( ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ ಲಿಂಕ್ ಗಳನ್ನ ಕ್ಲಿಕ್ ಮಾಡಿ )
ಅಧ್ಯಾಯ 13
ಡೈನೋಸರ್ ಲ್ಯಾಂಡ್
ಡೈನೋಸರ್ ಗಳು… ಡೈನೋಸರ್ ಮೊಟ್ಟೆಗಳು ಪಕ್ಕದಲ್ಲೇ ಸಮುದ್ರ ಎಲ್ಲವನ್ನೂ ನೋಡಿ ಪ್ರತಿಯೊಬ್ಬರ ಜೀವ ಬಾಯಿಗೆ ಬಂದಾಗಿತ್ತು..
ಅದೇ ಸಮಯಕ್ಕೆ ಡೈನೋಸರ್ ಗಳ ಹಿಂಡು ಇವರ ಕಡೆಗೆ ಓಡೋಡಿ ಬರುತ್ತಿವೆ.. ಎಲ್ಲರೂ ಒಂದ್ ಕ್ಷಣ ಭಯಕ್ಕೆ ಮೂರ್ತಿಗಳಾಗಿ ನಿಂತಿದ್ದರೂ ,, ಮರುಕ್ಷಣವೇ ಎಲ್ಲರೂ ಹೋಗಿ ಬಂಡೆ ಮರಗಳ ಹಿಂದೆ ಬಚ್ಚಿಟ್ಟುಕೊಂಡಿದ್ದರು..
ಮನಸ್ವಿ ಭಯದಲ್ಲಿ ಮೋಕ್ಷಿತ್ ನ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ..
ಎಲ್ಲರಿಗೂ ಇಲ್ಲಿಂದ ದಾಟುವುದೇ ಅಸಲಿ ಟಾಸ್ಕ್…
ಹೇಗೆ ಇಲ್ಲಿಂದ ಈ ದೈತ್ಯ ಡೈನಾಸರ್ ಗಳಿಂದ ತಪ್ಪಿಸಿಕೊಳ್ಳುವುದು ಎನ್ನುವ ಆತಂಕ ,, ಪ್ರಶ್ನೆ ಮತ್ತೆ ವಿಶ್ವಾಸ ಕುಗ್ಗುತ್ತಿದೆ..
ಆಗಲೇ ಗಹಗಹಿಸಿ ನಗುತ್ತಿದ್ದ ವಿಜ್ಞಾನಿಯ ಧ್ವನಿ ಕೇಳಿಸುತ್ತದೆ.
ಮನಸ್ವಿ.. ಮನಸ್ವಿ.. ಮನಸ್ವಿ.. ಒಳ್ಳೆ ಮನಸ್ವಿ.. ಒಂದೆರೆಡು ಸ್ಟೇಜ್ ದಾಟಿದ ತಕ್ಷಣ ನಿನ್ನ ಆಶಿಕ್ ಜೊತೆಗೆ ಹೊರಗೆ ಬಂದು ಮದುವೆ ಕನಸು ಕಾಣ್ತಿದ್ಯಾ.. ಗ್ರೇಟ್..!! ಗ್ರೇಟ್..!!! ಚೇ ನಿಮ್ಮ ಗೋಳಾಟ ನೋಡಿ ನನಗೆ ಎಷ್ಟು ಸಂ… ತೋಷವಾಗ್ತಿದೆ ಗೊತ್ತಾ…??? ಆದ್ರೂ ನಿಮ್ಮಿಬ್ಬರ ಎಮೋಷನಲ್ ಮೂಮೆಂಟ್ ಗೆ ನನ್ನ ಕಣ್ಣಲ್ಲೂ ನೀರು ಬಂತು ಬೇಕಿದ್ರೆ ನೋಡು ಎಂದವನ ಫೋಟೋ ಅವರ ಕಣ್ಮುಂದೆ ಬಂದಿತ್ತು..
ಇದೇ ಮೊದಲ ಬಾರಿ ಆ ವಿಜ್ಞಾನಿ ಮುಖ ನೋಡಿದ್ದು ಎಲ್ಲರೂ… ಮನಸ್ವಿಗೆ ಶಾಕ್… ಅವನ ಫೋಟೋ ನೋಡಿ ಅವಳಿಗೆ ಏನೋ ನೆನಪಾದಂತೆ..
ಏನು..??? ಏನು ಅನ್ನೋ ಗೊಂದಲ..
ಆದ್ರೆ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ… ಅವಳು
ಎಲ್ಲರೂ ಹೀಗೆ ಬಚ್ಚಿಟ್ಟುಕೊಂಡಿರುವಾಗಲೇ ಅವರ ಹಿಂಬದಿಯಿಂದ ತುಂಬಾ ದೂರದಿಂದ ದೊಡ್ಡ ಡೆಡ್ಲಿ , ಅಪಾಯಕಾರಿ ಕೆಂಪು ಬಣ್ಣದ ಡೈನೋಸರ್ ಗಳ ಗುಂಪು ಓಡೋಡಿ ಬರುತ್ತಿರುವುದನ್ನ ಕಂಡವರು ಕಿರುಚುತ್ತ ದಿಕ್ಕಾಪಾಲಾಗಿದ್ದರು…
ಎಲ್ಲರೂ ಮರ ಬಂಡೆಗಳ ಮರೆಯಲ್ಲಿ ಅವಿತುಕೊಂಡವರಿಗೆ
ಗೇಮ್ ಹುಡುಗಿಯ ಧ್ವನಿ ಕೇಳಿಸುತ್ತದೆ..
ನಿಮ್ಮ ಬಳಿ ಇರುವ ಕಾಯಿಗಳನ್ನ ಶಾಪಿಂಗ್ ಗಾಗಿ ಬಳಸಿ ಡೈನೋಸರಸ್ ಗಳ ಮಾಲೀಕರಾಗಬಹುದು..!!!
ಈ ಧ್ವನಿ ಕೇಳಿ ಎಲರ ಕಣ್ಣು ಹಿರಿದಾಗಿತ್ತು.. ಬೋರ್ಡ್ ನೋಡಿದವರಿಗೆ ಗೊತ್ತಾಗಿದ್ದು ಮೂರೂ ಸ್ಟೇಜ್ ಗಳನ್ನ ದಾಟಿದಕ್ಕೆ ಅವರ ಬಳಿ 3000 ಕಾಯಿನ್ ಗಳಿವೆ ಅಂತ..
ಎಲ್ಲರೂ ಖುಷಿಯಾಗಿದ್ದರು.. ಅವರ ಮುಂದೆ ಕಾಯಿನ್ ಗಳು 3ಡಿಯಂತೆ ಪ್ರತ್ಯಕ್ಷವಾದಾಗ ,, ಎಲ್ಲರೂ ಕಾಯಿನ್ ಗಳನ್ನ ಹಂಚಿಕೊಳ್ಳುವರು..
ಅವರ ಅವರ ಕಾಯಿನ್ ಗಳು ಯಾವ ಯಾವ ಡೈನೋಸರಸ್ ಗಳ ಖರೀದಿಗೆ ಅರ್ಹವೋ ಅದು ಆ ಡೈನೋಸರ್ ಗಳ ಮುಂದೆಯೇ ಅವರಿಗೆ ಕಾಣಿಸುತ್ತಿದೆ..
ಎಲ್ಲರೂ ಮತ್ತೆ ಗುಂಪುಗಟ್ಟಿ ಮಾತನಾಡಿಕೊಳ್ತಾ ಸ್ವಲ್ಪ ಡೈನೋರ್ ಗಳ ಹತ್ತಿರ ಹೋಗಿ ಅವಿತುಕೊಂಡವರು ಎಲ್ಲರೂ ಕಾಯಿನ್ ಗಳನ್ನ ಹಿಡಿದು ಒಂದೊಂದು ಡೈನೋಸರ್ ಗಳ ಬಳಿ ಹೋದಾಗಲೂ ಅವು ಸಮ್ಮೋಹಿತವಾಗಿ ಅವುಗಳ ಮೇಲೇರಿ ಕುಳಿತುಕೊಳ್ಳುವರು… ಮನಸ್ವಿ ಮತ್ತೆ ಮೋಕ್ಷಿತ್ ಪ್ಲಾನ್ ಮಾಡಿ ಒಂದೇ ಡೈನೋಸರ್ ಮೇಲೆ ಕುಳಿತು ಬಾಕಿ ಕಾಯಿನ್ ಗಳನ್ನ ಉಳಿಸಿಕೊಂಡಿದ್ದರು.. ಆಗಲೇ ಮನಸ್ವಿ ಮತ್ತೆ ಮೋಕ್ಷಿತ್ ಕ್ಯಾಪ್ ಶೀಲ್ಡ್ ಜಾಕೆಟ್ ತೆಗೆದು ಬಿಸಾಡುವರು.. ಶೆಕೆಗೆ ಅವರಿಗೆ ಸಾಯೋ ಹಾಗೆ ಆಗ್ತಿದೆ..
ಮನಸ್ವಿ ಕೂದಲು ಗಾಳಿಗೆ ಹಾರಾಡ್ತಿದ್ರೆ ಅವಳ ಹಿಂದೆ ಕೂತಿದ್ದ ಹುಡುಗ ಸಮ್ಮೋಹಿತನಾಗುತ್ತಿದ್ದ.. ಎಲ್ಲರೂ ಹೀಗೆ ಡೈನೋಸರ್ ಗಳ ಮೇಲೇರಿ ಕುಳಿತಿದ್ದಾಗಲೇ ಅವರ ಮುಂದೆ ಬಂದ ಒಂದೇ ಒಂದು ಎಲ್ಲವುಕ್ಕಿಂತ ದೈತ್ಯ ಭಯಾನಕ ಡೈನೋಸರ್ ನೋಡಿ ಮಿಕ್ಕವು ಅವರೆಲ್ಲರನ್ನೂ ಕೆಳಗೆ ಬೀಳಿಸಿ ವಾಪಸ್ ಯೂ ಟರ್ನ್ ಓಡಿ ಹೋದರೆ ಎಲ್ಲರ ಜೀವ ಬಾಯಿಗೆ ಬಂದಿತ್ತು.. ಅವರ ಮುಂದೆ ನಿಂತಿದ್ದ ಆ ದೈತ್ಯನ ನೋಡಿ..
ಎಲ್ಲರೂ ಹಿಂದಿಂದೆ ಹೆಜ್ಜೆ ಇಡ್ತಿದ್ದಾರೆ. ಆ ಡೈನೋಸರಸ್ ಕೂಗು ಇಡೀ ದ್ವೀಪದ ತುಂಬೆಲ್ಲಾ ಪ್ರತಿಧ್ವನಿಸುತ್ತಿದೆ…ಅದು ಅವರನ್ನ ಮತ್ತಷ್ಟು ಭಯಭೀತಗೊಳಿಸಿದೆ..
ಆದು ಅವರತ್ತ ದೊಡ್ಡ ದೊಡ್ಡ ಹೆಜ್ಜೆಗಳನ್ನ ಇಡ್ತಿದೆ.. ಒಂದೊಂದು ಹೆಜ್ಜೆ ಇಟ್ಟಾಗಲೂ ಭೂಮಿ ಕಂಪಿಸುತ್ತಿರುವ ಅನುಭವ..
ಮನಸ್ವಿ ತಲೆ ಉಪಯೋಗಿಸಿ ಅವಳ ಬಳಿ ಉಳಿಸಿಕೊಂಡಿದ್ದ ಅಷ್ಟೂ ಕಾಯಿನ್ ಗಳನ್ನ ಆ ಡೈನೋಸರ್ ಮುಂದೆ ತೋರಿಸಿದ್ರೆ ಯಾರೂ ಊಹಿಸದೆ , ಖುದ್ದು ಮನಸ್ವಿ , ಮೋಕ್ಷಿತ್ ಕೂಡ ಊಹಿಸದ ರೀತಿಯಲ್ಲಿ ಅದು ಅವರ ವಶಕ್ಕೆ ಬಂದಾಗಿತ್ತು..
ಗಹಗಹಿಸಿ ನಗುತ್ತಿದ್ದ ವಿಜ್ಞಾನಿಯ ನಗು ನಿಂತು ಕೋಪ ಆವರಿಸಿತ್ತು..
ಅದು ಸಮ್ಮೋಹಿತವಾಗ್ತಿದ್ದ ಹಾಗೆ ಎಲ್ಲರೂ ಅದೇ ಡೈನೀಸರಸ್ ನ ತಮ್ಮ ಸವಾರಿಮಾಡಿಕೊಂಡವರು ಈ ಬಾರಿ ಯಾವುದೇ ಆತಂಕವಿಲ್ಲದೇ ,, ತಲೆನೋವಿಲ್ಲದೇ ಹಸಿರು ನಿಶಾನೆ ದಾಟಿ ಬೆಳಕಿನತ್ತ ಹೋಗಿ 5 ನೇ ಹಂತಕ್ಕೆ ಪ್ರವೇಶ ಪಡೆದಿದ್ದರು..
– ನಿಹಾರಿಕಾ ರಾವ್ –
ಗಮನಿಸಿ : ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…
ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..
ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…
ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..
ಮೊದಲ ಅಧ್ಯಾಯ – 1
ಅಧ್ಯಾಯ – 2
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)
ಅಧ್ಯಾಯ – 3
ಅಧ್ಯಾಯ – 4
ಅಧ್ಯಾಯ – 5
ಅಧ್ಯಾಯ – 6
ಅಧ್ಯಾಯ – 7
ಅಧ್ಯಾಯ – 8