Rupee – ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರುಪಾಯಿ…
ಇಂದಿನಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಭಾರತ ರುಪಾಯಿ ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು ಮಂಗಳವಾರದ ಮಾರುಕಟ್ಟೆಯ ಆರಂಭದಲ್ಲಿ 7 ಪೈಸ ಕುಸಿದಿದ್ದು,ಡಾಲರ್ ಎದುರು ರುಪಾಯಿ ಮೌಲ್ಯ 80.05 ಕ್ಕೆ ತಲುಪಿದೆ.
ಕಚ್ಚಾ ತೈಲ ಬೆಲೆಗಳ ನಿರಂತರ ಏರಿಕೆ ಮತ್ತು ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಾಗಿದ್ದರಿಂದ ಡಾಲರ್ ಎದುರು ರುಪಾಯಿ ಕುಸಿತಕಂಡಿದೆ.
ವಿದೇಶಿ ಹೂಡಿಕೆದಾರರು 2022-23 ರಲ್ಲಿ ಇದುವರೆಗೆ ಭಾರತೀಯ ಈಕ್ವಿಟಿ ಮಾರುಕಟ್ಟೆಗಳಿಂದ ಸುಮಾರು 14 ಬಿಲಿಯನ್ ಡಾಲರ್ ಹಣವನ್ನು ಹಿಂತೆಗೆದುಕೊಂಡಿದ್ದಾರೆ. ವಿದೇಶಿ ಬಂಡವಾಳದ ಹೊರಹರಿವಿನಿಂದ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 11ರಂದು ಹೇಳಿದ್ದರು.
Rupee hits all-time low of 80 against US dollar as foreign funds exit