RRRನಲ್ಲಿ ರಾಮ್ ಚರಣ್ ಡಾಮಿನೇಷನ್ ಬಗ್ಗೆ ರಾಜಮೌಳಿ ಸ್ಪಷ್ಟನೆ
RRR.. ಸಿನಿಮಾ ರಿಲೀಸ್ ಆಗಿ ಮೂರು ವಾರ ಕಳೆದರೂ ಸಿನಿಮಾ ಮೇನಿಯಾ ಸ್ವಲ್ಪವೂ ಕಡಿಮೆಯಾಗಿಲ್ಲ. RRR ಹವಾ ಇನ್ನೂ ಥಿಯೇಟರ್ನಲ್ಲಿ ಮುಂದುವರೆದಿದೆ.
ಈ ಸಿನಿಮಾದಲ್ಲಿ ಕೊಮುರಂ ಭೀಮ್ ಆಗಿ ಜೂನಿಯರ್ ಎನ್ ಟಿಆರ್ ಮತ್ತು ಅಲ್ಲೂರಿ ಸೀತಾರಾಮರಾಜ್ ಪಾತ್ರದಲ್ಲಿ ರಾಮ್ ಚರಣ್ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಹಾಕಿದ್ದಾರೆ.
ಸಿನಿಮಾ ರಿಲೀಸ್ ಗೂ ಮುನ್ನ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಆರ್ಆರ್ಆರ್ ಚಿತ್ರತಂಡ, ಬಿಡುಗಡೆಯ ನಂತರ ಸಕ್ಸಸ್ ಮೀಟ್ನೊಂದಿಗೆ ಸರಣಿ ಸಂದರ್ಶನಗಳನ್ನು ನೀಡುತ್ತಿದೆ.
ಆದರೆ, ಚಿತ್ರ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರಣ್ ಡಾಮಿನೇಷನ್ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಕ್ಸಸ್ ಮೀಟ್ನಲ್ಲಿ ವರದಿಗಾರರೊಬ್ಬರು ಚರಣ್ ಅವರನ್ನು ಈ ಬಗ್ಗೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಚರಣ್, ಒಂದು ಕ್ಷಣ ಕೂಡ ನಾನು ಆ ರೀತಿ ಅಂದುಕೊಳ್ಳುವುದಿಲ್ಲ.
ಡಾಮಿನೇಷನ್ ಅನ್ನೋ ಪದವನ್ನ ನಾನು ನಂಬೋದಿಲ್ಲ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದರು.
ಆದ್ರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜಮೌಳಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದರಲ್ಲಿ ಯಾವುದೇ ಡಾಮಿನೇಷನ್ ಇಲ್ಲ.. ತಾರಕ್ ಮತ್ತು ಚರಣ್ ಇಬ್ಬರೂ ತಮ್ಮ ಬೆಸ್ಟ್ ನೀಡಿದ್ದಾರೆ ಎಂದಿದ್ದಾರೆ ರಾಜಮೌಳಿ.
‘ಚರಣ್ ಡಾಮಿನೇಷನ್ ಹೆಚ್ಚಾಗಿದೆ ಅನ್ನೋದು ಸರಿಯಾದದ್ದಲ್ಲ. ಯಾವುದಾದರೂ ನಾವು ನೋಡುವ ದೃಷ್ಟಿಯಲ್ಲಿದೆ. ಕ್ಲೈಮ್ಯಾಕ್ಸ್ ನಲ್ಲಿ ರಾಮ್ ಚರಣ್ ಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇರುವುದರಿಂದ.. ಅದನ್ನು ನೋಡಿ ಹೊರ ಬರುವ ಪ್ರೇಕ್ಷಕರಿಗೆ ಚರಣ್ ಡಾಮಿನೇಷನ್ ಇದ್ದಂತೆ ಅನಿಸಬಹುದು. ಅದೇ ಭೀಮುಡೋ ಹಾಡಿನ ಬಳಿ ಕ್ಲೈಮ್ಯಾಕ್ಸ್ ಇದ್ದರೆ ಎನ್ ಟಿಆರ್ ಡಾಮಿನೇಷನ್ ಇದ್ದ ರೀತಿ ಅನಿಸುತ್ತಿತ್ತು ಎಂದಿದ್ದಾರೆ ರಾಜಮೌಳಿ. ss-rajamouli-reacts-claims-ram-charan-more-domination









