15 ನಿಮಿಷದಲ್ಲಿ ತಯಾರಿಸಿ ಮೊಟ್ಟೆ ಪಲ್ಯ
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಮೊಟ್ಟೆಗಳು 4
ಕ್ಯಾಪ್ಸಿಕಂ 1
ಟೊಮೆಟೊ 1
ಎಣ್ಣೆ 4 ಟೀಸ್ಪೂನ್
ಅರಿಶಿನ ಪುಡಿ 1/2 ಟೀಸ್ಪೂನ್
ಜೀರಿಗೆ ಪುಡಿ 1 ಟೀಸ್ಪೂನ್
ಉಪ್ಪು 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ 1 ಟೀಸ್ಪೂನ್
ಎಗ್ ಮಸಾಲ ಪುಡಿ 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಬಾಣಲೆ ಬಿಸಿ ಮಾಡಿ ಅದಕ್ಕೆ ಎಣ್ಣೆ ಸೇರಿಸಿ. ಅದು ಬಿಸಿಯಾದ ನಂತರ ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಟೊಮ್ಯಾಟೊ, ಅರಿಶಿನ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಮತ್ತು ಅದನ್ನು ಸರಿಯಾಗಿ ಬೆರೆಸಿ.
ಕಸೂರಿ ಮೇಥಿ ಇದ್ದರೆ ಅದನ್ನು ಸೇರಿಸಿ.
ಈಗ ಎಲ್ಲಾ 4 ಮೊಟ್ಟೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಿಧಾನವಾಗಿ ಬಾಣಲೆಗೆ ಸೇರಿಸಿ. ಈಗ ಅದಕ್ಕೆ ಎಗ್ ಮಸಾಲ ಪುಡಿಯನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ನಿಧಾನವಾಗಿ ಕಲಸಿ. ಮೊಟ್ಟೆಯ ಪ್ರತಿಯೊಂದು ಭಾಗದಲ್ಲೂ ಮಸಾಲೆ ಬೆರೆಯುವಂತೆ ಮಿಶ್ರ ಮಾಡಿ.
ಈಗ ಅಂತಿಮವಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ರುಚಿಯಾದ ಮೊಟ್ಟೆ ಪಲ್ಯ ಸವಿಯಲು ರೆಡಿ.
ಈ ಖಾದ್ಯವನ್ನು ನೀವು ಅನ್ನ ಮತ್ತು ಚಪಾತಿಯೊಂದಿಗೆ ಸೇವಿಸಬಹುದು.
ಮಸ್ಕ್ ಮೆಲನ್ ಜ್ಯೂಸ್ ( ಕರಬೂಜ ಹಣ್ಣಿನ ಜ್ಯೂಸ್) https://t.co/YpaaM8RGBH
— Saaksha TV (@SaakshaTv) April 2, 2021
ಕಸೂರಿ ಮೇಥಿಯ ಆರೋಗ್ಯ ಪ್ರಯೋಜನಗಳು https://t.co/nPgU2tHyrz
— Saaksha TV (@SaakshaTv) April 2, 2021
ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಅನಾವರಣ – ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಗಳಿಗೆ ಕೊರಗಜ್ಜನಿಂದ ಶಿಕ್ಷೆ https://t.co/QMJpOuFdYv
— Saaksha TV (@SaakshaTv) April 2, 2021
ಸುಂದರ ಪತ್ನಿ ಇರುವ ಗುಡ್ ಫಾರ್ ನಥಿಂಗ್ ವ್ಯಕ್ತಿ ಎಂಬ ಟ್ರೋಲ್ ಗೆ ಅಭಿಷೇಕ್ ಬಚ್ಚನ್ ನಿಂದ ಕ್ಲಾಸಿ ರಿಪ್ಲೈ !https://t.co/6yBuKUp0vO
— Saaksha TV (@SaakshaTv) April 1, 2021
#Saakshatv #cookingrecipe #Eggpalya