ಕಡಲೆ ಹಿಟ್ಟಿನ ಹಲ್ವಾ
ಬೇಕಾಗುವ ಸಾಮಾಗ್ರಿಗಳು
ಕಡಲೇ ಹಿಟ್ಟು – 1 ಕಪ್
ತುಪ್ಪ – 1/2 ಕಪ್
ಸಕ್ಕರೆ – 1 ಕಪ್
ನೀರು – 1/2 ಕಪ್
ಏಲಕ್ಕಿ 2 ರಿಂದ 3
ಸಣ್ಣಗೆ ಕತ್ತರಿಸಿದ ಗೋಡಂಬಿ – ಸ್ವಲ್ಪ
ಒಣದ್ರಾಕ್ಷಿ – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಬಾಣಲೆಯನ್ನು ಬಿಸಿ ಮಾಡಿ. ನಂತರ ಕಡಲೇ ಹಿಟ್ಟನ್ನು ಕೆಂಪಗಾಗುವವರೆಗೆ ಹುರಿಯಿರಿ. ನಂತರ ತುಪ್ಪ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಿಧಾನವಾಗಿ ಕೈಯಾಡಿಸುತ್ತಾ ನೀರು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ನಂತರ ಮಿಶ್ರಣವನ್ನು ಕುದಿಯಲು ಬಿಡಿ.
ಮಿಶ್ರಣ ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಗಂಟಾಗದ ರೀತಿಯಲ್ಲಿ ಕೈಯಾಡಿಸುತ್ತಾ ಇರಿ. ಹಾಗೆಯೇ ಏಲಕ್ಕಿಯನ್ನು ಹುಡಿ ಮಾಡಿ ಸೇರಿಸಿ ಚೆನ್ನಾಗಿ ಕಲಸಿ. ಗಟ್ಟಿಯಾದ ಬಳಿಕ ಬಾಣಲೆಯನ್ನು ಕೆಳಗಿಳಿಸಿ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಬಳಿಕ ಹಲ್ವಾದ ಮೇಲೆ ಗೋಡಂಬಿ ಒಣದ್ರಾಕ್ಷಿಯನ್ನು ಉದುರಿಸಿ. ರುಚಿಕರವಾದ ಕಡಲೆ ಹಿಟ್ಟಿನ ಹಲ್ವಾ ಸವಿಯಲು ಸಿದ್ಧ.
ಕಿಡ್ನಿ ಸ್ಟೋನ್ ಸಮಸ್ಯೆಗೆ ಬೀಟ್ರೂಟ್ ನ ಮನೆಮದ್ದುhttps://t.co/eee6aOjFG0
— Saaksha TV (@SaakshaTv) April 8, 2021
ಉರಿಬಿಸಿಲಿಗೆ ತಂಪಾದ ಬೂದು ಕುಂಬಳಕಾಯಿ ಜ್ಯೂಸ್https://t.co/trQ50Lcaki
— Saaksha TV (@SaakshaTv) April 8, 2021
ತಂಪಾದ ಆರೋಗ್ಯಕರ ರಾಗಿ ಅಂಬಲಿ#raagi #healthy #cooking #saakshatv https://t.co/uHFsZgf2ck
— Saaksha TV (@SaakshaTv) April 3, 2021
ನೆಹ್ವಾಲ್ ಅವರ ನೈಜ ಆಟದ ಚಿತ್ರಣ ‘ಸೈನಾ’ ಚಿತ್ರದಲ್ಲಿಲ್ಲ !https://t.co/qRp7c66FMy
— Saaksha TV (@SaakshaTv) April 7, 2021
#Saakshatv #cookingrecipe #Besanhalwa