Kalaburagi | ಕಲಬುರಗಿಯಲ್ಲಿ ರೊಟ್ಟಿ ಜಾತ್ರೆ
ಕಲಬುರಗಿ : ಕೋಮು ಸೌಹಾರ್ದತೆ ಸಾರುವ ಕಲಬುರಗಿ ವಿಶ್ವರಾಧ್ಯ ತಪೋವನ ಮಠದ ಜಾತ್ರೆ ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ನಡೆಯಿತು. ಈ ಜಾತ್ರೆಯನ್ನ ರೊಟ್ಟಿ ಜಾತ್ರೆ ಎಂದೂ ಕರೆಯುತ್ತಾರೆ.
ಲಿಂಗೈಕ್ಯ ಶ್ರೀ ಸಿದ್ದರಾಮ ಶಿವಯೋಗಿಗಳ 72 ನೇ ಪುಣ್ಯಸ್ಮರಣೆ ನಿಮಿತ್ತ ಭಕ್ತಿ, ಭಾವ ವೈಭವದಿಂದ ರೊಟ್ಟಿ ಜಾತ್ರೆ ನಡೆದಿದೆ.
ರೊಟ್ಟಿ, ಭಜ್ಜಿ ಪಲ್ಯ ಜಾತ್ರೆಯಲ್ಲಿ ಕಲಬುರಗಿ ಸೇರಿದಂತೆ ಅಕ್ಕ ಪಕ್ಕದ ಸಾವಿರಾರು ಭಕ್ತರು ಪಾಲ್ಗೊಂಡಿದ್ಧಾರೆ.
ಕೇವಲ ಖಡಕ್ ರೊಟ್ಟಿ, ಎಲ್ಲಾ ತರಹದ ಕಾಳು ತರಕಾರಿಗಳಿಂದ ಸಿದ್ದಪಡಿಸುವ ಭಜ್ಜಿ ಪಲ್ಯ ಜಾತ್ರೆಯ ವಿಶೇಷವಾಗಿದೆ.
24 ಗಂಟೆಗಳ ಕಾಲ ನಡೆಯುವ ರೊಟ್ಟಿ ಜಾತ್ರೆಯಲ್ಲಿ ಸಾವಿರಾರು ಭಕ್ತಗಣ ಪಾಲ್ಗೊಂಡು ರೊಟ್ಡಿ, ಭಜ್ಜಿ ಪಲ್ಯ ಪ್ರಸಾದ ಸವಿದು ವಿಶ್ವರಾಧ್ಯ, ಸಿದ್ದರಾಮ ಶಿವಯೋಗಿಗಳ ಕೃಪೆಗೆ ಪಾತ್ರರಾದರು.
ಈ ವರ್ಷ 32 ಕ್ವಿಂಟಲ್ ಸಜ್ಜೆ ರೊಟ್ಟಿ, 10 ಕ್ವಿಂಟಲ್ ಬಿಳಿ ಜೊಳ ರೊಟ್ಟಿಗಳನ್ನ ಸಿದ್ದಪಡಿಸಲಾಗಿದೆ