ಬೆಂಗಳೂರು ಗ್ರಾಮಾಂತರ: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಈಗ ಅಧಿಕಾರಿಗಳು ಬರೋಬ್ಬರಿ 7.86 ಕೋಟಿ ರೂ. ಮದ್ಯ ಜಪ್ತಿ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 7.86 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಡಾ.ಶಿವಶಂಕರ್ ನೇತೃತ್ವದಲ್ಲಿ ಅಧಿಕಾರಿಗಳಿಂದ ದಾಳಿ ನಡೆದಿತ್ತು.
ನೆಲಮಂಗಲದ ಡಿಸ್ಟಿಲರಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಟ್ಟಿದ್ದ ಬರೊಬ್ಬರಿ 1.48.985 ಲೀಟರ್ ಮದ್ಯವನ್ನ ಸೀಜ್ ಮಾಡಿದೆ. ಅಬಕಾರಿ ಇಲಾಖೆ ಸೆಕ್ಷನ್ಗಳ ಅಡಿ ಸೂಕ್ತ ದಾಖಲೆ ಇಲ್ಲದ ಕಾರಣ ಜಿಲ್ಲೆಯಲ್ಲಿ 45 ಕೇಸ್ ದಾಖಲು ಮಾಡಲಾಗಿತ್ತು. ಅಲ್ಲದೇ, ಇದರೊಂದಿಗೆ ಲಕ್ಷಾಂತರ ರೂ. ಮೌಲ್ಯದ 10 ಕೆ.ಜಿ ಗಾಂಜಾ ಕೂಡ ಜಪ್ತಿ ಮಾಡಲಾಗಿದೆ.