Russia: ಕಪ್ಪು ಸಮುದ್ರದಲ್ಲಿ ಮುಳಗಿದ ರಷ್ಯಾದ ಸಮರನೌಕೆ ಮೊಸಕ್ ವಾ

1 min read
Russia Saaksha Tv

ಕಪ್ಪು ಸಮುದ್ರದಲ್ಲಿ ಮುಳಗಿದ ರಷ್ಯಾದ ಸಮರನೌಕೆ ಮೊಸಕ್ ವಾ

ರಷ್ಯಾ: ರಷ್ಯಾದ ಪ್ರಮುಖ ಯುದ್ಧನೌಕೆ “ಮೊಸಕ್ ವಾ’ ಕಪ್ಪು ಸಮುದ್ರದಲ್ಲಿ ಮುಳಗಿದೆ. ಈ ಮೂಲಕ ರಷ್ಯಾಕ್ಕೆ ದೊಡ್ಡ ಹಾನಿ ಉಂಟಾಗಿದೆ.

ಕಳೆದ ಫೆಬ್ರವರಿ 24 ರಂದು ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧ 51 ದಿನಗಳು ಕಳೆದರು ಇನ್ನೂ ಅಂತ್ಯಕಂಡಿಲ್ಲ. ಯುದ್ಧದಲ್ಲಿ ರಷ್ಯಾಕ್ಕೆ ಪ್ರಭಲ ಪೈಪೋಟಿ ನೀಡುತ್ತಿರುವ ಉಕ್ರೇನ್, ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿರೋಧಕ ಕ್ಷಿಪಣಿಗಳನ್ನು ಉಡಾಯಿಸಿದೆ.

ಪರಿಣಾಮ ರಷ್ಯಾದ ಮೊಸಕ್ ವಾ ಮೇಲೆ ಅಪ್ಪಳಿಸಿದೆ. ಕ್ಷಪಣಿಗಳ ಹೊಡತಕ್ಕೆ ಯುದ್ಧನೌಕೆ ನಲುಗಿದ್ದು, ಸಮುದ್ರದಲ್ಲಿ ಮುಳಗಿದೆ. ನಂತರ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಯುದ್ದ ನೌಕೆಯಲ್ಲಿದ್ದ ಮದ್ದುಗುಂಡುಗಳು ಸ್ಪೋಟಗೊಂಡಿದ್ದು, ನೌಕೆಯಲ್ಲಿದ್ದ ಎಲ್ಲ 500 ಸಿಬ್ಬಂದಿಯನ್ನೂ ರಕ್ಷಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ.

ಸಮರನೌಕೆ ಮುಳುಗಿರುವುದರಿಂದ ರಷ್ಯಾಕ್ಕೆ ದೊಡ್ಡ ನಷ್ಟವಾಗಿದೆ ಎಂದು ಅಮೆರಿಕ ವಿಶ್ಲೇಷಿಸಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd