ನಿನ್ನೊಂದಿಗೆ ಯಾವಾಗಲೂ ನಾನಿರುವೆ ,,, ಎಂದು ನಾನೆಂದೂ ಹೇಳುವುದಿಲ್ಲ..
ನಿನ್ನ ಪ್ರತಿ ಖುಷಿಯಲ್ಲಿ , ನೋವಿನಲ್ಲಿ ಜೊತೆಗಿರುವೆ ಅಂತ ಯಾರಿಗೂ ಹೇಳೋದಿಲ್ಲ..
ಸಮಯ ಬಂದಾಗ ನಾನು ನೆರವಾಗುವಾಗುವೇ , ಕಷ್ಟದ ಕಾಲದಲ್ಲಿ ಕೈಹಿಡಿಯುವೆ ಅಂತ ಅಪ್ಪಿತಪ್ಪಿನೂ ಹೇಳೋದಿಲ್ಲ..
ಮೊದಲನೇಯದ್ದು ಕಷ್ಟ ಬಂದಾಗ ನಿನ್ನ ನೆರಳೇ ನಿನ್ನ ಜೊತೆಗಿರಲ್ಲ ಅಂದಾಗ ನಾನು ಬರುತ್ತೀನಿ ಅನ್ನೋ ಮಾತನ್ನ ಹೇಗೆ ನಂಬುತ್ತೀಯ.. ಅದಕ್ಕೆ ಸುಳ್ಳು ಆಶ್ವಾಸನೆ ನಾನೂ ಕೊಡೊಧಿಲ್ಲ..
ಇವತ್ತಿದ್ದೀನಿ ನಾಳೆ ಸೂರ್ಯನ ನೋಡ್ತಿನೋ ಇಲ್ವೋ ನನಗೂ ಗೊತ್ತಿಲ್ಲ..
ಅದಕ್ಕೆ ನಾನು ನಿನ್ನ ಜೊತೆಗೆ ಸದಾ ಇರುತ್ತೀನಿ ಅಂತ ಯಾರಿಗೂ ಯಾವತ್ತೂ ಹೇಳಲ್ಲ..
– ನಿಹಾರಿಕಾ ರಾವ್ –