RSWS 2022 | ಲಂಕಾ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ ಭಾರತ
ಮುಂಬೈ : ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಭಾರತದ ಲೆಜೆಂಡ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದೆ.
ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ – ಭಾರತ ಲೆಜೆಂಡ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ ತಂಡ 33 ರನ್ ಗಳ ಅಂತರದೊಂದಿಗೆ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಲೆಜೆಂಡ್ಸ್ ತಂಡ ನಮನ್ ಓಜಾ ಅವರ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿತು.
ಭಾರತದ ಪರ ಬ್ಯಾಟಿಂಗ್ ನಲ್ಲಿ ಸಚಿನ್ ಶೂನ್ಯ, ರೈನಾ 4, ವಿನಯ್ ಕುಮಾರ್ 36, ಯುವರಾಜ್ ಸಿಂಗ್ 19, ಇರ್ಫಾನ್ 11 ಮತ್ತು ಸ್ಟುವರ್ಟ್ ಬಿನ್ನಿ ಅಜೇಯ 8 ರನ್ ಗಳಿಸಿದರು.

ಪಂದ್ಯ ಗೆಲ್ಲಲು 196 ರನ್ ಗಳ ಗುರಿ ಪಡೆದ ಶ್ರೀಲಂಕಾ ಲೆಜೆಂಡ್ಸ್ ಕನ್ನಡಿಗ ವಿನಯ್ ಕುಮಾರ್ ದಾಳಿಗೆ ನಲುಗಿ 162 ರನ್ ಗಳಿಗೆ ಸರ್ವಪತನಗೊಂಡಿತು.
ಲಂಕಾ ಪರ ಇಶಾನ್ ಜಯರತ್ನ ಅರ್ಧಶತಕ ಸಿಡಿಸಿದ್ದು ಬಿಟ್ಟರೇ ಬೇರೆ ಯಾವ ಬ್ಯಾಟರ್ ಕೂಡ ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲ.
ಅಂತಿಮವಾಗಿ ಶ್ರೀಲಂಕಾ ತಂಡ 18.5 ಓವರ್ ಗಳ ಅಂತ್ಯಕ್ಕೆ 162 ರನ್ ಗೆ ಆಲೌಟ್ ಆದರು.
ಭಾರತದ ಪರ ವಿನಯ್ ಕುಮಾರ್ ಮೂರು ವಿಕೆಟ್ ಪಡೆದರೇ ಅಭಿಮನ್ಯು ಮಿಥುನ್ 2 ವಿಕೆಟ್, ಸ್ಟುವರ್ಟ್ ಬಿನ್ನಿ, ರಾಜೇಶ್ ಪವರ್, ರಾಹುಲ್ ಶರ್ಮಾ, ಯೂಸೆಫ್ ಪಠಾಣ್ ತಲಾ ಒಂದು ವಿಕೆಟ್ ಪಡೆದರು.