Russia-ukraine war | ರಷ್ಯಾಗೆ ಭಾರಿ ಶಾಕ್.. ಫುಟ್ ಬಾಲ್ ವಿಶ್ವಕಪ್ ನಿಂದ ಗೇಪ್ ಪಾಸ್
ಉಕ್ರೇನ್ ಮೇಲೆ ಮಿಲಿಟರಿ ದಾಳಿ ನಡೆಸುತ್ತಿರುವ ರಷ್ಯಾಕ್ಕೆ ಹೊಡೆತಗಳ ಮೇಲೆ ಹೊಡೆತ ಬೀಳುತ್ತಿದೆ. ಈಗಾಗಲೇ ಪಾಶ್ಚಿಮಾತ್ಯ ದೇಶಗಳು ಹಲವು ನಿರ್ಬಂಧಗಳನ್ನು ಹೇರಿವೆ.
ಅದೇ ರೀತಿ ಇದೀಗ ಉಕ್ರೇನ್ ಗೆ ಕ್ರೀಡಾ ಲೋಕವೂ ಬೆಂಬಲವಾಗಿ ನಿಂತಿದ್ದು, ಈ ವರ್ಷದ ಫಿಫಾ ವಿಶ್ವಕಪ್ನಿಂದ ರಷ್ಯಾವನ್ನು ಬಹಿಷ್ಕರಿಸಿದೆ.
FIFA ವಿಶ್ವಕಪ್ 2022 ಸೇರಿದಂತೆ ಎಲ್ಲಾ ಅಂತರಾಷ್ಟ್ರೀಯ ಫುಟ್ಬಾಲ್ ಸ್ಪರ್ಧೆಗಳು ಮತ್ತು ಲೀಗ್ಗಳಿಂದ ರಷ್ಯಾವನ್ನ ಬಹಿಷ್ಕರಿಸುವುದಾಗಿ ಘೋಷಿಸಿವೆ.
ರಷ್ಯಾದ ಪುರುಷರ ತಂಡವು ಈ ವರ್ಷದ ಕೊನೆಯಲ್ಲಿ ಕತಾರ್ನಲ್ಲಿ ನಡೆಯಲಿರುವ ವಿಶ್ವಕಪ್ಗಾಗಿ ಮಾರ್ಚ್ನಲ್ಲಿ ಅರ್ಹತಾ ಪ್ಲೇ-ಆಫ್ ಪಂದ್ಯಗಳನ್ನ ಪೋಲೆಂಡ್ನೊಂದಿಗೆ ಆಡಲಿದೆ.
ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ರಷ್ಯಾ ವಿರುದ್ಧ ಆಡದಿರಲು ಪೋಲೆಂಡ್ ಫುಟ್ಬಾಲ್ ತಂಡ ನಿರ್ಧರಿಸಿದೆ.
ಅದೇ ರೀತಿ ಜುಲೈನಲ್ಲಿ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಯುರೋಪಿಯನ್ ಚಾಂಪಿಯನ್ ಶಿಪ್ ನಲ್ಲಿ ರಷ್ಯಾ ಮಹಿಳಾ ತಂಡ ಆಡಲಿದೆ.
ಫುಟ್ಬಾಲ್ ತಂಡಗಳ ಮೇಲೆ ಫಿಫಾ ಮತ್ತು ಯುಇಎಫ್ಎ ನಿಷೇಧವು ರಷ್ಯಾಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಅದೇ ರೀತಿ ರಷ್ಯಾದ ಯುದ್ಧೋನ್ಮಾದವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತೀವ್ರವಾಗಿ ಖಂಡಿಸಿದೆ. russia-ukraine-war-russia-expelled-world-cup