ಬೆಂಗಳೂರು: ವ್ಯಕ್ತಿಯೊಬ್ಬ ಸಾರ್ವಜನಿಕ ಸ್ಥಳದಲ್ಲಿ ಯುವತಿಯ ಎದುರು ಅಸಭ್ಯವಾಗಿ ವರ್ತಿಸಿರುವ ಘಟನೆ ಮಹದೇವಪುರ ಪಾರ್ಕ್ (Mahadevapura Park) ಹತ್ತಿರ ನಡೆದಿದೆ.
ಯುವತಿಯೊಬ್ಬರು ಈ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿ ಕಾರಿನಲ್ಲಿ ಕುಳಿತುಕೊಂಡಿದ್ದರು. ಈ ಸಂದರ್ಭದಲ್ಲಿ ಬಂದ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದಾಗಿ ಆತಂಕಗೊಂಡ ಯುವತಿ ಡೋರ್ ಲಾಕ್ ಮಾಡಿದ್ದಾಳೆ. ನಂತರ ಕಾರಿನ ಹತ್ತಿರ ಬಂದ ಆ ವ್ಯಕ್ತಿ ಸುತ್ತಾಡಿದ್ದಾನೆ ಎನ್ನಲಾಗಿದೆ.
ನಂತರ ಯುವತಿ ಕಾರಿನ ಸ್ಟೇರಿಂಗ್ ಕೆಳಕೆ ಅವಿತುಕೊಂಡಿದ್ದಾಳೆ. ನಂತರ ಸ್ನೇಹಿತರೊಬ್ಬರು ಬಂದ ನಂತರ ಯುವತಿ ಕೆಳಗೆ ಬಂದಿದ್ದಾರೆ. ನಂತರ ತಾನು ಅನುಭವಿಸಿದ ಸಮಸ್ಯೆಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾಳೆ.







