Rohit sharma – ಟಿ 20ಯಲ್ಲಿ ಹಿಟ್ ಮ್ಯಾನ್ ದಾಖಲೆ : ಟಿ 20ಯ ಸಿಕ್ಸರ್ ಮ್ಯಾನ್
ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟಿ 20 ಮಾದರಿಯಲ್ಲಿ ಸಾಧಿಸಿರುವ ದಾಖಲೆಗಳ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ.
ಈ ನಡುವೆ ಮೊಹಾಲಿಯಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆಯುತ್ತಿರುವ ಮೊದಲ ಟಿ 20 ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಟಿ 20 ಕ್ರಿಕೆಟ್ ನಲ್ಲಿ 172 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಸಿಕ್ಸರ್ ಗಳನ್ನು ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಮಾರ್ಟಿನ್ ಗಪ್ಟಿಲ್ ಜೊತೆಗೆ ಮೊದಲ ಸ್ಥಾನದಲ್ಲಿದ್ದಾರೆ.
ತಮ್ಮ 15 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ನಲ್ಲಿ ಹಿಟ್ ಮ್ಯಾನ್ ಇಲ್ಲಿಯವರೆಗೂ 3620 ರನ್ ಗಳನ್ನು ಸಾಧಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು, 28 ಅರ್ಧಶತಕಗಳಿವೆ.
ಇನ್ನು ಟಿ 20 ಯಲ್ಲಿ ಹಿಟ್ ಮ್ಯಾನ್ ಅತ್ಯಧಿಕ ಸ್ಕೋರ್ 118. ಅದೇ ರೀತಿ ಈ ಮಾದರಿಯಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲಿ ರೋಹಿತ್ ಶರ್ಮಾ ಈಗಾಗಲೇ 323 ಬೌಂಡರಿಗಳನ್ನು ಸಾಧಿಸಿದ್ದಾರೆ.
172 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಸದ್ಯ ರೋಹಿತ್ ಶರ್ಮಾ 172 ಸಿಕ್ಸರ್ ಗಳನ್ನು ಬಾರಿಸಿದ್ದರೇ ಮಾರ್ಟಿನ್ ಗಪ್ಟಿಲ್ 172 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ವಿಂಡೀಸ್ ಬ್ಯಾಟರ್ ಕ್ರಿಸ್ ಗೇಲ್ 124, ಇಯಾನ್ ಮಾರ್ಗನ್ 120, ಆರೋನ್ ಫಿಂಚ್ 117 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ.