SA vs IND t20 | ಬೆಂಗಳೂರಿನತ್ತ ಎಲ್ಲರ ಚಿತ್ತ | ಗೆದ್ದವರಿಗೆ ಸರಣಿ
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ 20 ಸರಣಿ ಅಂತಿಮ ಹಂತಕ್ಕೆ ಬಂದು ನಿಂತಿದೆ.
ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಗೆದ್ದವರು ಚಾಂಪಿಯನ್ ಆಗಲಿದ್ದಾರೆ.
ಇಂದಿನ ಪಂದ್ಯ ಫೈನಲ್ ಪಂದ್ಯಕ್ಕೆ ಸಮವಾಗಿದ್ದು, ಉಭಯ ತಂಡಗಳಿಗೆ ಗೆಲುವೊಂದೇ ಗುರಿಯಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಸೂಪರ್ ಸಂಡೇಯ ಸಖತ್ ಮ್ಯಾಚ್ ಆಗಿರಲಿದೆ.
ಗೆಲುವಿಗಾಗಿಎರಡೂ ತಂಡಗಳು ಜಿದ್ದಾಜಿದ್ದಿ ನಡೆಸಲಿದ್ದು ಅಭಿಮಾನಿಗಳಿಗೆ ಹಬ್ಬದೂಟ ಸಿಗಲಿದೆ.
ಐದು ಪಂದ್ಯಗಳ ಸರಣಿಯನ್ನಾಡಲು ದಕ್ಷಿಣ ಆಫ್ರಿಕಾ ಭಾರತ ಪ್ರವಾಸ ಕೈಗೊಂಡು, ಸರಣಿ ಗೆಲ್ಲುವ ವಿಶ್ವಾಸದೊಂದಿಗೆ ದೆಹಲಿ ಮತ್ತು ಕಟಕ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.
ಆ ಮೂಲಕ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿ ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿತ್ತು. ಆದ್ರೆ ವಿಶಾಖಪಟ್ಟಣಂ ಮತ್ತು ರಾಜ್ ಕೋಟ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದೆ.

ಇದರೊಂದಿಗೆ ಸರಣಿಯಲ್ಲಿ 2-2ಕ್ಕೆ ತಂದು ನಿಲ್ಲಿಸಿದೆ. ಅದಕ್ಕೂ ಮಿಗಿಲಾಗಿ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ, 87 ರನ್ ಗಳ ಅಂತರದ ಗೆಲುವು ಸಾಧಿಸಿ ದಕ್ಷಿಣ ಆಫ್ರಿಕಾ ತಂಡದ ಆತ್ಮವಿಶ್ವಾಸಕ್ಕೆ ಕೊಡಲಿಯೇಟು ನೀಡಿದೆ.
ವಿಶೇಷ ಏನಂದರೇ ಈ ಸರಣಿಯಲ್ಲಿ ಟೀಂ ಇಂಡಿಯಾ ನಾಲ್ಕಕ್ಕೆ ನಾಲ್ಕೂ ಪಂದ್ಯಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದೆ.
ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಟಾರ್ಗೆಟ್ ನೀಡಿ ಸೋತ್ರೆ, ಕೊನೆಯ ಎರಡು ಪಂದ್ಯಗಳಲ್ಲಿ ಎದುರಾಳಿಯನ್ನು ಟಾರ್ಗೆಟ್ ಮುಟ್ಟದಂತೆ ಮಾಡಿ ಗೆಲುವು ಸಾಧಿಸಿದೆ.
ಹೀಗಾಗಿ ಟೀಮ್ ಇಂಡಿಯಾದ ಪಾಲಿಗೆ ಟಾಸ್ ಕೇವಲ ಪಂದ್ಯದ ಭಾಗವಷ್ಟೇ . ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾವನ್ನು ಹೇಗೆ ಕಟ್ಟಿಹಾಕಬೇಕು ಅನ್ನುವ ಚಿಂತೆಯಲ್ಲಿದೆ.
ಅಂದಹಾಗೆ ಕಳೆದ ಎರಡು ಪಂದ್ಯಗಳಿಂದ ಟೀಂ ಇಂಡಿಯಾ ಸಂಘಟಿತ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಸಾಲಿಡ್ ಪ್ರದರ್ಶನ ನೀಡಿದೆ.
ಬ್ಯಾಟಿಂಗ್ ನಲ್ಲಿ ಮೊದಲು ಆಘಾತ ಅನುಭವಿಸಿದ್ರೂ ಕೆಳಕ್ರಮಾಂಕದ ಬ್ಯಾಟರ್ ಗಳು ತಂಡಕ್ಕೆ ನೆರವಾಗುತ್ತಿದ್ದಾರೆ.
ಇನ್ನು ಮೊದಲೆರಡು ಪಂದ್ಯಗಳಲ್ಲಿ ಬೌಲರ್ ಗಳು ದುಬಾರಿ ಆದ್ರು. ವಿಕೆಟ್ ಪಡೆಯಲು ಪರದಾಡಿದರು. ಆದ್ರೆ ಕಳೆದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲರ್ ಗಳು ಸ್ಟ್ರಾಂಗ್ ಕಂ ಬ್ಯಾಕ್ ಮಾಡಿದ್ದಾರೆ.
ಅಲ್ಪಮೊತ್ತಕ್ಕೆ ದಕ್ಷಿಣ ಆಫ್ರಿಕಾ ತಂಡವನ್ನು ಕಟ್ಟಿಹಾಕಿ ಗೆಲುವಿನ ಕೇಕೆ ಹಾಕಿದೆ. ಇದೇ ಪ್ರದರ್ಶನವನ್ನು ಇಂದಿನ ಪಂದ್ಯದಲ್ಲಿ ಮುಂದುವರೆಸಿದ್ರೆ ಟೀಂ ಇಂಡಿಯಾ ಗೆಲುವು ಸಾಧಿಸೋದು ಪಕ್ಕಾ.








