ರಾರಾ ಕ್ಷೇತ್ರದಲ್ಲಿ ಕಮಲಕ್ಕೆ ಮುನ್ನಡೆ : ಶಿರಾದಲ್ಲಿ ಭಾರಿ ಪೈಪೋಟಿ
ತುಮಕೂರು : ಭಾರಿ ಜಿದ್ದಾಜಿದ್ದಿಗೆ ಕಾರಣವಾಗಿರುವ ಶಿರಾ ಮತ್ತು ರಾಜರಾಜೇಶ್ವರಿ ಉಪಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಆರ್ ಆರ್ ನಗರದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.
ಇತ್ತ ಶಿರಾದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ರಾಜೇಶ್ ಗೌಡ ಸ್ವಲ್ಪ ಪ್ರಮಾಣದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮೂರನೇ ಸುತ್ತಿನ ಮುಕ್ತಾಯಕ್ಕೆ ರಾಜರಾಜೇಶ್ವರಿಯಲ್ಲಿ ರಾಜೇಶ್ ಗೌಡ ಅವರು 8919 ಮತಗಳೊಂದಿಗೆ 1342 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ 7577 ಮತಗಳು, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 4842 ಮತಗಳನ್ನು ಪಡೆದಿದ್ದಾರೆ.
ಇತ್ತ ರಾಜರಾಜೇಶ್ವರಿ ನಗರ ಕ್ಷೇತ್ರದ ಐದನೇ ಹಂತದ ಮತ ಎಣಿಕೆ ಕಾರ್ಯ ಮುಕ್ತಾಯ ಆಗಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮುನಿರತ್ನ ಅವರು 28,867 ಮತಗಳು, ಕಾಂಗ್ರೆಸ್ ಅಭ್ಯರ್ಥಿ 13,943 ಮತಗಳು, ಜೆಡಿಎಸ್ ಅಭ್ಯರ್ಥಿ 829 ಮತಗಳನ್ನು ಪಡೆದಿದ್ದಾರೆ.
ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿತ್ತು.
ಆರ್ ಆರ್ ನಗರದಲ್ಲಿ 4,62,201 ಮತದಾರರು ಇದ್ದು ಒಟ್ಟು 2,09,828 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 412 ಅಂಚೆ ಮತಗಳು ಚಲಾವಣೆ ಆಗಿತ್ತು. ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 6,821 ಅಂಚೆ ಮತಗಳು ಚಲಾವಣೆ ಆಗಿತ್ತು.