rsa-vs-ind-1st-test : ಊಟದ ವಿರಾಮಕ್ಕೆ ದಕ್ಷಿಣ ಆಫ್ರಿಕಾ 21ಕ್ಕೆ 1 rsa-vs-ind saaksha tv
ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಹರಿಣಗಳಿಗೆ ಆರಂಭಿಕ ಆಘಾತ ಎದುರಾಗಿದೆ. ಊಟದ ವಿರಾಮಕ್ಕೆ ದಕ್ಷಿಣ ಆಫ್ರಿಕಾ ತಂಡ ಒಂದು ವಿಕೆಟ್ ಕಳೆದುಕೊಂಡು 21 ರನ್ ಗಳಿಸಿದೆ. ಡೀನ್ ಎಲ್ಗರ್ 1 ರನ್ ಗಳಿಸಿ ಭಾರತದ ಪರ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ.
ಇದನ್ನು ಮುನ್ನಾ ಮೂರು ವಿಕೆಟ್ ಕಳೆದುಕೊಂಡು 272 ರನ್ ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಇನ್ನಿಂಗ್ಸ್ ಆರಂಭದಿಂದಲೂ ಬೆಂಕಿ ಚೆಂಡುಗಳನ್ನ ಎಸೆದ ರಬಾಡ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ರಾಹುಲ್ ವಿಕೆಟ್ ಪಡೆದರು. ರಾಹುಲ್ 123 ರನ್ ಗಳಿಸಿದ್ರು. ಇಲ್ಲಿಂದ ಭಾರತೀಯ ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು.
ಇದಾದ ಬಳಿಕ 48 ರನ್ ಗಳಿಸಿದ್ದ ರಹಾನೆ ಲುಂಗಿಗೆ ವಿಕೆಟ್ ಒಪ್ಪಿಸಿದರು. ಇಲ್ಲಿಂದ ಭಾರತೀಯ ಬ್ಯಾಟರ್ ಗಳು ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ. ಪಂತ್ 8 ರನ್ , ಅಶ್ವಿನ್, ಶರ್ದೂಲ್ ತಲಾ 4 ರನ್ , ಶಮಿ 8 ರನ್, ಬುಮ್ರಾ 14 ರನ್, ಸಿರಾಜ್ 4 ರನ್ ಗಳಿಸಿ ಔಟ್ ಆದ್ರು.
ಒಟ್ಟಾರೆ ಭಾರತ ಮೊದಲ ಇನ್ನಿಂಗ್ಗ್ ನಲ್ಲಿ 327 ರನ್ ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾ ಪರ ಲುಂಗಿ ಎಂನ್ಗಿಡಿ ಆರು ವಿಕೆಟ್ ಪಡೆದು ಮಿಂಚಿದ್ರೆ, ಕಗಿಸೊ ರಬಾಡ 3 ವಿಕೆಟ್, ಜೇಸನ್ 1 ವಿಕೆಟ್ ಪಡೆದರು.