ಮೈಸೂರಿನಲ್ಲಿ ಕೋವಿಡ್ ಕೇರ್ ಸೆಂಟರ್‍ಗಳ ಅನುಮತಿ ರದ್ದು : ಸಾ.ರಾ.ಮಹೇಶ್ ಆಕ್ಷೇಪ
ಮೈಸೂರು : ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ಅನುಮತಿ ರದ್ದು ವಿಚಾರವಾಗಿ ಶಾಸಕ ಸಾ.ರಾ. ಮಹೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಕೆಲ ಆಸ್ಪತ್ರೆಗಳ ಅವ್ಯವಸ್ಥೆ ಕಂಡು ಸಂಪೂರ್ಣ ಖಾಸಗಿ ಆಸ್ಪತ್ರೆಗಳ ಅನುಮತಿ ರದ್ದು ಮಾಡಿದ್ದಾರೆ. ಸರ್ಕಾರವೇ ಖಾಸಗಿಯವರಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಿರಿ ಎನ್ನುತ್ತಿದೆ.
ಆದರೆ ಮೈಸೂರಿನಲ್ಲಿ ಖಾಸಗಿ ಕೋವಿಡ್ ಕೇರ್ ಗಳನ್ನು ಮುಚ್ಚಿಸಲಾಗ್ತಿದೆ. ಅವ್ಯವಸ್ಥೆ ಇರುವ ಆಸ್ಪತ್ರೆಗಳನ್ನು ಬೇಕಾದ್ರೆ ಮುಚ್ಚಲಿ. ಆದರೆ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಮುಚ್ಚುಚುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಎಸ್.ಎ.ರಾಮದಾಸ್ ವೈದ್ಯಕೀಯ ಸಚಿವರಾಗಿದ್ದವರು. ಆದ್ರೆ ಕೋವಿಡ್ ಕೇರ್ ಬಗ್ಗೆ ಆತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕೆ.ಆರ್.ಕ್ಷೇತ್ರದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಸಿಕೊಳ್ಳಲಿ.
ಆದರೆ ಜಿಲ್ಲೆಯ ಎಲ್ಲ ಖಾಸಗಿ ಕೋವಿಡ್ ಕೇರ್ ಅನುಮತಿ ರದ್ದುಗೊಳಿಸಲು ಅವರಿಗೆ ಯಾವ ಅಧಿಕಾರ ಇದೆ ಎಂದು ಪ್ರಶ್ನಿಸಿದರು. ರಾಮದಾಸ್ ಅವರು ಮುಂದೆ ಸಚಿವರಾಗಬಹುದು ಅಂದುಕೊಂಡಿದ್ದೆವು. ಈಗಲೇ ಸಚಿವರಾಗಿ ಬಿಟ್ಟಿದ್ದಾರಾ ?
ಎಸ್.ಎ.ರಾಮ್‍ದಾಸ್ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ರಾಮದಾಸ್ ಅವರು ತಮ್ಮನ್ನೇ ಉಸ್ತುವಾರಿ ಸಚಿವರು ಎಂದುಕೊಂಡತಿದೆ.
ಮೈಸೂರು ಜಿಲ್ಲೆಯಲ್ಲಿ ಏನ್ ಆಗ್ತಿದೆ ಅಂತ ಗೊತ್ತಾಗ್ತಿಲ್ಲ. ಏಕಾಏಕಿ ಎಲ್ಲಾ ಖಾಸಗಿ ಕೋವಿಡ್ ಕೇರ್ ಸೆಂಟರ್ ಮುಚ್ಚಿದೆ. ಅಲ್ಲಿರುವ ರೋಗಿಗಳು ಏನು ಮಾಡಬೇಕು ಹೇಳಿ ಎಂದು ಕಿಡಿಕಾರಿದರು.