ತ್ರಿದೇವಿ ಸ್ವರೂಪಿ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಇತಿಹಾಸ ತಿಳಿದುಕೊಳ್ಳಿ…

1 min read
Saakshatv astrology kollur

ತ್ರಿದೇವಿ ಸ್ವರೂಪಿ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಇತಿಹಾಸ ತಿಳಿದುಕೊಳ್ಳಿ…

ಇಲ್ಲಿನ ಐತಿಹ್ಯಗಳ ಅನುಸಾರ, ಇಲ್ಲಿ ತಪಸ್ಸು ಮಾಡುತ್ತಿದ್ದ ಕೋಲ ಮಹರ್ಷಿಗೆ ಓರ್ವ ರಾಕ್ಷಸನು ತೊಂದರೆ ನೀಡಿದ; ಈ ರಾಕ್ಷಸನೂ ಸಹ ತನ್ನ ಸ್ವಾಮಿ ಶಿವನನ್ನು ಮೆಚ್ಚಿಸಿ ಅವನಿಂದ ವರವೊಂದನ್ನು ಪಡೆಯುವುದಕ್ಕಾಗಿ ಶಿವನ ಕುರಿತು ತಪಸ್ಸಿನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ.
Saakshatv astrology kollur

ಈ ರಾಕ್ಷಸನು ತನ್ನ ದುಷ್ಟ ಬಯಕೆಯನ್ನು ಪೂರೈಸಿಕೊಳ್ಳದಂತೆ ಅವನನ್ನು ತಡೆಗಟ್ಟುವ ಸಲುವಾಗಿ, ಆದಿಶಕ್ತಿಯು ಅವನನ್ನು ಮಾತುಬಾರದ (ಮೂಕ) ವ್ಯಕ್ತಿಯನ್ನಾಗಿಸಿದಳು.

ಹೀಗಾಗಿ ಸ್ವಾಮಿ ಶಿವನು ಅವನ ಮುಂದೆ ಕಾಣಿಸಿಕೊಂಡಾಗ (ಅಂದರೆ ಪ್ರತ್ಯಕ್ಷನಾದಾಗ) ಅವನಿಂದ ಏನನ್ನು ಕೇಳಲೂ ರಾಕ್ಷಸನಿಗೆ ಆಗದಂತಾಯಿತು.

ತತ್ಪರಿಣಾಮವಾಗಿ ಅವನು ರೋಷಗೊಂಡ ಮತ್ತು ವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸಿದ ಕೋಲ ಮಹರ್ಷಿಗೆ ತಕ್ಷಣವೇ ತೊಂದರೆ ಕೊಡಲು ಆರಂಭಿಸಿದ.

ಮೂಕಾಸುರ ರಾಕ್ಷಸನನ್ನು ಪರಾಭವಗೊಳಿಸಿದ ಆದಿಶಕ್ತಿಯನ್ನು ಕುರಿತು ದೇವರುಗಳು ಗುಣಗಾನ ಮಾಡಿ ಅವಳನ್ನು ಮೂಕಾಂಬಿಕಾ ಎಂದು ಕರೆದರು.

ಭವಿಷ್ಯದ ಕುರಿತು ನಿಮಗೆ ಆತಂಕವಿದೆಯೇ..? ಜ್ಯೋತಿಷಕ್ಕೆ ಸಂಬಂಧಿಸಿದ ಪ್ರಶ್ನೆಗಳಿವೆಯೇ? ನಿಮ್ಮಲ್ಲಿನ ಗೊಂದಲಗಳನ್ನು ಬಗೆಹರಿಸಲು ನಿಮ್ಮ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿ ಪರಿಹಾರ 8548998564 ಪಡೆದುಕೊಳ್ಳಬಹುದು ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಗ್ರಹದೋಷ ,ಗ್ರಹಚಾರ ಫಲ, ಜಾತಕ ವಿಮರ್ಶೆ ,ದುಷ್ಟಶಕ್ತಿಗಳ ಉಚ್ಚಾಟನೆ, ಮಾನಸಿಕ ಕಿರಿಕಿರಿ, ವ್ಯವಹಾರದಲ್ಲಿ ಅಭಿವೃದ್ಧಿ, ಇಷ್ಟಪಟ್ಟವರು ನಿಮ್ಮಂತೆ ಆಗಲು ಇನ್ನೂ ಹಲವಾರು ಘೋರ ನಿಗೂಡ ಸಮಸ್ಯೆಗಳಿಗೆ ಪರಿಹಾರ ಸಿಗದೇ ನೊಂದಿದ್ದರೆ,ಕಟೀಲು ದುರ್ಗಾಪರಮೇಶ್ವರೀ ದೈವಿಕ ಪೂಜಾ ಶಕ್ತಿಯಿಂದ ಶಾಸ್ತ್ರಆಧಾರಿತವಾಗಿ ಅತ್ಯಮೂಲ್ಯ ಮಂತ್ರ ಸಿದ್ದಿಗಳ ಮೂಲಕ ಸಮಸ್ಯೆಗಳನ್ನು ಸಂಶೋಧಿಸಿ ಸೂಕ್ತ ಪರಿಹಾರ ಮಾರ್ಗದರ್ಶನ ನೀಡುತ್ತಾರೆ 8548998564

ಕೋಲ ಮಹರ್ಷಿಯ ಪ್ರಾರ್ಥನೆಯ ಅನುಸಾರವಾಗಿ, ಆ ದಿವ್ಯಮಾತೆಯು ಎಲ್ಲಾ ದೇವರುಗಳ ಜೊತೆಗೂಡಿ ಅಲ್ಲಿಯೇ ನೆಲೆಗೊಂಡಳು ಹಾಗೂ ಭಕ್ತರಿಂದ ಶಾಶ್ವತವಾಗಿ ಪೂಜಿಸಲ್ಪಡುವಂಥ ಭಕ್ತಿ-ಪರಂಪರೆಗೆ ಈ ಸನ್ನಿವೇಶವು ನಾಂದಿಯಾಯಿತು.

ಶ್ರೀ ಆದಿ ಶಂಕರಾಚಾರ್ಯರು ತಾವು ಪಡೆದ ಶ್ರೀ ಮೂಕಾಂಬಿಕಾ ದೇವಿಯ ಒಂದು ದರ್ಶನ ಅಥವಾ ಅಂತರ್ದೃಷ್ಟಿಯ ಅನುಸಾರವಾಗಿ ಈ ದೇವತೆಯನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂಬುದಾಗಿ ನಂಬಲಾಗಿದೆ.

ಆ ಕಥೆಯು ಹೀಗೆ ಸಾಗುತ್ತದೆ. ಕೊಡಚಾದ್ರಿ ಬೆಟ್ಟಗಳಲ್ಲಿ ಆದಿ ಶಂಕರರು ಧ್ಯಾನಮಾಡಿದರು ಮತ್ತು ಅವರ ಮುಂದೆ ಪ್ರತ್ಯಕ್ಷಳಾದ ದೇವಿಯು ಅವರ ಬಯಕೆಯೇನೆಂದು ಕೇಳಿದಳು.

ತಾನು ಪೂಜಿಸಲು ಬಯಸಿರುವ ಕೇರಳದಲ್ಲಿನ ಸ್ಥಳವೊಂದರಲ್ಲಿ ದೇವಿಯನ್ನು ಸಂಘಟಿಸಿ-ಸ್ಥಾಪಿಸುವ ತಮ್ಮ ಬಯಕೆಯನ್ನು ಅವರು ಹೊರಗೆಡವಿದರು.ಇದಕ್ಕೆ ದೇವಿ ಸಮ್ಮತಿಸಿದಳು ಮತ್ತು ಅವರ ಮುಂದೆ ಒಂದು ಸವಾಲನ್ನೂ ಇರಿಸಿದಳು.

ತಾನು ಶಂಕರರನ್ನು ಅನುಸರಿಸುವುದಾಗಿಯೂ ಮತ್ತು ಶಂಕರರು ತಮ್ಮ ಗಮ್ಯಸ್ಥಾನವನ್ನು ತಲುಪುವರೆಗೂ ಹಿಂದಿರುಗಿ ನೋಡಬಾರದೆಂಬುದೇ ಈ ಸವಾಲಾಗಿತ್ತು.

ಆದರೆ ಶಂಕರರನ್ನು ಪರೀಕ್ಷಿಸುವ ದೃಷ್ಟಿಯಿಂದ ದೇವಿಯು ತನ್ನ ನಡೆಗೆ ಉದ್ದೇಶಪೂರ್ವಕವಾಗಿ ಅಲ್ಪವಿರಾಮ ನೀಡಿದಳು.

ದೇವಿಯ ಕಾಲ್ಗೆಜ್ಜೆಗಳ ಧ್ವನಿಯು ಶಂಕರರಿಗೆ ಕೇಳದಾದಾಗ, ಅವರು ತತ್‌ಕ್ಷಣವೇ ಹಿಂದಿರುಗಿ ನೋಡಿದರು. ಆಗ ದೇವಿಯು ಅವರನ್ನು ಅನುಸರಿಸುವುದನ್ನು ನಿಲ್ಲಿಸಿದಳು ಮತ್ತು ತನ್ನನ್ನು ಶಂಕರರು ನೋಡುತ್ತಿದ್ದಂತೆ ಆ ಸ್ಥಳದಲ್ಲಿ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ಶಂಕರರಿಗೆ ತಿಳಿಸಿದಳು.

ಕೊಲ್ಲೂರು ಕ್ಷೇತ್ರವು, ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಹಬ್ಬಿದ್ದ ಪ್ರಾಚೀನ ಕೇರಳದ ಒಂದು ಭಾಗವೂ ಆಗಿತ್ತು.

ಕೇರಳದ ಹುಟ್ಟಿನ ಕುರಿತಾದ ಒಂದಷ್ಟು ಪುರಾಣ ಕಥೆಗಳನ್ನು ಕಾಣಬಹುದಾಗಿದೆ. ಓರ್ವ ಯೋಧಸನ್ಯಾಸಿ ಅಥವಾ ವೀರಸನ್ಯಾಸಿಯಾಗಿದ್ದ ಪರಶುರಾಮನಿಂದ ಕೇರಳವು ಸೃಷ್ಟಿಯಾದದ್ದು ಅಂಥದ್ದೊಂದು ಪುರಾಣ ಕಥೆ ಎನಿಸಿಕೊಂಡಿದೆ.

ಬ್ರಾಹ್ಮಣರ ಪುರಾಣವು ಪ್ರಕಟಪಡಿಸುವ ಪ್ರಕಾರ, ಮಹಾವಿಷ್ಣುವಿನ ಒಂದು ಅವತಾರವಾದ ಪರಶುರಾಮನು ತನ್ನ ಕದನ ಕೊಡಲಿಯನ್ನು ಸಮುದ್ರದೊಳಗೆ ಎಸೆದ. ಇದರ ಪರಿಣಾಮವಾಗಿ ಕೇರಳದ ಭೂಭಾಗವು ಹುಟ್ಟಿಕೊಂಡಿತು ಮತ್ತು ಜಲರಾಶಿಯಿಂದ ಇದನ್ನು ವಾಸಯೋಗ್ಯವನ್ನಾಗಿ ಪರಿವರ್ತಿಸಲಾಯಿತು.

ವಿಷ್ಣುವಿನ ಹತ್ತು ಅವತಾರಗಳ (ಮೈದಾಳುವಿಕೆ) ಪೈಕಿ ಪರಶುರಾಮನದು ಆರನೆಯ ಅವತಾರವಾಗಿತ್ತು. ಪರಶು ಎಂಬ ಪದವು ಸಂಸ್ಕೃತದಲ್ಲಿ ‘ಕೊಡಲಿ’ ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ಪರಶುರಾಮ ಎಂದರೆ ‘ಕೊಡಲಿಯನ್ನು ಹೊಂದಿರುವ ರಾಮ’ ಎಂದರ್ಥ.

ಆಳುವ ಕುಲಕ್ಕೆ ಸೇರಿದ ಕ್ಷತ್ರಿಯರ ಸೊಕ್ಕಿನ ಪೀಡನೆಯಿಂದ ಪ್ರಪಂಚವನ್ನು ವಿಮೋಚನೆಗೊಳಿಸುವುದು ಅವನ ಜನನದ ಗುರಿಯಾಗಿತ್ತು. ಭೂಮಿಯ ಮೇಲಿನ ಎಲ್ಲಾ ಪುರುಷ ಕ್ಷತ್ರಿಯರನ್ನು ಅವನು ಸಾಯಿಸಿದ ಮತ್ತು ಅವರ ರಕ್ತವನ್ನು ಐದು ಸರೋವರಗಳಲ್ಲಿ ಭರ್ತಿಮಾಡಿದ.

