( ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ ಲಿಂಕ್ ಗಳನ್ನ ಕ್ಲಿಕ್ ಮಾಡಿ )
ಅಧ್ಯಾಯ -9
ಅವರ ಮುಂದಿದ್ದ ದೃಷ್ಯ ನೋಡಿ ಅವರೆಲ್ಲರ ಎದೆ ಕಂಪಿಸಿತ್ತು..
ಒಂದ್ ಹತ್ತು ಗಿಡ ನಾಶ ಮಾಡಿದ್ರೇನಂತೆ ಬೆಳಕಿನಲ್ಲಿ ಅವರ ಕಣ್ಮುಂದೆ ಕಂಡಿದ್ದೆಲ್ಲಾ ಬರೀ ಅದೇ ಗಿಡಗಳು.. ಕಣ್ಣು ಹಾಯಿಸಿದಷ್ಟೂ ದೂರ ಕಂಡಿದ್ದೇ ಭಯಾನಕ ದೊಡ್ಡ ದೊಡ್ಡ ಕೋರೆ ಹಲ್ಲುಗಳ ಗಿಡಗಳು , ಬಾಯ್ತೆರೆದು ಬೇಟೆಗಾಗಿ ಕಾಯ್ತಿವೆ…
ಭಯದಲ್ಲಿ ಹೆದರಿದವಳು.. ಮೋಕ್ಷಿತ್ ಕಡೆ ನೋಡಿದವಳು.. ನೀವೇ ಅಲ್ವಾ ಹೇಳಿದ್ದು ಎರಡನೇ ಹಂತ ದಾಟಿದ್ವಿ ಅಂತ..
ಗೊತ್ತಾ ಇಲ್ಲಿಂದ ಹೇಗೆ ಹೋಗೋದು ಅಂತ ಕೇಳಿದವಳಿಗೆ ಉತ್ತರಿಸಿದವ,,,, ಅಯ್ಯೋ ನಿನ್ನ ತಲೆ ನಾವು ಪ್ರತಿ ಸಲ ಮುಂದಿನ ಹಂತಕ್ಕೆ ತಲುಪಿದಾಗಲೆಲ್ಲವೂ ಬೇರೆ ಬೇರೆ ಜಗತ್ತಿಗೆ ಬರುತ್ತೇವೆ.. ಬದಲಾಗ್ತಿರುತ್ತೆ.. ಆದ್ರೆ ಇಷ್ಟು ಕಷ್ಟ ಅನ್ಸಿರಲಿಲ್ಲ ಇವತ್ತಿನವರೆಗೂ ಎಂದವನ ಮಾತಿಗೆ ಅಳಬೇಕೋ ನಗಬೇಕೋ ಗೊತ್ತಾಗದೇ ಗೊಂದಲದಲ್ಲಿ ನಿಂತಿದ್ದಳು ಮನಸ್ವಿ..
ಆಗಲೇ ಸೈಂಟಿಸ್ಟ್ ಸ್ಯಾಡಿಸ್ಟ್ ರೀತಿ ನಗುತ್ತಾ ಹೇಗಿದೆ ,,,, ಅಡ್ವೆಂಚರ್ ಮಸ್ತ್ ಇದೆ ಅಲ್ವಾ… ಮುಂದೆ ಮುಂದೆ ಇನ್ನೂ ತುಂಬಾ ಅಡ್ವೆಂಚರ್ಸ್ ಇದೆ.. ಜಸ್ಟ್ ಎಂಜಾಯ್… ಆದ್ರೆ ಟೈಮ್ ಓಡ್ತಿದೆ… ಎಲ್ಲರ ಜೀವನ ನಿನ್ನ ಕೈಲಿದೆ.. ಎಲ್ಲರೂ ವಾಪಸ್ ಹೋಗೋದು ನಿನ್ನ ಕೈಲಿದೆ… ಹರಿ ಅಪ್…
ಟಿಕ್ ಟಾಕ್.. ಟಿಕ್ ಟಾಕ್ ಎಂದವನು ಅಲ್ಲಿಗೆ ಒಂದು ಗಡಿಯಾರವನ್ನೂ ಸೃಷ್ಟಿಸಿದ್ದ ,,,, ಆ ಗಡಿಯಾರವೆಷ್ಟು ದೊಡ್ಡದಿತ್ತೆಂದ್ರೆ ಆಕಾಶದಲ್ಲಿ ಬೃಹದಾಕಾರದ ಮೋಡದಂತೆ ಕಾಣಿಸುತ್ತಿತ್ತು.. ಅದರಿಂದ ಟೈಮ್ ಕೂಡ ಸ್ಪಷ್ಟವಾಗಿ ಕಾಣುತ್ತಿದೆ..
ಅದು ಬೆಳಗಿನ ಸಮಯ ಗಂಟೆ 11 ಆಗಿದೆ…
ಇವರ ಮುಂದೆ ಇದ್ದಕ್ಕಿದ್ದ ಹಾಗೆ ವರ್ಚುಯಲ್ ಆಗಿ ಡಿಸ್ಪ್ಲೇ ಆಗುವ ಅದೃಷ್ಯ ಸ್ಕ್ರೀನ್ ನಲ್ಲಿ ಕೇವಲ ಪದಗಳಷ್ಟೇ ಕಾಣಿಸುತ್ತಿರುತ್ತೆ…
ಅದ್ರಲ್ಲಿ
Day 1 Stage 2
Deadly Zombies – completed
Deadly plants –
ಹೀಗೆ ಇರುತ್ತೆ…
ಸೈಂಟಿಸ್ಟ್ ಮಾತು ಕೇಳಿ ಮೊದಲೇ ಸಿಡಿಮಿಡಿಗೊಂಡಿದ್ದ ಮನಸ್ವಿ ಮತ್ತಷ್ಟು ಕೋಪಗೊಂಡಿದ್ದಳಾದರೂ ಕಿರುಚಾಡಿರೇನೂ ಉಪಯೋಗವಿಲ್ಲ ಅನ್ನೋದು ಅವಳಿಗೂ ಗೊತ್ತಿತ್ತು…
ಆಗಲೇ ಮುಂದೆ ತಿರುಗಿದವರಿಗೆ ಆ ಗಿಡಗಳನ್ನ ದಾಟೋದಾದ್ರೂ ಹೇಗೆ ಎಂಬ ಚಿಂತೆ ಶುರುವಾಗಿತ್ತು.. ಆಗಲೇ ಮತ್ತೊಂದು ಟೆನ್ಷನ್ ಶುರುವಾಗಿಬಿಟ್ಟಿತ್ತು.. ಅವರ ಮುಂದೆ ಅದೃಷ್ಯ ಸ್ಕ್ರೀನ್ ನಲ್ಲಿ ಟೈಮ್ ಡಿಸ್ಪ್ಲೇ ಆಗ್ತಿದೆ.. ಅಂದ್ರೆ 30 ನಿಮಿಷದೊಳಗೆ ಈ ಸ್ಟೇಜ್ ಕ್ಲಿಯರ್ ಮಾಡಲೇಬೇಕಂತ.. ಇಲ್ಲದೇ ಹೋದಲ್ಲಿ ಎಲ್ಲರೂ ಮತ್ತೆ ಮದಲನೇ ಸ್ಟೇಜ್ ಗೆ ವಾಪಸ್ ಹೋಗಲಿದ್ದಾರೆ ಅಂತ..
ಇದು ಮತ್ತಷ್ಟು ಎಲ್ಲರ ನೆಮ್ಮದಿ ಹಾಳು ಮಾಡಿ.. ಅವರ ಭರವಸೆಯನ್ನ ಕ್ರಮೇಣ ಕುಗ್ಗಿಸುತಿತ್ತು.. ಮನಸ್ವಿ ಮೋಕ್ಷಿತ ಟೆನ್ಷನ್ ಆಗಿದ್ದರು.. ಮನಸ್ವಿ ಕಣ್ಮುಚ್ಚಿದೊಡನೆ ಅವಳತ್ತ ಒಂದೇ ಸಮನೇ ನೋಡ್ತಿದ್ದ ಮೋಕ್ಷಿತ್ ಗೆ ಅವಳನ್ನ ಯಾಕೋ ಈ ಸ್ಥಿತಿಯಲ್ಲಿ ನೋಡೋದು ಕಷ್ಟವಾಗ್ತಿತ್ತು..
ಇತ್ತ ಸೈಂಟಿಸ್ಟ್ ಗಹಗಹಿಸಿ ನಗುತ್ತಿದ್ದವನ ಪಕ್ಕದಲ್ಲಿ ಇದ್ದ ಕೋಲ್ಡ್ ಶೆಲ್ಫ್ ನಲ್ಲಿ ಒಂದು ಡೆಡ್ ಬಾಡಿಯನ್ನೂ ಮಲಗಿಸಿದ್ದ.. ಆ ಡೆಡ್ ಬಾಡಿ ನೋಡಿದರೆ ಸುಮಾರು ವರ್ಷದ್ದು ಎನಿಸುತಿತ್ತು.. ಆದ್ರೂ ಅದನ್ನ ಕೋಲ್ಡ್ ಶೆಲ್ಪ್ ನಲ್ಲಿರಿಸಿ ದೇಹ ಕೆಡದಂತೆ ನೋಡಿಕೊಂಡಿದ್ದ..
ಆ ಮೃತದೇಹವೂ ಆ ಟಿವಿ ಸ್ಕ್ರೀನ್ ನೋಡುವಂತೆ ಸೆಟ್ ಮಾಡಿದ್ದವನ ನಗುವಲ್ಲಿ ಸ್ಪಷ್ಟ ಆತ ಸೈಕೋ ಎನ್ನೋದು,.. ಆ ಡೆಡ್ ಬಾಡಿ ಅವನ ಹೆಂಡತಿಯದ್ದಾಗಿತ್ತು.. ಆ ಮೃತ ದೇಹದ ಜೊತೆಗೆ ಮಾತನಾಡ್ತಿರೋ ವ್ಯಕ್ತಿ “ಸುಶೀಲಾ ನೋಡು ,,, ನೋಡು,,, ನಿನ್ನ ಆಸೆಯಂತೆ ನಿನ್ನ ಕಲ್ಪನೆಯ ಗೇಮ್ ಪ್ರಪಂಚ ನೋಡು… ನಿನಗೆ ಮನುಷ್ಯರು ಗೇಮ್ ನೊಳಗೆ ದೈಹಿಕವಾಗಿ ಪ್ರವೇಶಿಸಬೇಕು.. ಅದನ್ನ ನೋಡಿ ಎಂಜಾಯ್ ಮಾಡಬೇಕನ್ನೋ ಆಸೆ ಇತ್ತಲ್ವಾ ನೋಡು,.. ಕೊನೆಗೂ ಆವಿಷ್ಕಾರ ಮಾಡಿದ್ದೀನಿ.., ನಿನ್ನ ಗಂಡ ಗ್ರೇಟ್ ಅಲ್ವಾ ” ಎಂದು ಹುಚ್ಚನ ರೀತಿ ಮಾತನಾಡ್ತಾ ಇದ್ದಾನೆ..
– ನಿಹಾರಿಕಾ ರಾವ್ –
ಗಮನಿಸಿ : ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…
ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..
ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…
ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..
ಮೊದಲ ಅಧ್ಯಾಯ – 1
ಅಧ್ಯಾಯ – 2
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)
ಅಧ್ಯಾಯ – 3
ಅಧ್ಯಾಯ – 4
ಅಧ್ಯಾಯ – 5
ಅಧ್ಯಾಯ – 6