ಟೀ ಟೈಮಲ್ಲಿ ತಿನ್ನಲು ಮನೆಯಲ್ಲಿಯೇ ಮಾಡಿ ರುಚಿಯಾದ ಅಕ್ಕಿ ಕುರ್ಕುರೆ….
ಈ ಸಂಜೆ ಸಮಯದಲ್ಲಿ ಟೀ ಅಥವಾ ಕಾಫಿ ಜೊತೆ ಮಸಾಲೆಯುಕ್ತ ಮತ್ತು ಕುರುಕುಲು ತಿಂಡಿ ತಿನ್ನಬೇಕು ಎಂದು ನಾಲಿಗೆ ಹಂಬಲಿಸುತ್ತಿರುತ್ತದೆ. ಅಂಥವಾ ಬಯಕೆಗಾಗಿ ಪ್ರತೀ ಸಾರಿ ನೀವು ಕಿರಾಣಿ ಅಂಗಡಿ ಅಥವಾ ಬೇಕರಿಗೆ ಹೋಗಬೇಕಿಲ್ಲ. ಸುಲಭವಾಗಿ ಮನೆಯಲ್ಲಿಯೇ ಲಭ್ಯವಿರುವ ಪದಾರ್ಥಗಳೊಂದಿಗೆ ಕೆಲವೇ ನಿಮಿಷಗಳಲ್ಲಿ ಸಂಜೆಯ ಸ್ನ್ಯಾಕ್ಸ್ ರೆಡಿಮಾಡಿಕೊಳ್ಳಬಹುದು.
ಸಂಜೆಯ ಟೀ ಜೊತೆ ತಿನ್ನಲು ರುಚಿಯಾದ ಮತ್ತು ಸುಲಭವಾಗಿ ಮಾಡಬಹುದಾದ ಅಕ್ಕಿ ಕುರ್ಕರೆ ಮಾಡುವ ವಿಧಾನವನ್ನ ತಿಳಸಿ ಕೊಡ್ತಿವಿ ನೋಡಿ.
ಈ ಅಡುಗೆಯನ್ನ ತಯಾರಿಸಲಿ ನಿಮಗೆ ಬೇಕಾಗಿರುವುದು ಮನೆಯಲ್ಲಿರುವ ಕ ಅಕ್ಕಿ ಮತ್ತು ಕೆಲವು ಸಾಮಾನ್ಯ ಮಸಾಲೆಗಳಾದ ಜೀರಾ, ಕಪ್ಪು ಎಳ್ಳು, ಹಲ್ದಿ, ಆಮ್ಚೂರ್, ಪುದಿನಾ ಮತ್ತು ಮಿರ್ಚ್ ಪೌಡರ್. ಈ ಬೇಸಿಗೆಯಲ್ಲಿ ನಿಮ್ಮ ಹೊಟ್ಟೆಯನ್ನು ತಂಪಾಗಿರಿಸಲು ಮೊಸರಿನೊಂದಿಗೆ ಅದ್ದಿ ತಿನ್ನುವುದು ಒಳ್ಳೆಯದು.
ಅಕ್ಕಿ ಕುರ್ಕುರೆ ಮಾಡಲು ಬೇಕಾದ ಪದಾರ್ಥಗಳು ಇಂತಿವೆ,
ಅಕ್ಕಿ – 1 ಕಪ್ (235 ಗ್ರಾಂ)
ಜೀರಿಗೆ – ½ ಟೀಸ್ಪೂನ್
ಕಪ್ಪು ಎಳ್ಳು – 1 ಟೀಸ್ಪೂನ್
ನೀರು – 1¼ ಕಪ್
ಅರಿಶಿನ – ½ ಟೀಸ್ಪೂನ್
ಹುರಿಯಲು ಎಣ್ಣೆ
ಉಪ್ಪು – ಒಂದು ಚಿಟಕಿ
ಸಕ್ಕರೆ – ಒಂದು ಚಿಟಕಿ
ಮೇಯನೇಸ್ – ¼ ಕಪ್
ಮೊಸರು – ½ ಕಪ್
ಬೆಳ್ಳುಳ್ಳಿ – ¼ ಟೀಸ್ಪೂನ್
ಪುದಿನಾ ಕತ್ತರಿಸಿದ್ದು – ¼ ಕಪ್
ಸೌತೆಕಾಯಿ ಕತ್ತರಿಸಿದ್ದು – 1 ಕಪ್
ರುಚಿಗೆ ಉಪ್ಪು
ಮೆಣಸು ರುಚಿಗೆ
ಮಸಾಲಾ
ಉಪ್ಪು – ¾ ಟೀಸ್ಪೂನ್
ಕಪ್ಪು ಉಪ್ಪು – 1 ಟೀಸ್ಪೂನ್
ಕಾಶ್ಮೀರಿ ಮಿರ್ಚ್ ಪುಡಿ – 1 tbsp
ಪುದೀನಾ ಪುಡಿ – 1 tbsp
ಹಸಿ ಮಾವಿನ ಪುಡಿ – 1 tbsp
ಚಾಟ್ ಮಸಾಲಾ (ಐಚ್ಛಿಕ) – 1 ಟೀಸ್ಪೂನ್
ವಿಧಾನ
* ಅಕ್ಕಿಯನ್ನು ಮಿಕ್ಸರ್ ಗ್ರೈಂಡರ್ನಲ್ಲಿ ನುಣ್ಣಗೆ ಪುಡಿ ಮಾಡಿ ಬಟ್ಟಲಿಗೆ ತೆಗೆದುಕೊಂಡು ಹಿಟ್ಟನ್ನ ಜರಡಿ ಹಿಡಿದುಕೊಳ್ಳಿ
* ಹಿಟ್ಟಿಗೆ ಉಪ್ಪು, ಅರಿಶಿನ, ಜೀರಿಗೆ ಮತ್ತು ಕಪ್ಪು ಎಳ್ಳು ಸೇರಿಸಿ.
* ಮಧ್ಯಮ ಉರಿಯಲ್ಲಿ ಈ ಹಿಟ್ಟನ್ನು ಪ್ಯಾನ್ನಲ್ಲಿ ಹುರಿದುಕೊಳ್ಳಿ. ಕನಿಷ್ಠ 5 ನಿಮಿಷಗಳ ಕಾಲ ನಿರಂತರವಾಗಿ ಕೈಯಾಡುತ್ತಿರಿ .
* ಬಿಸಿ ನೀರು ತೆಗೆದುಕೊಂಡು ಮಿಕ್ಸಿಂಗ್ ಬೌಲ್ ಹುರಿದ ಅಕ್ಕಿ ಹಿಟ್ಟನ್ನ ಹಾಕಿಕೊಳ್ಳಿ. ಸ್ವಲ್ಪ ಸ್ವಲ್ಪವೇ ನೀರನ್ನ ಮಿಕ್ಸ್ ಮಾಡಿಕೊಳ್ಳುತ್ತಾ ಮಿಶ್ರಣ ಮಾಡಿ.
* ಬಿಸಿ ನೀರನ್ನು ಸೇರಿಸಿದ ನಂತರ ಹಿಟ್ಟು ಸಾಕಷ್ಟು ಬೆಚ್ಚಗಿರುತ್ತದೆ, ನಂತರ ಹಿಟ್ಟನ್ನ ಮೃದುವಾದ ಚೆಂಡಿನ ರೂಪಕ್ಕೆ ಬರುವಂತೆ ಕಲಸಿಕೊಳ್ಳಿ
* ಮೊದಲು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಸಣ್ಣ ಉಂಡೆಗಳಾಗಿ ಮಾಡಿಕೊಂಡು ನಂತರ ಉದ್ದನೆ ತುಂಡುಗಳಂತೆ ಕುರ್ಕುರೆ ರೂಪದಲ್ಲಿ ಮಾಡಿಕೊಳ್ಳಿ.
* ಬಾಣಲೆಯಲ್ಲಿ ಎಣ್ಣೆಯನ್ನ ಹಾಕಿಕೊಂಡು ಉರಿ ಹೆಚ್ಚಿಸಿಕೊಳ್ಳಿ. ಮಧ್ಯಮ ಉರಿಯಿಂದ ಒಂದೊಂದಾಗಿ ಹಸಿ ಕುರ್ಕುರೆ ಯನ್ನ ಎಣ್ಣೆಯಲ್ಲಿ ಬಿಡಿ.
* 7-10 ನಿಮಿಷಗಳ ಕಾಲ ಫ್ರೈ ಮಾಡಿ ನಂತರ ಕುರ್ಕುರೆ ತೆಗೆದುಬಿಡಿ. ಹೆಚ್ಚುವರಿ ಎಣ್ಣೆಯನ್ನು ಹಿರಿಕೊಳ್ಳಲು ಅಡಿಗೆ ಟವೆಲ್ ಮೇಲೆ ಹರಡಿಬಿಡಿ .
* ಮಸಾಲಾ ಮಾಡಲು ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಮತ್ತು ಬಿಸಿಯಾಗಿರುವಾಗ ಕುರ್ಕುರೆ ಮೇಲೆ ಸಿಂಪಡಿಸಿ. ಮಸಾಲಾ ಕುರ್ಕುರೆಗೆ ಅಂಟಿಕೊಳ್ಳುತ್ತದೆ. ಈಗ ಕುರ್ಕುರೆಗಳು ತಿನ್ನಲು ರೆಡಿ.
* ಸೌತೆಕಾಯಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ ಸ್ವಲ್ಪ ಪುದೀನವನ್ನು ಕತ್ತರಿಸಿ ಮತ್ತು ಬೌಲ್ಗೆ ಹಾಕಿಕೊಳ್ಳಿ ಇದಕ್ಕೆ ಮೊಸರು, ಕತ್ತರಿಸಿದ ಬೆಳ್ಳುಳ್ಳಿ ಮತ್ತು ಮೇಯನೇಸ್ ಸೇರಿಸಿ.
* ಉಪ್ಪು ಮತ್ತು ಮೆಣಸುಗಳೊಂದಿಗೆ ಮಸಾಲೆ ಸರಿಪಡಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಕುರ್ಕುರೆಯನ್ನ ಮೊಸರಿನೊಂದಿಗೆ ನೆಂಚಿಕೊಂಡು ತಿನ್ನಿ….