Rohit sharma | ನಮ್ಮ ಬ್ಯಾಟಿಂಗ್ ಕೆಟ್ಟದಾಗಿತ್ತು
ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್ ಗಳಿಂದ ಸೋಲುಕಂಡಿದೆ.
ಲಾರ್ಡ್ಸ್ ಅಂಗಳದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.
ಈ ಪಂದ್ಯದಲ್ಲಿ ಗೆಲುವು ಕಾಣುವ ಮೂಲಕ ಇಂಗ್ಲೆಂಡ್ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 1-1 ರ ಮುನ್ನಡೆ ಸಾಧಿಸಿದೆ.
ಹೀಗಾಗಿ ಮೂರನೇ ಪಂದ್ಯದತ್ತ ಎಲ್ಲರ ಚಿತ್ತನೆಟ್ಟಿದೆ.
ಇನ್ನು ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ನಮ್ಮ ಬೌಲಿಂಗ್ ಆರಂಭದಲ್ಲಿ ಚೆನ್ನಾಗಿತ್ತು.
![rohit-sharma-says-we-didn-not-bat-well saaksha tv](http://saakshatv.com/wp-content/uploads/2022/07/rohit-shikhar-300x201.jpg)
ಆದ್ರೆ ಮೊಯಿನ್ ಅಲಿ, ವಿಲ್ಲೆ ಉತ್ತಮವಾದ ಜೊತೆಯಾಟವನ್ನು ನಮೂದು ಮಾಡಿದರು.
ಹಾಗಂತ ಇಂಗ್ಲೆಂಡ್ ನೀಡಿದ ಟಾರ್ಗೆಟ್ ದೊಡ್ಡದಾಗಿರಲಿಲ್ಲ.
ನಿಜ ಹೇಳಬೇಕೆಂದರೇ ನಮ್ಮ ಬ್ಯಾಟಿಂಗ್ ಈ ದಿನ ಕೆಟ್ಟದಾಗಿತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಪಿಚ್ ನಮ್ಮನ್ನ ಗೊಂದಲಕ್ಕೆ ದೂಡಿತ್ತು. ಹಳೆಯದಾದಂತೆ ಪಿಚ್ ಬ್ಯಾಟಿಂಗ್ ಗೆ ಅನುಕೂಲಕರವಾಗಿರುತ್ತದೆ ಎಂದುಕೊಂಡಿದ್ದೇವು.
ಆದ್ರೆ ಆ ರೀತಿ ಆಗಲಿಲ್ಲ. ಟಾಪ್ ಆರ್ಡರ್ ನಲ್ಲಿ ಒಬ್ಬರೆಂದರೇ ಒಬ್ಬರು ಸ್ಥಿರವಾಗಿ ಆಡಲು ಸಾಧ್ಯವಾಗಲಿಲ್ಲ.
ಮ್ಯಾಂಚಸ್ಟರ್ ಮ್ಯಾಚ್ ಗಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಟೀಂ ಇಂಡಿಯಾ ನಾಯಕ ಹೇಳಿದ್ದಾರೆ.