ಪಾಕಿಸ್ತಾನದ ಪರ ಘೋಷಣೆ ಕೂಗಿ ಸದ್ಯ ಪೊಲೀಸರ ವಶದಲ್ಲಿರುವ ಅಮೂಲ್ಯ ಲಿಯೋನ್ ವಿರುದ್ಧ ಕೋಲಾರದ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಕಿಡಿಕಾರಿದ್ದಾರೆ. ಭಾರತದಲ್ಲಿದ್ದುಕೊಂಡು ಪಾಕಿಸ್ಥಾನ ಪರ ಘೋಷಣೆ ಕೂಗಿದ್ದು ಅಕ್ಷ್ಯಮ್ಯ ಅಪರಾಧ. ಈ ರೀತಿಯ ಘೋಷಣೆ ಕೂಗಿದ್ದರ ಹಿಂದೆ ಪಾಕಿಸ್ತಾನದ ಕೈವಾಡ ಇರಬಹುದು. ಹಣ ಆಸೆಗೆ ಈ ಯುವತಿ ಹೀಗೆ ಮಾಡಿದ್ದಾಳೆ ಅನಿಸುತ್ತಿದೆ ಎಂದು ಆರೋಪಿಸಿದರು. ಅಮೂಲ್ಯ ಲಿಯೋನ್ ಳ ತಂದೆಯೇ ಮಗಳಿಗೆ ಶಿಕ್ಷೆ ಆಗಲಿ ಎಂದು ಹೇಳಿದ್ದಾರೆ. ಇಂತಹ ದೇಶದ್ರೋಹ ಘೋಷಣೆ ಕೂಗುವವರನ್ನು ಗಡಿಪಾರು ಮಾಡಿದಾಗ ಮಾತ್ರ ಬುದ್ಧಿ ಬರುತ್ತದೆ ಎಂದರು. ವಿರೋಧ ಪಕ್ಷಗಳು ಪ್ರಧಾನಿ ಮೋಧಿಯನ್ನು ವಿರೋಧಿಸುವ ನಿಟ್ಟಿನಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ದೇಶದ್ರೋಹದ ಕಾನೂನಿನಲ್ಲಿ ತಿದ್ದುಪಡಿ ತಂದು ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಇಂತಹವರಿಗೆ ಬುದ್ಧಿ ಬರುತ್ತದೆ ಎಂದರು.
175 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಿ, ರೈತರ ಸಾಲ ಮನ್ನಾ ಮಾಡಿ, ಹಣ ಬಿಡುಗಡೆ ಬಗ್ಗೆ ನಿಖರವಾಗಿ ತಿಳಿಸಿ: ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹ
ಸಚಿವ ನಾಗೇಂದ್ರ ರಾಜೀನಾಮೆ ನೀಡುವುದು ಖಚಿತ, ನಮ್ಮ ಹೋರಾಟಕ್ಕೆ ಬೆಲೆ ಸಿಗಲಿದೆ ಬೆಂಗಳೂರು, ರಾಜ್ಯ ಸರ್ಕಾರ ಕಾಟಾಚಾರಕ್ಕೆ ಬರಗಾಲ ಘೋಷಣೆ ಮಾಡಿದೆ. ಆದರೆ 175 ತಾಲೂಕುಗಳಲ್ಲಿ ಬರ...








