ನಟಿ ರೋಜಾ ಇದ್ದ ವಿಮಾನ ತುರ್ತು ಲ್ಯಾಂಡ್
ತಾಂತ್ರಕ ದೋಷದಿಂದ ಬೆಂಗಳೂರಿಗೆ ಬಂದಿಳಿದ ವಿಮಾನ
ಸರಿಯಾದ ಮಾಹಿತಿ ನೀಡದೇ ಗೊಂದಲ ಸೃಷ್ಟಿಸಿದ ವಿಮಾನ ಸಿಬ್ಬಂದಿ
ಸಾಮಾಜಿಕ ಜಾಲತಾಣದಲ್ಲಿ ನಟಿ ರೋಜಾ ಆಕ್ರೋಶ
ಬೆಂಗಳೂರು : ಖ್ಯಾತ ದಕ್ಷಿತ ಭಾರತೀಯ ನಟಿ ಹಾಗೂ ಆಂಧ್ರಪ್ರದೇಶದ ಶಾಸಕಿಯಾಗಿರುವ ರೋಜಾ ಅವರಿದ್ದ ವಿಮಾನವು ತುರ್ತು ಲ್ಯಾಂಡ್ ಆಗಿದೆ..
ವಿಮಾನವು ತಾಂತ್ರಿಕ ದೋಷದಿಂದ ಬೆಂಗಳುರಿನ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ವಿಮಾನದಲ್ಲಿ ರೋಜಾ, ಟಿಡಿಪಿ ಶಾಸಕ ವೇಗುಳ್ಳಿ ಜೋಗೇಶ್ವರ ರಾವ್, ಮಾಜಿ ಸಚಿವ ಯನಮ ರಾಮಕೃಷ್ಣಡು ಸೇರಿಂದತೆ 70 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ..
ಇಂಡಿಗೋ ವಿಮಾವು ನಿನ್ನೆ ಬೆಳಗ್ಗೆ ರಾಜಮಂಡ್ರಿಯಿಂದ ಹೊರಟಿದ್ದು, ಬೆಳಗ್ಗೆ 10.30ಕ್ಕೆ ತಿರುಪತಿ ತಲುಪಬೇಕಿತ್ತು. ಆದ್ರೆ ತಾಂತ್ರಿಕ ದೋಷದಿಂದಾಗಿ ತುರ್ತು ಲ್ಯಾಂಡ್ ಆಗಬೇಕಾಯಿತು.. ಈ ಹಿನ್ನೆಲೆ ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್ ಮಡಲಾಗಿದೆ.
ಇನ್ನೂ ತುರ್ತು ಲ್ಯಾಂಡ್ ಆದ ನಂತರ , 4ಗಂಟೆಗಳಾದರೂ ಪ್ರಯಾಣಿಕರನ್ನು ವಿಮಾನದಲ್ಲಿಯೇ ಕಾಯಿಸಲಾಗಿದೆ.. ಸೂಕ್ತ ಮಾಹಿತಿ ನೀಡದೆ ಗೊಂದಲ ಸೃಷ್ಟಿಮಾಡಲಾಗಿದೆ ಎನ್ನಲಾಗಿದೆ.. ಆ ಬಳಿಕ ರಸ್ತೆ ಮಾರ್ಗವಾಗಿ ಕೆಲ ಪ್ರಯಾಣಿಕರು ತಿರುಪತಿಗೆ ತೆರಳಿದ್ದಾರೆ.
ಈ ಬಗ್ಗೆ ರೋಜಾ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. 4 ಗಂಟೆಗಳಾದರೂ ಪ್ರಯಾಣಿಕರಿಗೆ ಯಾವುದೇ ಮಾಹಿತಿ ನೀಡದೆ ಗೊಂದಲ ವಾತಾವರಣ ನಿರ್ಮಾಣವಾಗಿತ್ತು.
ಮೊದಲು ಹವಾಮಾನ ವೈಪರೀತ್ಯ ಎಂದರು. ನಂತರ ತಾಂತ್ರಿಕ ದೋಷ ಎಂದರು. ನಾನು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, 5 ಗಂಟೆ ಒಂದೇ ಕಡೆ ಕುಳಿತು ಆಯಾಸವಾಗಿದೆ. ವಿಮಾನ ಕಂಪನಿ ಪ್ರಯಾಣಿಕರ ಕಾಳಜಿ ವಹಿಸಿಲ್ಲ ಎಂದು ಆಕ್ರೋಶ ಹೊರಹಾಕಿದ್ರು..