರಿ ಮಾಡಿದೆ ಅಂದ್ರೆ, ಮುಂಬೈ ವಿರುದ್ಧದ ಪಂದ್ಯ ಅಂದ್ರೆ ತುಸು ಹೆಚ್ಚಿನ ಪ್ಲಾನ್ ಗಳನ್ನ ಎದುರಾಳಿಗಳು ಮಾಡಿಕೊಳ್ಳುತ್ತಿದ್ದರು. ಬ್ಯಾಟಿಂಗ್, ಬೌಲಿಂಗ್ ಹೀಗೆ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಪ್ಲಸ್ ಪಾಯಿಂಟ್ ಅಂತಾನೇ ಹೇಳಬಹುದು. ಮೈದಾನದಲ್ಲಿ ಕಾಮ್ ಅಂಡ್ ಕೂಲ್ ಆಗಿದ್ದ ರೋಹಿತ್, ಎದುರಾಳಿ ತಂಡವನ್ನ ಸೋಲಿನ ಚಕ್ರಕ್ಕೆ ನೂಕಿ ಪಂದ್ಯವನ್ನ ಗೆಲ್ಲುತ್ತಿದ್ದರು.

rohit sharma goodbye to mumbai indians captaincy  saaksha tv

ಆದ್ರೆ ಇದೀಗ ರೋಹಿತ್ ಶರ್ಮಾ, ಬದಲಾದಂತೆ ಕಾಣುತ್ತಿದೆ. ಟೀಂ ಇಂಡಿಯಾದ ನಾಯಕರಾದ ಬಳಿಕ ರೋಹಿತ್ ಶರ್ಮಾ ಕಂಪ್ಲೀಟ್ ಚೇಂಜ್ ಆಗಿದ್ದಾರೆ ಅನ್ನೋದು ಹಲವರ ವಾದವಾಗಿದೆ. ಯಾಕಂದರೆ ಈ ಹಿಂದೆ ಎಂತಹ ಒತ್ತಡದ ಸಂದರ್ಭ ಇದ್ದರೂ ಕೂಲ್ ಆಗಿ ಇರುತ್ತಿದ್ದ ರೋಹಿತ್ ಶರ್ಮಾ, ಈಗ ಮೈದಾನದಲ್ಲಿಯೇ ತಮ್ಮ ಕೋಪವನ್ನ ತೋರಿಸಿಕೊಳ್ಳುತ್ತಿದ್ದಾರೆ. ತಮ್ಮ ತಂಡದ ಆಟಗಾರರ ವಿರುದ್ಧವೇ ರೋಹಿತ್ ಮುನಿಸಿಕೊಳ್ಳುತ್ತಿದ್ದಾರೆ.

ಇದಕ್ಕೆ ತಾಜಾ ಉದಾಹರಣೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಫಲಿತಾಂಶ..!! ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ದಯನೀಯ ಸೋಲು ಕಂಡಿದೆ. ಇದು ರೋಹಿತ್ ಶರ್ಮಾಗೆ ಪಿತ್ತನೆತ್ತಿಗೇರುವಂತೆ ಮಾಡಿದೆ. ಯಾಕಂದ್ರೆ ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಈವರೆಗೂ ಒಂದೇ ಒಂದು ಪಂದ್ಯವನ್ನ ಗೆದ್ದುಕೊಂಡಿಲ್ಲ. ಆಡಿದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ರೋಹಿತ್ ಶರ್ಮಾ ತಂಡದ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.

rohit sharma goodbye to mumbai indians captaincy  saaksha tv

ಪ್ರತಿ ಬಾರಿ ಸೋತ ನಾಯಕನ ಸ್ಥಾನದಲ್ಲಿರಲು ನನಗೆ ಇಷ್ಟ ಇಲ್ಲ ಎಂದಿದ್ದಾರೆ. ರೋಹಿತ್ ಶರ್ಮಾರ ಈ ಹೇಳಿಕೆ ಸಾಕಷ್ಟು ಅನುಮಾನಗಳಿಗೆ ನಾಂದಿಯಾಡಿದೆ. ಅದರಲ್ಲೂ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಲಿದ್ದಾರಾ ಎಂಬ ಚರ್ಚೆಗೆ ಕಾರಣವಾಗಿದೆ.   rohit sharma goodbye to mumbai indians captaincy

        

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd