Saakshatv Author special : ಮರು ಅವಕಾಶ ಭಾಗ -2 (ಧಾರವಾಹಿ)
( ಇದು ಧಾರಾವಾಹಿಯಾಗಿದ್ದು , ಪ್ರತಿ ದಿನ Saakshatv Authour Special ವಿಭಾಗದಲ್ಲಿ ಸಂಜೆ 6.30 ಕ್ಕೆ ಒಂದೊಂದು ಅಧ್ಯಾಯಗಳನ್ನ ಹಾಕುತ್ತಾ ಹೋಗುವೆ.. – ನಿಹಾರಿಕಾ ರಾವ್ )
ಮೊದಲ ಅಧ್ಯಾಯದ ಲಿಂಕ್ –
ಅಧ್ಯಾಯ – 2
ಗಟ್ಟಿಮೇಳ…
ಗಟ್ಟಿಮೇಳದ ಸಮಯ ಹತ್ತಿರವಾದಷ್ಟು ವರನ ಎದೆ ಬಡಿತ ಹೆಚ್ವಾಗ್ತಿತ್ತು.. ಕಾರಣ ಅದು ಆತನ ಸಂತೋಷ, ಖುಷಿ.. ಮತ್ತೊಂದೆಡೆ ವಧುವಿನ ಎದೆಬಡಿತವೂ ಹೆಚ್ಚಾಗಿತ್ತು.. ಅದ್ರೆ ಖುಷಿಯಿಂದ ಅಲ್ಲ ಜೀವನ ನಾಶವಾಗುವ ಘಳಿಗೇ ಬಂದೇ ಬಿಡ್ತು ಅಂತ…
ಶಾಸ್ತ್ರಗಳ ನೆರವೇರಿಸಿ ಪುರೋಹಿತರು “ಮಧುಮಗಳನ್ನ ಬೇಗ ಕರೆದುಕೊಂಡು ಬನ್ನಿ” ಅಂದಿದ್ದೇ ತಡ ಮುದ್ದಾಗಿ ರೆಡಿಯಾಗಿ ಸೀರೆಯಲ್ಲಿ ಮಿಂಚುತ್ತಿದ್ದ ಇಬ್ಬರು ಯುವತಿಯರು ಓಡೋಡಿ ವಧುವಿನ ಕೋಣೆಗೆ ಹೋದೋರೆ…. ಹೇ ಆಯ್ತ ದೀಪಾಲಿ ರೆಡಿಯಾಗಿದ್ದು ಬಾ ಬೇಗ ಮಂಟಪಕ್ಕೆ ಕರೀತಿದ್ದಾರೆ ಪುರೋಹಿತರು… ಅಂತ ಸನ್ನಿಧಿ ( ದೀಪಾಲಿ ಚೈಲ್ಡ್ ಹುಡ್ ಫ್ರೆಂಡ್ , ಬೆಸ್ಟ್ ಫ್ರೆಂಡ್ , ಅವಳ ಅಸಿಸ್ಟೆಂಟ್ ) ಬೇಗ ಬೇಗ ಅವಳನ್ನ ಚೇರ್ ಮೇಲಿಂದ ಎಬ್ಬಿಸಿ ಇನ್ನೇನು ಕರೆದುಕೊಂಡು ಹೋಗಬೇಕು, ಅಷ್ಟರಲ್ಲಿ ರಿದಿಮಾ ( ಚೈಲ್ಡ್ ಹುಡ್ ಫ್ರೆಂಡ್ , ಬೆಸ್ಟಿ) ಮಾತನಾಡ್ತಾ ಹೇ ಇರು ಸನ್ನಿಧಿ ಅಂತ ಸ್ವಲ್ಪ ಬೇಸರದಲ್ಲಿ ತಡೆದು ಬಾಡಿಹೋಗಿದ್ದ ಮೊಗದಿಂದಲೇ ಮಂಟಪದ ಕಡೆ ಭಾರವಾದ ಮನಸ್ಸು ಹೊತ್ತು ಮೆಲ್ಲ ಮೆಲ್ಲ ಹೆಜ್ಜೆ ಇಡುತ್ತಿದ್ದ ದೀಪಾಲಿ ಕಡೆ ನೋಡ್ತಾ… ” ಹೇ ದೀಪು ದುಡುಕ್ತಿದ್ದೀಯ ಕಣೆ.. ಮನೇಲಿ ಹೇಳು ಮದುವೆ ಇಷ್ಟ ಇಲ್ಲ ಅಂತ.. ನಿನ್ನ ಜೀವನ ಹಾಳು ಮಾಡಿಕೊಲ್ತಾ ಇದ್ಯಾ.. ಜೊತೆಗೆ ಪಾಪ ಆ ರಾಯ್ ಜೀವನನೂ ಹಾಳ್ ಮಾಡ್ತಾ ಇದ್ಯಾ ಸ್ವಲ್ಪ ಬೇಜಾರಲ್ಲೇ ಬುದ್ದಿವಾದ ಹೇಳ್ತಾಳೆ..
