( ಇದು ಧಾರಾವಾಹಿಯಾಗಿದ್ದು , ಪ್ರತಿ ದಿನ Saakshatv Authour Special ವಿಭಾಗದಲ್ಲಿ ಸಂಜೆ 6.30 ಕ್ಕೆ ಒಂದೊಂದು ಅಧ್ಯಾಯಗಳನ್ನ ಹಾಕುತ್ತಾ ಹೋಗುವೆ.. – ನಿಹಾರಿಕಾ ರಾವ್ )
ಮೊದಲ ಅಧ್ಯಾಯದ ಲಿಂಕ್ –
ಅಧ್ಯಾಯ 2 ರ ಲಿಂಕ್
ಅಧ್ಯಾಯ -3
” ಜೊತೆಯಲ್ಲಿದ್ದರೂ ದೂರ ದೂರ…”
ರಾಯ್ – ದೀಪಾಲಿ ಮದುವೆ ಸಂಭ್ರನದಿಂದ ನೆರವೇರಿತು.. ನವಜೋಡಿ ದೊಡ್ಡವರ ಬಳಿ ಆಶೀರ್ವಾದ ಪಡೆದರು.. ಎಲ್ಲ ಅತಿಥಿಗಳು ನವ ಜೋಡಿಗಳಿಗೆ ಆಶಿರ್ವದಿಸಿ ಉಡುಗೊರೆ ನೀಡಿ ಹೊರಟರು.. ನೋಡ ನೋಡ್ತಿದ್ದಂತೆ ಹಾಲ್ ಖಾಲಿ ಆಯ್ತು.. ದೀಪಾಲಿ ಕೂಡ ಶಾಸ್ತ್ರದಂತೆ ರಾಯ್ ಹಾಗೂ ಮನೆವರ ಜೊತೆ ಕುಳಿತು ಊಟ ಮಾಡಿದರು..
ಎಲ್ಲ ಶಾಸ್ತ್ರ ಮುಗಿದು ಇನ್ನೇನು ವಧುವನ್ನ ವರನ ಮನೆಗೆ ಕಳುಹಿಸಿಕೊಡುವ ಘಳಿಗೆ ಬಂದೇ ಬಿಡ್ತು.. ದೀಪಾಲಿ ಮನೆವರ ಕಣ್ಣಲ್ಲಿ , ಸ್ನೇಹಿತೆಯರ ಕಣ್ಣಲ್ಲಿ ನೀರು ತುಂಬಿತ್ತು.. ತಾಯಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.. ಆದ್ರೆ ದೀಪಾಲಿ ಕಣ್ಣಲ್ಲಿ ಈಗಲೂ ಹತಾಶೆ , ಬೇಸರ ಬಿಟ್ಟರೆ ಮತ್ಯಾವ ಭಾವವೂ ಕಾಣಿಸುತ್ತಿರಲಿಲ್ಲ..
ಅವರ ತಾಯಿ ಬಂದು ದೀಪಾಲಿಯನ್ನ ಹಿಡಿದು ಬಿಕ್ಕಿ ಬಿಕ್ಕಿ ಅತ್ತರು.. ದೀಪಾಲಿ ಅವರ ತಾಯಿಯನ್ನ ಸಮಾಧಾನ ಪಡಿಸುತ್ತಾ.. “ಅಮ್ಮಾ ಅಳು ನಿಲ್ಸು” ನಾನೇನು ಅಮೇರಿಕಾದಲಿದ್ದೀನಾ..? 2 ನಿಮಿಷದ ದಾರಿ ನಿಮ್ ಮನೆಗೂ ಅವರ ಮನೆಗೂ ಅಷ್ಟೇ.. ಒಂದೇ ರೋಡ್ ನಲ್ಲೇ ಅಕ್ಕಪಕ್ಕ ಮನೆ ಇಟ್ ಕೊಂಡು ಗೋಳಾಡ್ತಿಯ ಯಾಕೆ..?”
ದೀಪಾಲಿ ತಾಯಿ : ಆದ್ರೂ ಮಗಳೇ ನಮ್ ಮನೆಲಿ ಇದ್ಯಾ ಅಂತ ಅನ್ನಿಸೋದಿಲ್ವಾಲ್ಲ..
ಅಂತ ಬೇಜಾರಾಗ್ತಾಯಿದ್ದಂತೆ..
ರಾಯ್ ತಾಯಿ : ” ಹೇ ಸುಮತಿ ( ದೀಪಾಲಿ ತಾಯಿ) ನಿಂದ್ ಅತಿ ಆಯ್ತು ಕಣೆ.. ನಾನು ಬೇರೆ ಅವರ ನೀನು ವಾಲೀಶ್ ಅವರು ಮಾತೆತ್ತಿದ್ರೆ ನಮ್ ಮನೆ , ನಾವು ನಿಮ್ ಮನೆಲೇ ಇರುತ್ತೇವೆ.. ಒಂದೇ ರೋಡ್ ಅಲ್ಲೇ ಮನೆ ಇರೋದು.. ಏನೋ ಅವಳು ದೇಶ ಬಿಟ್ಟು ಹೋಗೋ ತರ ಅಳ್ತಿಯಾ.. ಅವಳು ನನ್ನ ಸೊಸೆ ಅಲ್ಲ ಮಗಳು.. ಮುದ್ದಾಗಿ ನೋಡಿಕೊಳ್ತೀನಿ ಅಂತ ಹೇಳ್ತಾ ಸಮಾಧಾನ ಮಾಡ್ ತಾರೆ..
ಅವರ ಮಾತು ಸರೀನೇ….
ಹಾಗಾಗಿ ಕಣ್ಣೀರು ಒರೆಸಿಕೊಳ್ತಾ ದೀಪಾಲಿ ತಾಯಿ ರಾಯ್ ಕೈ ಹಿಡಿದು ” ನನ್ ಮಗಳನ್ನ ನೀನು ಕಣ್ಣಲ್ಲಿ ಕಣ್ಣಿಟ್ಟು ನೋವಾಗದ ರೀತಿ ಸಾಕ್ತಿಯ ಅನ್ನೋದು ನನಗೆ ಗೊತ್ತು.. ಆದ್ರೂ ಅವಳಿಗೆ ನೋವು ಕೊಡಲ್ಲಾ ತಾನೆ” ಅಂತಿದ್ದಂತೆ
ರಾಯ್ ನಗುತ್ತಾ “ಆಂಟಿ ಅವಳು ನನ್ ಜವಬ್ದಾರಿ… ಅವಳು ಇನ್ ಮುಂದೆ ನನ್ ಉಸಿರು , ಅವಳನ್ನ ಕಾಪಾಡೋದು , ಅವಳನ್ನ ಖುಷಿಯಾಗಿಡೋದು ನನ್ ಕರ್ತವ್ಯ.. ಅವಳು ನನ್ನವಳು.. ಅವಳ ಪ್ರತಿ ಸುಖ ದುಖದಲ್ಲಿ ನಾನು ಪಾಲುದಾರ” ಅಂತ ಅವರ ಕೈ ಹಿಡಿದು ಸಮಾಧಾನ ಮಾಡ್ತಾ ದೀಪಾಲಿ ಕಡೆ ನೋಡ್ತಾನೆ..
ಅಲ್ಲಿದ್ದವರೆಲ್ಲರೂ ರಾಯ್ ಮಾತು ಕೇಳಿ ತುಂಬಾ ಖುಷಿ ಜೊತೆಗೆ ಎಮೋಷನಲ್ ಆಗ್ತರೆ.. ದೀಪಾಲಿ ತಾಯಿ ತಂದೆ , ಸ್ನೇಹಿತೆಯರಂತೂ ತುಂಬಾ ಖುಷಿ ಜೊತೆಗೆ ಸಮಾಧಾನರಾಗ್ತರೆ.. ಆದ್ರೆ ದೀಪಾಲಿ ಅವನ ಮಾತು ಕೇಳಿ ಸ್ವಲ್ಪ ಶಾಕ್ ಆದ್ರೂ ಕಣ್ಣನ್ನ ಮತ್ತೊಂದೆಡೆ ತಿರುಹಿಸುತ್ತಾಳೆ..
ರಾಯ್ ತಂದೆ ತಾಯಿ ಅವನ ಮಾತು ಕೇಳಿ ಹೆಮ್ಮೆಯಿಂದ ಅವನ ಹೆಗಲು ತಟ್ಟುದ್ರೆ ಅವರ ಸ್ನೇಹಿತರು ಚಪ್ಪಾಳೆ ಬಾರಿಸುತ್ತಾರೆ.. ರಿದಿಮಾ ಸನ್ನಿಧಿ ಮನಸಲ್ಲೆ ಆ ಲೋಫರ್ ತಾರಕ್ ಗಿಂತ ರಾಯ್ 1೦೦೦ ಪಟ್ಟು ಉತ್ತಮ ಅಂತ ನಿರಾಳರಾಗ್ತಾರೆ. ಆದ್ರೆ ದೀಪಾಲಿ ಮಾತು ನೆನಪಿಸಿಕೊಂಡು ಪಾಪ ರಾಯ್ ಅಂತ ಬೇಜಾರಾಗ್ತಾರೆ..
