RR vs KKR Match | ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ playing 11
1 min read
KKR vs SRH Kolkata Knight Riders beat Sunrisers Hyderabad by 54 runs saaksha tv
RR vs KKR Match | ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ playing 11
ಇಂಡಿಯನ್ ಪ್ರಿಮಯರ್ ಲೀಗ್ ನ 30ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಗೆಲುವಿಗಾಗಿ ಗುದ್ದಾಟ ನಡೆಸಲಿವೆ.
ಶ್ರೇಯಸ್ ಅಯ್ಯರ್ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದೊಡ್ಡ ಅಂತರದಿಂದ ಸೋಲು ಕಂಡಿದೆ. ಹೀಗಾಗಿ ಸಂಘೀಕ ಪ್ರದರ್ಶನದ ಮೂಲಕ ಇಂದಿನ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡುವ ಪ್ಲಾನ್ ನಲ್ಲಿದೆ ಕೆಕೆಆರ್ ತಂಡ. ಅಯ್ಯರ್ ಹುಡುಗರು ಈ ಬಾರಿಯ ಐಪಿಎಲ್ ನಲ್ಲಿ ಐದು ಪಂದ್ಯಗಳನ್ನು ಆಡಿದ್ದಾರೆ. ಪೈಕಿ ಮೂರು ಪಂದ್ಯಗಳನ್ನು ಗೆದ್ದುಕೊಂಡಿದ್ದು, ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಸದ್ಯ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಈ ಸೀಸನ್ ನಲ್ಲಿ ಕೆಕೆಆರ್ ತಂಡ ಬಲಿಷ್ಠವಾಗಿದೆ, ಆದರೆ ಸ್ಥಿರ ಆಟ ಬಂದಿಲ್ಲ. ಓಪನರ್ ವೆಂಕಟೇಶ್ ಅಯ್ಯರ್ ಫಾರ್ಮ್ ಕಳೆದುಕೊಂಡಿದ್ದಾರೆ. ಆ್ಯರೋನ್ ಫಿಂಚ್ ಪ್ರಯೋಗ ಯಶಸ್ವಿ ಕಂಡಿಲ್ಲ. ಹೀಗಾಗಿ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡು, ಸುನೀಲ್ ನರೈನ್ ಅವರನ್ನು ಆರಂಭಿಕನಾಗಿ ಕಳುಹಿಸುವ ಪ್ಲಾನ್ ಇದೆ. ಶ್ರೇಯಸ್ ಮತ್ತು ನಿತೀಶ್ ಟಚ್ ಕಂಡುಕೊಂಡಿದ್ದಾರೆ. ರಸೆಲ್ ಮತ್ತು ಕಮಿನ್ಸ್ ಫಿನಿಷಿಂಗ್ ಕೊಡಬಹುದು. ಬೌಲಿಂಗ್ ನಲ್ಲಿ ಕಮಿನ್ಸ್, ಉಮೇಶ್ ಯಾದವ್, ನರೈನ್ ಮತ್ತು ಚಕ್ರವರ್ತಿ ತಂಡದ ಪ್ಲಾಸ್ ಪಾಯಿಂಟ್ ಆಗಿದ್ದಾರೆ. ರಸಿಕ್ ಸಲಾಂ, ರಸೆಲ್ ಮತ್ತು ವೆಂಕಟೇಶ್ ಅಯ್ಯರ್ ದುಬಾರಿಯಾದ ಬೌಲರ್ ಗಳಿಗೆ ರಿಪ್ಲೇಸ್ ಮೆಂಟ್ ಆಗಿದ್ದಾರೆ.
ಪ್ಲೇಯಿಂಗ್ ಇಲೆವೆನ್
ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್
ವೆಂಕಟೇಶ್ ಅಯ್ಯರ್
ಆರೋನ್ ಫಿಂಚ್ / ಸ್ಯಾಮ್ ಬಿಲ್ಲಿಂಗ್ಸ್
ಶ್ರೇಯಸ್ ಅಯ್ಯರ್ (ನಾಯಕ)
ನಿತೇಶ್ ರಾಣಾ
ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್)
ಆಂಡ್ರೆ ರಸೇಲ್
ಸುನೀಲ್ ನರೇನ್
ಪ್ಯಾಟ್ ಕಮಿನ್ಸ್
ಶಿಮಮ್ ಮಾವಿ
ಉಮೇಶ್ ಯಾದವ್
ವರುಣ್ ಚಕ್ರವರ್ತಿ
RR vs KKR Match | Kolkata Knight Riders Playing 11