ರಾಯ್ ಹೆಸ್ರನ್ನ ಕೇಳ್ತಿದ್ದಂತೆ ಬೇಸರದಲ್ಲಿದ್ದ ದೀಪಾಲಿ ಮುಖದಲ್ಲಿ ಸಿಟ್ಟು ಎದ್ದು ಕಾಣಿಸುತ್ತೆ.. ಕಣ್ಣುಗಳು ಕೆಂಪಾಗಿರುತ್ತೆ.. ತಕ್ಷಣ ಸಿಟ್ಟಲ್ಲಿ ಅವನನ್ನ ಕೊಲೆ ಮಾಡೋ ಅಷ್ಟು ಕೋಪ ಬರುತ್ತೆ.. ಸಿಟ್ಟಲ್ಲಿ ಉಬ್ಬನ್ನ ಮೇಲೇರಿಸುತ್ತಾ ಹಾಗೇ ಒಂದ್ ಸರತಿ ರಿದಿಮಾ ಕಡೆ ನೋಡ್ತಾಳೆ.. ರಿದಿಮಾ ಓಕೆ ಓಕೆ ಸಾರಿ ಅಂತ ಹೇಳ್ತಾ ಸುಮ್ಮನಾಗ್ತಾಳೆ..
ಸನ್ನಿಧಿ ಹೇ ಸುಮ್ನೆ ಇರೇ ಅಂತ ರಿದಿಮಾಗೆ ಬೈಯುತ್ತಾ… ನಿಜ ಹೇಳ್ತಿನಿ ದೀಪಾಲಿ ನಿನಗೆ ರಾಯ್ ನಿಜವಾಗಲೂ ಸರಿಯಾದ ಜೋಡಿ.. ಅದು ನಿನಗೆ ಇವತ್ತು ಅರ್ಥ ಆಗ್ದೇ ಇರಬಹುದು ಆದ್ರೆ ಮುಂದೆ ಅರ್ಥ ಆಗುತ್ತೆ.. ಪಾಸ್ಟ್ ಮರೆತುಬಿಡು..
ಹೋಗ್ಲಿ ಅಂಕಲ್ ಗೋಸ್ಕರ ಮೂವ್ ಆನ್ ಆಗು ಅಂತ ಹೇಳ್ತಿದ್ದಂತೆ ದೀಪಾಲಿ ಸಿಟ್ಟು ತಾರಕ್ಕೆ ಏರುತ್ತೆ.. ಸಿಟ್ಟಲ್ಲಿ ಹೇ ಶಟ್ ಅಪ್ ಸನ್ನಿಧಿ ನಾನು ಏನಾದ್ರೂ ನಿನ್ ಮನಸ್ಸು ನೋಯಿಸೋ ಮುಂಚೆ ಸುಮ್ನಾಗು ಅವರು ನಮ್ಮ ತಂದೆ ಅಲ್ಲ ನನ್ನ ಶತ್ರು… ನನ್ನ ಆಜನ್ಮ ಶತ್ರು.. ಇನ್ಮುಂದೆ ಇದೇ ನನಗೂ ಅವರಿಗೂ ನಡುವೆ ಇರೋ ಸಂಬಂಧ.. ಅವರು ಸಾಯ್ತಿನಿ ಅಂತ ಬ್ಲಾಕ್ ಮೇಲ್ ಮಾಡ್ತಿರೋದಕ್ಕೆ ನಾನು ಮದುವೆಗೆ ಒಪ್ಪೊದ್ದೀನಿ ಅಂದುಕೊಂಡಿದ್ದಾರೆ.. ಹೌದು ನಿಜ ನಾನು ಅದುಕ್ಕೆ ಮದ್ವೆ ಮಾಡ್ಕೋನಿ ಅಂತ ಒಪ್ಪಿದ್ದು ಮೊದ್ಲು..
ನಮ್ ಅಪ್ಪನ ಉಳಿಸಿಕೊಳ್ಳೋದೇ ಮುಖ್ಯ ಆಗಿತ್ತು.. ಆದ್ರೆ ಈಗ ಅವರನ್ನ ಹಾಳು ಮಾಡೋದೆ ನನ್ನ ಉದ್ದೇಶ… ರಾಯ್… ರಾಯ್ ಜೊತೆ ಜಸ್ಟ್ 6 ತಿಂಗಳಲ್ಲಿ ಡಿವೋರ್ಸ್ ತಗೋತಿನಿ.. ಅವನ ಜೊತೆ ಯಾವುದೇ ರೀತಿ ಸಂಬಂಧ ಬೆಳೆಸಲ್ಲ.. ಅವನ ಮೇಲೆ ಪ್ರೀತಿ ಇರಲಿ ಬೇರೆ ಯಾವುದೇ ಫೀಲಿಂಗ್ಸ್ ಹುಟ್ಟಲ್ಲ ನನಗೆ.. ಅವನು ಹೇಗೆ ಮದ್ವೆ ಆಗೋಕೆ ಇಷ್ಟು ಎಕ್ಸೈಟ್ ಆಗಿದ್ದಾನೋ, ಅಷ್ಟೇ ಆತರದಲ್ಲಿ ಅವನೇ ಡಿವೋರ್ಸ್‌ಗೆ ಬೇಡಿಕೆ ಇಡೋ ಹಾಗೆ ಮಾಡ್ತಿನಿ ಅಂತ ಸಿಟ್ಟಲ್ಲಿ ಉಬ್ವೇರಿಸಿ ತನ್ನ ಒಂದು ಕೈನಲ್ಲಿ ಸೀರಿಯ ನೆರಿಗೆ ಹಿಡಿಯುತ್ತಾ ದುಃಖ , ಒಂದ್ ಕಡೆ ಕೋಪದಲ್ಲಿ ಮಂಟಪದ ಕಡೆ ಹೆಜ್ಜೆ ಹಾಕ್ತಾಳೆ..
ರಿದಿಮಾ , ಸನ್ನಿಧೀ ಅವಳ ಬದಲಾದ ಒರಸೆ ನೋಡಿ ಶಾಕ್ ಆಗಿರುತ್ತಾರೆ.. ರಿದಿಮಾ ಹೇ ಇವಳು ನಮ್ ದೀಪಾಲಿನೇ ತಾನೆ.. ತಂದೆ ಗೋಸ್ಕರ ಆ ಲುಚ್ಚ, ಲಫಂಗ , ತಾರಕ್ ನ ಬಿಟ್ಟು ಮದುವೆಗೆ ಒಪ್ಪಿದ್ಲು ತಾನೆ.. ಮತ್ತೆ ಇದೇನು.. ಅವರ ಅಪ್ಪನ ವಿರುದ್ಧ ಸೇಡು ತೀರಿಸಿಕೊಳ್ತೀನಿ ಅಂತಿದ್ದಾಳೆ ಅಂತ ಹೇಳ್ತಾಳೆ..
ಸನ್ನಿಧಿ ಶ್…!!! ಅಂತ ಸೈಲೆಂಟ್ ಆಗಿರುವಂತೆ ರಿದಿಮಾಗೆ ಸನ್ನೆಯಲ್ಲಿ ಹೇಳ್ತಾ.. ಆ ತಾರಕ್ ಬಗ್ಗೆ ಮಾತಾಡಬೇಡ.. ಅದು ದೀಪಾಲಿ ಕಿವಿಗೆ ಬಿದ್ರೆ ಅವನ ಬಗ್ಗೆ ಕೆಟ್ಟದಾಗಿ ಮಾತಾಡುದ್ವಿ ಅಂತ ನಮ್ ಜೊತೆಗೆ ಮಾತ್ ಬಿಡ್ತಾಳೆ.. ಅವನು ಏನೇ ಮಾಡಿದ್ದಾನೆ ಅಂದ್ರೂ ಅವಳು ನಂಬಲ್ಲ.. ಅದಿಕ್ಕೆ ತಾನೆ ಅವನ ಬಗ್ಗೆ ಗೊತ್ತಿದ್ರೂ ನಾವು ಸುಮ್ನೆ ಇದ್ದು ಕೊನೆಗೆ ಅಂಕಲ್ ಗೆ ಸಪೋರ್ಟ್‌ಮಾಡಿದ್ದು ರಾಯ್ ನ ಮದ್ವೆ ಆಗೋಕೆ.. ಅಂತಿದ್ದ ಹಾಗೆ ರಿದಿಮಾ ಬೇಸರದಲ್ಲಿ ಹೇ ರಾಯ್ ಪಾಪ ಕಣೆ ಎಷ್ಟ್ ಖುಷಿಯಾಗಿದ್ದಾನೆ. ಅವನು ಇವಳನ್ನ ಚಿಕ್ ವಯಸ್ಸಿನಿಂದಲೂ ಪ್ರಾಣಕ್ಕಿಂತ ಹೆಚ್ವಾಗಿ ಪ್ರೀತಿಸ್ತಿದ್ದಾನೆ.. ಅವನ ಹತ್ರ ಗುಣ, ಸ್ಟೇಟಸ್ , ದುಡ್ಡು ಎಲ್ಲಾ ಇದೆ.. ಆದ್ರೂ ಇವಳು ಆ ಲೋಫರ್ ನೇ ಲವ್ ಮಾಡ್ಬೇಕಿತ್ತಾ.. ಅಂತ ಹೇಳ್ತಾಳೆ.
ರಿದಿಮಾ ಹೇ ಮತ್ತೆ ಇವಳು ಹೋಗಿ ತಾರಕ್ ಗೆ ಹೇಳಿಲ್ಲ ಕಣೆ.. ಆದ್ರೆ ಅವನೇ ತುಂಬಾ ದಿನದಿಂದ ಕಾಂಟ್ಯಾಕ್ಟ್ ಸಿಗ್ತಿಲ್ಲ.. ಬಚ್ಚಿಟ್ ಕೊಂಡಿದ್ದಾನೆ ಹೇಡಿ ಅಂತ ಬೈದುಕೊಳ್ತಾ ಬೇಗ ಮೇಗ ಮಂಟಪದ ಕಡೆಗೆ ಹೋಗ್ತಾರೆ..
ಗೊಂಬೆ ರೀತಿ ಅಲಂಕಾರ ಮಾಡಿಕೊಂಡು ಅಪ್ಸರೆಯಂತೆ ನಡೆದುಕೊಂಡು ಒಬ್ಬಳೇ ಮಂಟಪಕ್ಕೆ ಬರುತ್ತಿದ್ದ ದೀಪಾಲಿ ಮೇಲೆ ಅಲ್ಲಿ ಇದ್ದವರ ದೃಷ್ಟಿ ನೆಟ್ಟಿತ್ತು.. ಯಾರ್ ನೋಡಿದ್ರೂ ವಾವ್ ಅಪ್ಸರೆ.. ಎಷ್ಟ್ ಸುಂದರವಾಗಿದ್ದಾಳೆ.. ಆ ದೇವರು ನಿಜವಾಗಲು ಪುರುಸೊತ್ತಿನಲ್ಲಿದದಾಗ್ಲೇ ಅವಳ ಸೃಷ್ಟಿ ಮಾಡಿರಬೇಕು.. ಎಲ್ಲದರಲ್ಲೂ ಪರಿಪೂರ್ಣ , ರಾಯ್ ತುಂಬಾ ಲಕ್ಕಿ.. ಹೇ ಆದ್ರೆ ಇಷ್ಟು ಸುಂದರವಾಗಿದ್ರು ಅವಳ ಮುಖದಲ್ಲಿ ನಗುನೇ ಇಲ್ಲ ಹೀಗೆಲ್ಲಾ ಮಾತುಗಳು ಮಂಟದ ಸುತ್ತಲಿಂದ ಕೇಳಿ ಬರುತ್ತಿರುತ್ತೆ.. ಸ್ಕ್ರೀನ್ ಮೇಲೆ ದೀಪಾಲಿಯನ್ನೇ ಜನ ಒಂದೇ ಸಮ ನೋಡ್ತಾ ಇರುತ್ತಾರೆ.. ದೀಪಾಲಿ ತಲೆಯಲ್ಲಿ ಏನ್ ಓಡ್ತಿದೆ ಅನ್ನೋದರ ಪರಿವೇ ಅಲ್ಲಿ ಯಾರಿಗೂ ಇರೋದಿಲ್ಲ..
ರಾಯ್ ಅಂತೂ ದೀಪಾಲಿಯನ್ನ ನೋಡಿ ಕಳೆದೇ ಹೋಗಿರುತ್ತಾನೆ.. ಕಣ್ಗಳ ಮಿಟುಕಿಸದೇ ಅವಳನ್ನೇ ನೋಡ್ತಾ ಇರುತ್ತಾನೆ.. ಅವಳು ಅದ್ಯಾವಾಗ ಬಂದು ಅವನ ಪಕ್ಕ ಕೂರುತ್ತಾಳೋ ಆಗ ತಕ್ಷಣ ಮುಂದೆ ನೋಡುತ್ತಾ ಕಣ್ಣಗಳಲ್ಲಿ ಎದ್ದು ಕಾಣಿಸುತ್ತಿದ್ದ ಉತ್ಸಾಹ , ಖುಷಿ , ನಾಚಿಕೆ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡ್ತಾನೆ.. ಅಫ್ ಕೋರ್ಸ್ ಚಿಕ್ಕ ವಯಸ್ಸಿಂದಲೂ ಅವನಿಗಿದ್ದ ಒಂದೇ ಕನಸು ದೀಪಾಲಿಯನ್ನ ತನ್ನವಳನ್ನಾಗಿಸಿಕೊಳ್ಳುವುದು.. ಆ ಕ್ಷಣ ಹತ್ರ ಬಂದೇಬಿಟ್ಟಮೇಲೆ ಅವನ ಅವನ ಖುಷಿ ತಡೆಯೋಕೆ ಆಗುತ್ತಾ…
ಹುಚ್ಚನಂತೆ ಅವಳನ್ನ ಪ್ರೀತಿ ಮಾಡ್ತಿದ್ದ.. ದುರಾದೃಷ್ಟ ಅವನ ಗಾಢವಾದ ನಿಶ್ಕಲ್ಮಶವಾದ ಪ್ರೀತಿ ದೀಪಾಲಿಗೆ ಗೊತ್ತಿರಲಿಲ್ಲ..
ದೀಪಾಲಿ ಬಂದು ಕೂತು ಶಾಸ್ತ್ರಗಳೆಲ್ಲಾ ಮುಗಿಯೋ ಸಮಯ ಬಂದ್ರೂ ಭಾವನೆ ಬದಲಾಗಿರಲ್ಲ. ಪುರೋಹಿತರು ಹೇಳಿದ ಹಾಗೆ ಸುಮ್ಮನೆ ಮಾಡುತ್ತಾ ಕುಳಿತಿದ್ದಳು.. ರಿದಿಮಾ ಸನ್ನಿಧಿಗೆ ಒಂದ್ ಕಡೆ ದೀಪಾಲಿ ನೋಡಿಯೂ ಬೇಸರವಾಗುತ್ತಿತ್ತು ಮತ್ತೊಂದ್ ಕಡೆ ರಾಯ್ ಕನಸು ಒಡೆದಾಗ ಅವನ ಮನಸಿಗೆ ಎಷ್ಟು ನೋವಾಗುತ್ತೆ ಅಂತಲೂ ಯೋಚಿಸುತ್ತಾ ಬೇಜಾರಾಗಿದ್ರು.. ಬಿಟ್ರೆ ರಾಯ್ ಸ್ನೇಹಿತರು , ಎರೆಡೂ ಕುಟುಂಬದವರ ಖುಷಿಗೆ ಪಾರವೇ ಇರಲಿಲ್ಲ. ಆಗಾಗ ರಾಯ್ ಕದ್ದು ಕದ್ದು ದೀಪಾಲಿ ಕಡೆ ನೋಡ್ತಿದ್ದ.. ಅವಳತ್ತ ನೋಡಿದಾಗಿಲ್ಲ ಅವಳ ಹುಟ್ಟು ಮಚ್ಚೆ ಅಲಂಕಾರ ಅವನ ಮನಸೆಳೆಯುತ್ತಿತ್ತು..
ನೋಡ್ತಾ ನೋಡ್ತಾ ತಾಳಿಯನ್ನ ಆಶೀರ್ವಾದಕ್ಕೆ ಕಳುಹಿಸಲಾಯ್ತು.. ಅಕ್ಷತೆ ವಿತರಣೆಯೂ ಆಯ್ತು.. ಹಾರ ಬದಲಾವಣೆಯೂ ಆಯ್ತು..
ಉಳಿದಿದ್ದು ಎರಡೇ ಮಾಂಗಲ್ಯ ಧಾರಣೆ , ಸಪ್ತಪದಿ.. ಪುರೋಹಿತರು ವಾಲಗದವರಿಗೆ ಇಶಾರೆ ನೀಡಿದ್ರು.. ತಾಳಿಯನ್ನ ರಾಯ್ ಗೆ ಕೈನಲ್ಲಿ ಹಿಡಿಯುವಂತೆ ಸೂಚಿಸಿದ್ರು.. ತಾಳಿ ಕೈಯಲ್ಲಿ ಹಿಡಿದಿದ್ದ ರಾಯ್ ಎದೆ ಬಡೆತ ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತು ಅಂದ್ರೆ ಅದು ಪಕ್ಕದಲ್ಲೇ ಇದ್ದ ದೀಪಾಲಿಗೂ ಸ್ಪಷ್ಟವಾಗಿ ಕೇಳಿಸುತ್ತಿತ್ತು.. ಇತ್ತ ದೀಪಾಲಿಗೆ ದುಃಖವಬ್ಬ ಹೆಚ್ಚು ಹೊತ್ತು ಮುಚ್ಚಿಟ್ಟುಕೊಳ್ಳೋಕರ ಕಷ್ಟವಾಗ್ತಿತ್ತು…
ಪುರೋಹಿತರು “ಗಟ್ಟಿಮೇಳ ಗಟ್ಟಿ ಮೇಳ” ಅಂತಿದ್ದಂತೆ ವಾದ್ಯದವರು ವಾದ್ಯಮೊಳಗಿಸಿದ್ರು.. ವಧುವಿನ ಜಡೆಯನ್ನ ಎತ್ತಲು ಸ್ನೇಹಿತೆಯರು ಸಹಾಯ ಮಾಡಿದ್ರು.. ಪುರೋಹಿತರು ಹೇಳ್ತಿದ್ದಂತೆ ರಾಯ್ ದೀಪಾಲಿ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿ ಜಗತ್ತನ್ನೇ ಗೆದ್ದವನಂತೆ ಖುಷಿಪಡ್ತಿದ್ದ.. ದೀಪಾಲಿ ಪಾಲಿಗೆ ಅದು ಉರುಳಂತೆ ಅನ್ನಿಸಿತ್ತು..
ರಾಯ್ ಮುಗುಳುನಗುತ್ತಲೇ ಪುರೋಹಿತರ ಸೂಚನೆಯಂತೆ ದೀಪಾಲಿ ಹಣೆಗೆ ಕುಂಕುವನ್ನ ಇಟ್ಟನು.. ಸಪ್ತಪದಿಯಲ್ಲಿ ಇಬ್ಬರೂ ಕೂಡ ವಚನಗಳನ್ನ ತೆಗೆದುಕೊಂಡ್ರು.. ರಾಯ್ ಮನಸ್ಪೂರ್ವಕವಾಗಿ ನಿಭಾಯಿಸಲು ತಯಾರಿದ್ದ.. ದೀಪಾಲಿ ಯಾವ ವಚನಕ್ಕೂ ಬದ್ಧಳಾಗದೇ ಇರೋಕೆ ಸಿದ್ಧಳಾಗಿದ್ದಳು..
ರಾಯ್ ಗೆ ನಿಜವಾಗ್ಲೂ ಅನ್ಯಾಯ ಆಗುತ್ತಾ…? ದೀಪಾಲಿನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತ್ಸೋ ರಾಯ್ ಗೆ ಅವಳು ಅವನನ್ನ ಯಾವ ಮಟ್ಟಕ್ಕೆ ದ್ವೇಷಿಸುತ್ತಾಳೆ ಅನ್ನೋದು ಗೊತ್ತಾದ್ರೆ ಸಹಿಸಿಕೊಳ್ತಾನಾ…? ತಂದೇ ಮೇಲೆ ಸೇಡು ತೀರಿಸಿಕೊಳ್ಳೋ ಅಷ್ಟ್ ಸಿಟ್ಟು ಯಾಕೆ.. ದೀಪಾಲಿಗೆ..? ಅವರ ತಂದೆ ನಿಜವಾಗ್ಲೂ ತಪ್ ಮಾಡಿದ್ರಾ..? ಯಾರೀ ತಾರಕ್..? ವಿಲ್ಲನಾ ಅಥವ ಅವನೂ ಕೂಡ , ಪ್ರೀತಿಯಿಂದ ವಂಚಿತನಾದ ಸಂತ್ರಸ್ತನಾ…? ನೋಡೋಣ ಮುಂದಿನ ಎಪಿಸೋಡ್ ನಲ್ಲಿ…
– ನಿಹಾರಿಕಾ ರಾವ್ –
ಲೇಖಕರ ಮಾತು..!!
( ಕಥೆ ಇಷ್ಟವಾದಲ್ಲಿ ಕಾಮೆಂಟ್ ಮಾಡಿ.. ಸಾಧ್ಯವಾದಲ್ಲಿ ಈ ಲೇಖನದ ಲೇಖಕಿಯಾದ ನಾನು ನಿಹಾರಿಕಾ ಅಲ್ಲಿ ನಿಮ್ಮ ಕಾಮೆಂಟ್ ಗೆ ಪ್ರತಿಕ್ರಿಯಿಸುವ ಪ್ರಯತ್ನ ಮಾಡುವೆ… )
( ಇದನ್ನ ಈ ಹಿಂದೆ ಎಲ್ಲಾದ್ರೂ ಓದಿದ್ದೀರಾ ಎಂದಾದರೆ ಅದು ನನ್ನದೇ ರಚನೆಯಾಗಿರುತ್ತೆ – ಪ್ರತಿಲಿಪಿಯಲ್ಲಿ ನಾನು ‘Niharika Rao Nammu’ ಅಲ್ಲಿಯೇ ನನ್ನ ಈ ಬರಹವನ್ನ ನೀವು ಓದಿರುತ್ತೀರಿ ಎಂದರ್ಥ.. ಹಾಗೆಯೇ ಇನ್ನಷ್ಟು ನನ್ನ ಧಾರಾವಾಹಿಗಳು ಬೇಕೆನಿಸಿದರೆ ಕಾಮೆಂಟ್ ಮಾಡಿ ನಾನು ಇಲ್ಲಿ ಇನ್ನು ಒಂದಷ್ಟು ಕಥೆಗಳನ್ನ ಹಾಕುತ್ತಾ ಹೋಗುವೆ.. ಹಾಗೆಯೇ ನೀವು ಪ್ರತಿಲಿಪಿಯಲ್ಲಿದ್ದರೆ ಅಲ್ಲಿ ಬೇಕಿದ್ದರೂ ನನ್ನ ಕಥೆಗಳನ್ನ ಓದಬಹುದು,, )
ಈ ರೀತಿಯಾದ ಇಂಟರೆಸ್ಟಿಂಗ್ ಕಂಟೆಂಟ್ ಗಾಗಿ ನಮ್ಮ Saakshatv.com ಫಾಲೋ ಮಾಡಿ…
ಈ ಧಾರಾವಾಹಿಯನ್ನೂ ಓದಬಹುದು…!! ( 1 -15 ಅಧ್ಯಾಯಗಳ ಎಲ್ಲಾ ಲಿಂಕ್ ಗಳೂ ಕೆಳಗಿವೆ)
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 3 ( ಅದ್ಭುತ ಫ್ಯಾಂಟಸಿ ಜಗತ್ತು)
ಅಧ್ಯಾಯ – 5
ಅಧ್ಯಾಯ – 6
ಅಧ್ಯಾಯ – 7
ಅಧ್ಯಾಯ – 8
Saakshatv Special Series : ನಿಗೂಢ ಟಿವಿ ಜಗತ್ತು – ಅಧ್ಯಾಯ 15 ( ಕೊನೆಯ ಅಧ್ಯಾಯ )