ಕ್ಷತ್ರಿಯ ರಾಜರನ್ನು ನಾಶಪಡಿಸಿದ ನಂತರ, ತನ್ನ ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವ ಮಾರ್ಗವೊಂದನ್ನು ಕಂಡುಕೊಳ್ಳಲು ಅವನು ವಿದ್ವಜ್ಜನರ ಸಮೂಹವನ್ನು ಸಂಪರ್ಕಿಸಿದ.

ಶಾಶ್ವತ ನರಕ-ಶಿಕ್ಷೆಯಿಂದ ತನ್ನ ಆತ್ಮವನ್ನು ರಕ್ಷಿಸಿಕೊಳ್ಳಬೇಕೆಂದರೆ, ತಾನು ಜಯಿಸಿದ್ದ ಭೂಭಾಗಗಳನ್ನು ಬ್ರಾಹ್ಮಣರಿಗೆ ಅವನು ಹಸ್ತಾಂತರಿಸಬೇಕು ಎಂಬ ಸಲಹೆಯು ಅವನಿಗೆ ದಕ್ಕಿತು. ಅವರು ಸಲಹೆ ನೀಡಿದಂತೆಯೇ ಅವನು ನಡೆದುಕೊಂಡ ಮತ್ತು ಗೋಕರ್ಣಂನಲ್ಲಿ ಧ್ಯಾನಕ್ಕೆ ಕುಳಿತುಕೊಂಡ.

ಅಲ್ಲಿ ಸಾಗರಗಳ ದೇವರಾದ ವರುಣ ಮತ್ತು ಭೂಮಿಯ ದೇವತೆಯಾದ ಭೂಮಿದೇವಿ ಅವನನ್ನು ಹರಸಿದರು.

ಗೋಕರ್ಣಂನಿಂದ ಹೊರಟು ಅವನು ಕನ್ಯಾಕುಮಾರಿಯನ್ನು ತಲುಪಿದ ಮತ್ತು ತನ್ನ ಕೊಡಲಿಯನ್ನು ಸಾಗರದ ಆ ಬದಿಯ ಉತ್ತರದ ಕಡೆಗೆ ಎಸೆದ.

ಆ ಕೊಡಲಿಯು ಬಂದು ನೆಲೆಗೊಂಡ ಸ್ಥಳವು ಕೇರಳವಾಗಿತ್ತು. ಇದು ಗೋಕರ್ಣಂ ಮತ್ತು ಕನ್ಯಾಕುಮಾರಿಗಳ ನಡುವೆ ನೆಲೆಗೊಂಡಿರುವ ೧೬೦ ಕಾತಮ್‌ನಷ್ಟಿರುವ (ಒಂದು ಹಳೆಯ ಅಳತೆ) ಭೂಭಾಗವಾಗಿತ್ತು.
Saakshatv astrology kollur

ಪುರಾಣಗಳು ಹೇಳುವ ಪ್ರಕಾರ, ಪರಶುರಾಮನು ೬೪ ಬ್ರಾಹ್ಮಣ ಕುಟುಂಬಗಳನ್ನು ಕೇರಳದಲ್ಲಿ ನೆಲೆಗೊಳಿಸಿದ; ಕ್ಷತ್ರಿಯರನ್ನು ತಾನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು ಇವರನ್ನು ಆತ ಉತ್ತರದಿಂದ ಕರೆತಂದ.

ಶ್ರೀ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಪುರಾಣಗಳ ಅನುಸಾರ, ಕೇರಳವು ಪರಶುರಾಮ ಕ್ಷೇತ್ರಂ, ಅಂದರೆ, ‘ಪರಶುರಾಮನ ಭೂಭಾಗ’ ಎಂಬುದಾಗಿಯೂ ಕರೆಯಲ್ಪಡುತ್ತದೆ; ಸಮುದ್ರದಿಂದ ಸದರಿ ಭೂಭಾಗವನ್ನು ಅವನು ವಾಸಯೋಗ್ಯವಾಗಿಸಿದ ಎಂಬ ಐತಿಹ್ಯವೇ ಈ ಹೆಸರಿಗೆ ಕಾರಣ.

#Saakshatv #astrology #kollur

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd