ಗೋಬಿ ಮಂಚೂರಿ
ಬೇಕಾಗುವ ಸಾಮಾಗ್ರಿಗಳು
ಗೋಬಿ/ಹೂಕೋಸು – 1
ಅರಿಶಿಣ – ಚಿಟಿಕೆ
ಮೈದಾ – 1/4 ಕಪ್
ಕಾರ್ನ್ ಪ್ಲೋರ್ – 1/4 ಕಪ್
ಮೆಣಸಿನ ಪುಡಿ – 1/2 ಚಮಚ
ಉಪ್ಪು ಚಿಟಿಕೆ
ನೀರು
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ – 1
ಚಿಕ್ಕದಾಗಿ ಕತ್ತರಿಸಿದ ಕ್ಯಾಪ್ಸಿಕಂ – 1
ಚಿಕ್ಕದಾಗಿ ಕತ್ತರಿಸಿದ ಕ್ಯಾಬೇಜ್ – 1/2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1ಚಮಚ
ಟೊಮೆಟೊ ಸಾಸ್ – 1
ರೆಡ್ ಚಿಲ್ಲಿ ಸಾಸ್ – 1
ಗ್ರೀನ್ ಚಿಲ್ಲಿ ಸಾಸ್ – 1
ವಿನಿಗರ್ – 2 ಚಮಚ
ಸೋಯಾ ಸಾಸ್ – 2 ಚಮಚ
ಮೆಣಸಿನ ಪುಡಿ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಗೋಬಿಯನ್ನು ಚಿಕ್ಕದಾಗಿ ಕತ್ತರಿಸಿ ಸ್ವಚ್ಛಗೊಳಿಸಿ. ನಂತರ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ. ಕುದಿ ಬರುವಾಗ ಅದಕ್ಕೆ ಅರಿಶಿನ ಸೇರಿಸಿ. ಬಳಿಕ ಕತ್ತರಿಸಿದ ಗೋಬಿಗಳನ್ನು ಸೇರಿಸಿ. 5 ನಿಮಿಷ ಹಾಗೆಯೇ ಬಿಡಿ. ನಂತರ ನೀರನ್ನು ಸೋಸಿ.
ಈಗ ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ, ಕಾರ್ನ್ ಪ್ಲೋರ್, ಮೆಣಸಿನ ಪುಡಿ, ಉಪ್ಪು, ನೀರು ಸೇರಿಸಿ ಚೆನ್ನಾಗಿ ಬೆರೆಸಿ.ಅದಕ್ಕೆ ಕತ್ತರಿಸಿ ಇಟ್ಟುಕೊಂಡ ಗೋಬಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ.
ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಗೋಬಿಗಳನ್ನು ಹುರಿದು ತೆಗೆಯಿರಿ. ಬಳಿಕ ಅದೇ ಬಾಣಲೆಯಲ್ಲಿ 4 ಚಮಚ ಎಣ್ಣೆ ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾಬೇಜ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಸಾಸ್, ರೆಡ್ ಚಿಲ್ಲಿ ಸಾಸ್, ಗ್ರೀನ್ ಚಿಲ್ಲಿ ಸಾಸ್, ವಿನಿಗರ್, ಸೋಯಾ ಸಾಸ್, ಮೆಣಸಿನ ಪುಡಿ, ಉಪ್ಪು ಸೇರಿಸಿ 2 ನಿಮಿಷ ಬಾಡಿಸಿ.ನಂತರ ಇದಕ್ಕೆ ಹುರಿದ ಗೋಬಿ ಸೇರಿಸಿ ಬೆರೆಸಿದರೆ, ಸೂಪರ್ ಆಗಿರುವ ಗೋಬಿ ಮಂಚೂರಿ ಸವಿಯಲು ಸಿದ್ಧ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಪ್ರತಿ ತಿಂಗಳು ಕೇವಲ 2853 ರೂ.ಗಳ ಪ್ರೀಮಿಯಂ ಪಾವತಿಸಿ, 14 ಲಕ್ಷದವರೆಗೆ ಆದಾಯ ಪಡೆಯಿರಿ#postoffice https://t.co/UbCyYfe7E0
— Saaksha TV (@SaakshaTv) July 4, 2021
ಆಲೂಗಡ್ಡೆ ರೋಲ್ ಸಮೋಸಾ#potato #roll #samosa https://t.co/pQicXGPBUY
— Saaksha TV (@SaakshaTv) July 3, 2021
ಕೆಮ್ಮು ಮತ್ತು ಶೀತದಂತಹ ಸಮಸ್ಯೆಯನ್ನು ಆಗಾಗ್ಗೆ ಎದುರಿಸುತ್ತಿದ್ದರೆ ಇಲ್ಲಿದೆ ಮನೆಮದ್ದುಗಳು#Saakshatv #healthtips #homeremedies https://t.co/HYxhsGty5o
— Saaksha TV (@SaakshaTv) July 3, 2021
ನಿಪ್ಪಟ್ಟು#Saakshatv #cookingrecipe #nippattu https://t.co/zlCk45Y8NM
— Saaksha TV (@SaakshaTv) July 4, 2021
ರಕ್ತಹೀನತೆಯ ಲಕ್ಷಣಗಳು ಮತ್ತು ಅದಕ್ಕೆ ಪರಿಹಾರ#Saakshatv #healthtips #anemia https://t.co/UvtqBfbCP2
— Saaksha TV (@SaakshaTv) July 4, 2021
#Saakshatv #cookingrecipe #GobiManchurian