ಆರ್ ಸಿಬಿಯ ರಿಟೈನ್ ಆಟಗಾರರು ಯಾರು..?

1 min read
RCB

ಆರ್ ಸಿಬಿಯ ರಿಟೈನ್ ಆಟಗಾರರು ಯಾರು..?

ಆರ್ ಸಿಬಿಯ ರಿಟೈನ್ ಆಟಗಾರರು ಯಾರು..? ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಲ್ಲಿ ಮೂಡಿರುವ ಪ್ರಶ್ನೆ ಇದು. Royal Challengers Bangalore

ಯಾಕಂದ್ರೆ ಈ ಹಿಂದೆ ಆರ್ ಸಿಬಿ ರಿಟೈನ್ ಆಟಗಾರರು ಅಂದರೇ ಎಲ್ಲರಿಗೂ ಒಂದು ಕ್ಲಾರಿಟಿ ಸಿಗುತ್ತಿತ್ತು. ಆದ್ರೆ ಈ ಬಾರಿ ಎಲ್ಲವೂ ಬದಲಾಗಿದೆ.

ಹೊಸ ನಾಯಕನ ಅವಶ್ಯಕತೆ ತಂಡಕ್ಕಿದೆ. ಜೊತೆಗೆ ಯುನಿವರ್ಸಲ್ ಡಾಲಿರ್ಂಗ್ ಎ ಬಿ ಡಿ ವಿಲಿಯರ್ಸ್ ಅವರ ಸ್ಥಾನ ತುಂಬಬಲ್ಲ ಆಟಗಾರನೂ ತಂಡಕ್ಕೆ ಬೇಕು.

ಈ ಕಾರಣಕ್ಕಾಗಿ ಈ ಬಾರಿಯ ಮೆಗಾ ಹರಾಜು ಹಾಗೂ ಆರ್ ಸಿಬಿಯ ರಿಟೈನ್ ಆಟಗಾರರು ಯಾರು ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.

ಇನ್ನು ಮೆಗಾ ಹರಾಜುಗು ಮುನ್ನ ಎಲ್ಲಾ ಫ್ರಾಂಚೈಸಿಗಳು ತನ್ನ ತಂಡದ ರಿಟೈನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕು.

Royal Challengers Bangalore saaksha tv

ಈಗಾಗಲೇ ಮುಂಬೈ ಇಂಡಿಯನ್ಸ್ ಮತ್ತು ಸಿಎಸ್ ಕೆ ಯಂತಹ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಿವೆ.

ಇದೀಗ ಆರ್ ಸಿಬಿ ತನ್ನ ರಿಟೈನ್ ಆಟಗಾರರ ಪಟ್ಟಿ ರಿಲೀಸ್ ಮಾಡಿದ್ದು, ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ ಜೊತೆಗೆ ಆಸೀಸ್ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಆರ್ ಸಿಬಿಯಲ್ಲಿ ಉಳಿಯಲಿದ್ದಾರೆ.

ಈ ಇಬ್ಬರು ಆಟಗಾರರನ್ನು ಬಿಟ್ಟರೇ ಇನ್ನುಳಿದ ಯಾವ ಆಟಗಾರರನ್ನೂ ಆರ್ ಸಿಬಿ ಉಳಿಸಿಕೊಂಡಿಲ್ಲ.

ಇದನ್ನು ಆಗಮಿಸಿದ್ರೆ ಆರ್ ಸಿಬಿ ಫ್ರಾಂಚೈಸಿ ಈ ಬಾರಿ ಹೊಸ ತಂಡವನ್ನು ಕಟ್ಟಲು ಮುಂದಾಗಿರೋದು ತಿಳಿಯುತ್ತಿದೆ.

ಮುಖ್ಯವಾಗಿ ಕನ್ನಡಿಗ ದೇವದತ್ ಪಡಿಕಲ್, ಯಜುವೇಂದ್ರ ಚಹಾಲ್, ಸಿರಾಜ್ ಅವರನ್ನು ಆರ್ ಸಿಬಿ ಉಳಿಸಿಕೊಳ್ಳಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು.

ಆದ್ರೆ ಆರ್ ಸಿಬಿ ಇದೀಗ ಕೇವಲ ಇಬ್ಬರನ್ನು ಮಾತ್ರ ಉಳಿಸಿಕೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd