ಆಪಲ್( ಸೇಬು) ಜಿಲೇಬಿ
ಬೇಕಾಗುವ ಸಾಮಗ್ರಿಗಳು
ಆಪಲ್ 1
ಉದ್ದಿನ ಬೇಳೆ 1/2 ಕಪ್
ಹುಳಿ ಮೊಸರು 2 ಟೇಬಲ್ ಸ್ಪೂನ್
ಅಡಿಗೆ ಸೋಡಾ 1 ಪಿಂಚ್
ಸಕ್ಕರೆ 1 ಕಪ್
ನೀರು 3/4 ಕಪ್
ಕೇಸರಿ – 3-4 ಎಳೆಗಳು
ಹುರಿಯಲು ಎಣ್ಣೆ
ಮಾಡುವ ವಿಧಾನ
ಉದ್ದಿನ ಬೇಳೆ 2 ಗಂಟೆ ನೆನೆಸಿ. ನಂತರ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ. ಅದಕ್ಕೆ ಹುಳಿ ಮೊಸರು ಮತ್ತು ಅಡಿಗೆ ಸೋಡ ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಕಲಸಿ.
ನಂತರ ಸೇಬನ್ನು ವೃತ್ತಾಕಾರವಾಗಿ ತೆಳುವಾಗಿ ಕತ್ತರಿಸಿ. ಸೇಬಿನ ಮಧ್ಯದಿಂದ ಬೀಜವನ್ನು ತೆಗೆಯಿರಿ.
ಸಕ್ಕರೆ ಪಾಕ
ಪ್ಯಾನ್ ತೆಗೆದುಕೊಳ್ಳಿ ಸಕ್ಕರೆ ಮತ್ತು ನೀರು ಸೇರಿಸಿ. ಕುದಿಯಲು ಬಿಡಿ. ನಂತರ ಕೇಸರಿ ಎಳೆಗಳನ್ನು ಸೇರಿಸಿ. ಚೆನ್ನಾಗಿ ಕುದಿ ಬರಿಸಿ. ನಿಂಬೆ ರಸವನ್ನು ಹಿಂಡಿ. ಚೆನ್ನಾಗಿ ಮಿಶ್ರ ಮಾಡಿ.
ಬಳಿಕ ಒಂದು ಕಡಾಯಿ ತೆಗೆದುಕೊಳ್ಳಿ. ಅದರಲ್ಲಿ ಎಣ್ಣೆ ಬಿಸಿ ಮಾಡಿ. ವೃತ್ತಾಕಾರವಾಗಿ ಕತ್ತರಿಸಿದ ಸೇಬಿನ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಗರಿಗರಿಯಾಗುವ ತನಕ ಡೀಪ್ ಫ್ರೈ ಮಾಡಿ. ನಂತರ ಎಣ್ಣೆಯಿಂದ ತೆಗೆದು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದ ಬಳಿಕ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಿರಿ. ಬಡಿಸುವ ಮೊದಲು ಹೆಚ್ಚು ಸಕ್ಕರೆ ಪಾಕವನ್ನು ಸೇರಿಸಿ. ಸಿಹಿಯಾದ ಅಪಲ್ ಜಿಲೇಬಿ ಸವಿಯಲು ಸಿದ್ಧ.
ಬೇಳೆಕಾಳು ಬೇಯಿಸಿದ ನೀರನ್ನು ಸೇವಿಸುವುದರ ಆರೋಗ್ಯ ಪ್ರಯೋಜನಗಳು#Saakshatv #healthtips #lentilwater https://t.co/ijmWsfs9yV
— Saaksha TV (@SaakshaTv) April 21, 2021
ಈರುಳ್ಳಿ ಉತ್ತಪ್ಪಂ#Saakshatv #cookingrecipe #onionuttappam https://t.co/xZGNnVMyRc
— Saaksha TV (@SaakshaTv) April 21, 2021
ಕಳೆದ ವರ್ಷದಂತೆ ದೇಶದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ಡೌನ್ ಘೋಷಿಸಬೇಕಾಗಿದೆ – ಏಕೆ ಗೊತ್ತಾ ?#lockdown #coronavirus https://t.co/pEgGhsaq0P
— Saaksha TV (@SaakshaTv) April 25, 2021
ನಿಮ್ಮೊಂದಿಗೆ ನಾವಿದ್ದೇವೆ, ಶೀಘ್ರವಾಗಿ ಚೇತರಿಸಿಕೊಳ್ಳಿ – ಭಾರತಕ್ಕೆ ಆಸ್ಟ್ರೇಲಿಯಾ, ಪಾಕ್, ಫ್ರಾನ್ಸ್ ಸೇರಿದಂತೆ ವಿಶ್ವ ನಾಯಕರ ಹಾರೈಕೆ#getwellsoonindia #wearewithyou https://t.co/h982fC1bBp
— Saaksha TV (@SaakshaTv) April 25, 2021
#Saakshatv #cookingrecipe #apple jelebi