ತುಮಕೂರು: ನಗರದ ಬಂಡಿಮನೆ ಚೌಟ್ರಿ ಹತ್ತಿರ ಕುಖ್ಯಾತ ರೌಡಿಶೀಟರ್ ಹತ್ಯೆಯಾಗಿರುವ ಘಟನೆ ನಡೆದಿದೆ.
ಮಾರುತಿ ಅಲಿಯಾಸ್ ಪೊಲಾರ್ಡ್(34) ಸಾವನ್ನಪ್ಪಿದ ದುರ್ದೈವಿ. ಕೊಡಿಗೇನಹಳ್ಳಿ (Kodigenahalli) ಠಾಣಾ ವ್ಯಾಪ್ತಿಯ ರೌಡಿಶೀಟರ್(Rowdy Sheeter) ಆಗಿದ್ದ ಮಾರುತಿ, ಹಟ್ಟಿ ಮಂಜ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಅಲ್ಲದೇ, ಸ್ನೇಹಿತರ ಗ್ಯಾಂಗ್ ಜೊತೆ ಕುಡಿದು ಗಲಾಟೆ ಕೂಡ ಮಾಡಿಕೊಂಡಿದ್ದ ಎನ್ನಲಾಗಿದ್ದು, ಈ ಕಾರಣಕ್ಕಾಗಿ ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಎಎಸ್ಪಿ ಮರಿಯಪ್ಪ ಹಾಗೂ ಡಿವೈಎಸ್ಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.