ಅಜಂತ್ ದಿಗಂತಾಸ್ ಅವರು ವಾಲೀಶ್ ಆಚಾರ್ಯ ಅವರ ಕೈ ಹಿಡಿದು ಹೇ ವಾಲಿ ಅವಳು ನನ್ನ ಮಗಳು.. ಅವಳು ಇಂಡಿಪೆಂಡೆಂಟ್ ಕೂಡ.. ಅವಳಿಗೇನ್ ಇಷ್ಟನೋ ಅದುಕ್ಕೆ ನಾವ್ ಅಡ್ಡಿ ಬರಲ್ಲ.. ಅವಳು ನನ್ನ ಸೊಸೆ ಅಲ್ಲ ಮಗಳು.. ಅವಳು ನಮ್ ಮನೆಲೆ ಹೇಗಿರುತ್ತಾಳೆ.. ನಿನಗೂ ಗೊತ್ತು… ಅಂತ ಅವರನ್ನ ತಬ್ಬಿಕೊಳ್ತಾರೆ.. ಎಲ್ಲರೂ ದೀಪಾಲಿಯನ್ನ ಅಪ್ಪಿ ಗಂಡನ ಮನೆಗೆ ಕಳುಹಿಸಿಕೊಡಲು ಸಿದ್ಧರಾಗ್ತಾರೆ.. ಆದ್ರೆ ಅವರ ತಂದೆ ಬಂದು ದೀಪಾಲಿಯನ್ನ ಅಪ್ಪಿಕೊಳ್ಳಲು ಹೋಗುತ್ತಾರೆ.. ಆದ್ರೆ ದೀಪಾಲಿ ಅದನ್ನ ತಿರಸ್ಕರಿಸಿ ಕಣ್ಣಲ್ಲೇ ಒಂದ್ ರೀತಿ ಸಿಟ್ಟಿನ ಭಾವನೆ ತರುತ್ತಾ… ಎಲ್ಲರಿಗೂ ಬಾಯ್ ಮಾಡಿ ಹೋಗಿ ಕಾರಲ್ಲಿ ಕೂರುತ್ತಾಳೆ.. ಅವಳ ನಡವಳಿಕೆ ಯಾಕೆ ಈ ರೀತಿ ಬದಲಾಗಿದೆ ಅನ್ನೋ ಸತ್ಯ ಅವರ ತಂದೆಗೆ ಗೊತ್ತಿತ್ತು.. ಹೀಗಾಗಿ ಅವರು ತುಂಭಾ ಬೇಸರ ಆದ್ರೂ, ದುಃಕ ಆದ್ರೂ ಅದನ್ನ ತೋರಿಸಿಕೊಳ್ಳಲ್ಲಿಲ್ಲ..ಆದ್ರೆ ಇದ್ರಿಂದ ದೀಪಾಲಿ ತಾಯಿ ಬಹಳ ನೊಂದುಕೊಂಡ್ರು.. ರಾಯ್ ಹಾಗೂ ಅವರ ಅಪ್ಪ ಅಮ್ಮ , ಸ್ನೇಹಿತರೂ ದೀಪಾಲಿ ವರ್ತನೆಯಿಂದ ಬೇಜಾರಾದ್ರೂ.. ಆದ್ರು ಯಾರೂ ಒಂದ್ ಅಕ್ಷರ ಮಾತನಾಡಲಿಲ್ಲ.. ದೀಪಾಲಿ ಕಡೆಯವರಲ್ಲಿ ದುಃಖ ಇತ್ತು.. ದೀಪಾಲಿ ಕಣ್ಣಲ್ಲಿ ಸಿಟ್ಟಿತ್ತು..
ಯಾರೂ ಒಂದ್ ಅಕ್ಷರ ಮಾತನಾಡದೇ ಹೋಗಿ ಕಾರುಗಳಲ್ಲಿ ಕುಳಿತರು.. ದೀಪಾಲಿ ರಾಯ್ ಕೂಡ… ಅಲಂಕೃತಗೊಂಡಿದ್ದ ಐಶಾರಾಮಿ ಕಾರ್ ನಲ್ಲಿ ವಧು ವರರು ಹೊರಟರು.. ಹಿಂದೆ ಎಲ್ಲಾ ಕಾರ್ ಗಳು ಹೊರಟವು..
ರಸ್ತೆ ತುಂಬಾ ರಾಯ್ ದೀಪಾಲಿಯನ್ನೇ ನೋಡುತ್ತಾ ಕುಳಿತಿದ್ದ.. ಆದ್ರೆ ದೀಪಾಲಿ ಒಂದ್ ಅಕ್ಷರ ಮಾತನಾಡಲಿಲ್ಲ.. ರಾಯ್ ಅವಳು ಮನೆಯವರನ್ನ ಬಿಟ್ಟುಬಂದ ದುಃಖದಲ್ಲಿಇರಬೇಕು ಅಂತ ಏನೂ ಮಾತನಾಡದೇ ಸುಮ್ಮನೇ ಇದ್ದ..
ಇತ್ತ ರಾಯ್ ಮನೆ ಮುಂದೆ ಆಗ್ಲೀ ದೀಪಾಲಿ ಮನೆ ಮುಂದೆ ಆಗ್ಲಿ ಕಾರ್ ನಿಲ್ಲಲಿಲ್ಲ ಬದಲಾಗಿ ಅದೇ ರಸ್ತೆಯಲ್ಲೇ ಸ್ವಲ್ಪ ದೂರದಲ್ಲಿ ಮತ್ತೊಂದು ದೊಡ್ಡ ಐಶಾರಾಮಿ ಸುಂದರ ಬಂಗಲೆ ಎದುರು ಕಾರು ನಿಂತಿತು.. ರಾಯ್ ದೀಪಾಲಿ ಇಬ್ಬರೂ ಆಶ್ಚರ್ಯದಿಂದ ಕೆಳಗೆ ಇಳಿದ್ರು..
ಅಲ್ಲಿ ದೀಪಾಲಿ ಪರಿವಾರದವರೂ ಇದ್ದರೂ..
ರಾಯ್ : ಡ್ಯಾಡ್ ಇಲ್ಲಿಗೆ ಯಾಕೆ ಬಂದ್ವಿ…
ರಾಯ್ ತಂದೆ ಹಾಗೂ ದೀಫಾಲಿ ತಂದೆ ನಗುತ್ತಾ
ಸರ್ಪ್ರೈಸ್… ಅಂತ ಜೋರಾಗಿ ಕಿರುಚುತ್ತಾ..!
ಇದು ನಿಮ್ಮಿಬ್ಬರಿಗೆ ಹೊಸ ಮನೆ ಇಲ್ಲಿಂದ ನಿಮ್ಮ ಪ್ರೈವೆಸಿ ಜೊತೆಗೆ ನಿಮ್ಮ ಹೊಸ ಜೀವನ ಆರಂಭ ಅಂತಿದ್ದ ಹಾಗೆ.. ರಾಯ್ ಹಾಗೂ ದೀಪಾಲಿ ಶಾಕ್ ಆಗ್ತಾರೆ..
ಇದು ರಾಯ್ ಹಾಗೂ ದೀಪಾಲಿ ಮನೆಯವರ ಗಿಫ್ಟ್ ಆಗಿರುತ್ತೆ..
ರಾಯ್ : ( ಆಶ್ವರ್ಯದಲ್ಲಿ ) ಅಪ್ಪ ನಾವೆಲ್ಲಾ ನಿಮ್ ಜೊತೆ ಇರುತ್ತೇವೆ.. ಅದೇ ಮನೆ ಅಷ್ಟು ದೊಡ್ಡದಿದೆ.. ಇದು ಯಾಕೆ..?
ರಾಯ್ ತಂದೆ : ನಗುತ್ತಾ, ನಾವು ಊರು ಬಿಟ್ಟುಹೋಗ್ತಿದ್ದೀವಾ.. ಎಲ್ಲಾ ಒಂದೇ ರೋಡ್ ಅಲ್ಲಿದ್ದೀವಿ.. ನಿಮಗೆ ಪ್ರೈವೆಸಿ ಇರಲಿ ಅಂತ… ಹೇಳಿ ಮಾತ್ ನಿಲ್ಲಿಸಿ ಮನೆ ನೋಡು ಬಾ ಅಂತ ಒಳಗೆ ಕರೆದುಕೊಂಡು ಹೋಗ್ತಾರೆ..
ಮೊದಲಿಗೆ ರಾಯ್ ತಾಯಿ ಒಳಗಡೆ ಓಡಿ ಹೋಗಿ ಮನೆ ಕೆಲಸದವರ ಸಹಾಯದಿಂದ ಬಾಗಿಲಲ್ಲಿ ಸೇರಿಟ್ಟು ದೀಪಾಲಿಗೆ ಬಲಗಾಲಲ್ಲಿ ಅದನ್ನ ಒದ್ದು ಒಳಗೆ ಬರುವಂತೆ ಹೇಳ್ತಾರೆ.. ಈ ಶಾಸ್ತ್ರವೂ ಮುಗಿದ ನಂತರ ದೀಪಾಲಿ ರಾಯ್ ಗೆ ಆರತಿ ಬೆಳಗಿ ಒಳಗೆ ಕರೆದುಕೊಂಡು ಹೋಗಲಾಗುತ್ತೆ..
ಎಲ್ಲರೂ ಮನೆ ಡಿಸೈನ್ ಮಾಡಿದ್ದ ರೀತಿಗೆ ಬೆರಗಾಗುತ್ತಾರೆ.. ಗೋಲ್ಡನ್ ವೈಟ್ ಬಣ್ಷದಲ್ಲಿ , ಆಂಟಿಕ್ ಪೀಸ್‌ಗಳ , ಜೋಡಣೆ ಇರಬಹುದು, ಕಾರ್ಪೆಟ್ ಸೋಫಾ ಸೆಟ್ ಲೈಟಿಂಗ್ಸ್ ಎಲ್ಲವೂ ಅದ್ಭುತವಾಗಿರುತ್ತೆ.. ಮನೆಯಲ್ಲಿ 3 ಬೆಡ್ ರೂಮ್ ಗಳು ಇರುತ್ವೆ .. ಇನ್ನೂ ವಿಶೇಷ ಅಂದ್ರೆ ಎಲ್ಲಿ ನೋಡಿದ್ರೂ ರಾಯ್ ದೀಪಾಲಿಯ ಕಪಲ್ ಫೋಟೋಗಳು , ಸಿಂಗಲ್ ಫೋಟೋಗಳು , ಅವರ ಬಾಲ್ಯದ ಫೋಟೋಗಳು , ಅವರಿಬ್ಬರ ಇಡೀ ಫ್ಯಾಮಿಲಿ ಫೋಟೋಗಳನ್ನ ಹಾಕಲಾಗಿರುತ್ತೆ.. ರಾಯ್ ಅಂತೂ ಸಖತ್ ಖುಷಿ ಹಾಗೂ ಎಕ್ಸೈಟ್ ಆಗಿರುತ್ತಾನೆ.. ಆದ್ರೆ ದೀಪಾಲಿಗೆ ಯಾವ ಎಕ್ಸೈಟ್ ಮೆಂಟ್ ಇರಲ್ಲ ಖುಷಿ ಇರಲ್ಲ.. ಬದಲಾಗಿ ಇರಿಟೇಟ್ ಆಗ್ತಾ ಇರುತ್ತಾಳೆ.. ಮನೆ ಎಲ್ಲಾ ನೋಡಿ ಆದ ನಂತರ …
ರಾಯ್ ತಾಯಿ ದೀಪಾಲಿ ನೀನು ಮೊದಲು ಹೋಗಿ ಡ್ರೆಸ್ ಚೇಂಜ್ ಮಾಡಿ ಸಿಂಪಲ್ ಡ್ರೆಸ್ ಹಾಕೋ ಬಾ ಮಗಳೇ ತುಂಬಾ ಸುಸ್ತಾಗಿರುತ್ತೀಯ ಅಂದಿದ್ಧೆ ತಡ ಅವರ ಸ್ನೇಹಿತೆಯರು ದೀಪಾಲಿಯನ್ನ ರೂಮ್ ಗೆ ಕರೆದುಕೊಂಡು ಹೋಗ್ತಾರೆ.
. ಅಲ್ಲಿ ಮೊದಲೇ ಗುಲಾಬಿ ಬಣ್ಣದ ಸಿಂಪಲ್ ಒನ್ ಪೀಸ್ ಗೌನ್ ಇಡಲಾಗಿರುತ್ತೆ.. ದೀಪಾಲಿ ಅದನ್ನ ಹಾಕಿಕೊಂಡು ಬಂದು ರಿದಿಮಾ ಸನ್ನಿಧಿ ಸಹಾಯದಿಂದ ಜಡೆ ಬಿಲ್ಲೆ ಒಡವೆಗಳನ್ನೆಲ್ಲ ಬಿಚ್ಚಿ ಕೂದಲನ್ನ ಬಾಚಿ ಪ್ರೀ ಹೇರ್ಸ್ ಬಿಡ್ತಾಳೆ..
ರಿದಿಮಾ : ಹೇ ದೀಪು ಸ್ವಲ್ಪ ನಗು ಈಗ ರಾಯ್ ಹೆಂಡತಿ ಅವನ ಜೊತೆ ಈ ಮನೆಲೆ ಸಂತೋಷವಾಗಿ ಇರಬೇಕು ಅಂತಿದ್ದಂತೆ
ದೀಪಾಲಿ : (ಸಿಟ್ಟಲ್ಲಿ ) ಕನ್ನಡಿಯನ್ನ ಗುರಾಯಿಸುತ್ತಾ ಮದ್ವೆಯಾಗಿದ್ದೀವಿ… “ಜೊತೆಯಲ್ಲಿದ್ದೀವಿ ಆದ್ರೆ ದೂರ ದೂರ”
– ನಿಹಾರಿಕಾ ರಾವ್ –
ಲೇಖಕರ ಮಾತು..!!
( ಕಥೆ ಇಷ್ಟವಾದಲ್ಲಿ ಕಾಮೆಂಟ್ ಮಾಡಿ.. ಸಾಧ್ಯವಾದಲ್ಲಿ ಈ ಲೇಖನದ ಲೇಖಕಿಯಾದ ನಾನು ನಿಹಾರಿಕಾ ಅಲ್ಲಿ ನಿಮ್ಮ ಕಾಮೆಂಟ್ ಗೆ ಪ್ರತಿಕ್ರಿಯಿಸುವ ಪ್ರಯತ್ನ ಮಾಡುವೆ… )
( ಇದನ್ನ ಈ ಹಿಂದೆ ಎಲ್ಲಾದ್ರೂ ಓದಿದ್ದೀರಾ ಎಂದಾದರೆ ಅದು ನನ್ನದೇ ರಚನೆಯಾಗಿರುತ್ತೆ – ಪ್ರತಿಲಿಪಿಯಲ್ಲಿ ನಾನು ‘Niharika Rao Nammu’ ಅಲ್ಲಿಯೇ ನನ್ನ ಈ ಬರಹವನ್ನ ನೀವು ಓದಿರುತ್ತೀರಿ ಎಂದರ್ಥ.. ಹಾಗೆಯೇ ಇನ್ನಷ್ಟು ನನ್ನ ಧಾರಾವಾಹಿಗಳು ಬೇಕೆನಿಸಿದರೆ ಕಾಮೆಂಟ್ ಮಾಡಿ ನಾನು ಇಲ್ಲಿ ಇನ್ನು ಒಂದಷ್ಟು ಕಥೆಗಳನ್ನ ಹಾಕುತ್ತಾ ಹೋಗುವೆ.. ಹಾಗೆಯೇ ನೀವು ಪ್ರತಿಲಿಪಿಯಲ್ಲಿದ್ದರೆ ಅಲ್ಲಿ ಬೇಕಿದ್ದರೂ ನನ್ನ ಕಥೆಗಳನ್ನ ಓದಬಹುದು,, )
ಈ ರೀತಿಯಾದ ಇಂಟರೆಸ್ಟಿಂಗ್ ಕಂಟೆಂಟ್ ಗಾಗಿ ನಮ್ಮ Saakshatv.com ಫಾಲೋ ಮಾಡಿ…
ಈ ಧಾರಾವಾಹಿಯನ್ನೂ ಓದಬಹುದು…!! ( 1 -15 ಅಧ್ಯಾಯಗಳ ಎಲ್ಲಾ ಲಿಂಕ್ ಗಳೂ ಕೆಳಗಿವೆ)
ಅಧ್ಯಾಯ – 5
ಅಧ್ಯಾಯ – 6
ಅಧ್ಯಾಯ – 7
ಅಧ್ಯಾಯ – 8