ಮಸಾಲೆ ಪೋಡಿ ಇಡ್ಲಿ
ಬೇಕಾಗುವ ಸಾಮಗ್ರಿಗಳು
ಉಳಿದ ಇಡ್ಲಿಗಳು
ಕೆಂಪು ಮೆಣಸು -5
ಕಡ್ಲೆಬೇಳೆ – 1/4 ಕಪ್
ಉದ್ದಿನಬೇಳೆ -1/4 ಕಪ್
ಅಕ್ಕಿ -1 ಚಮಚ
ಎಳ್ಳು -1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಒಂದು ಕಡಾಯಿ ತೆಗೆದುಕೊಳ್ಳಿ. ಅದರಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ನಂತರ ಕೆಂಪು ಮೆಣಸು, ಕಡ್ಲೆಬೇಳೆ, ಉದ್ದಿನಬೇಳೆ, ಅಕ್ಕಿ, ಎಳ್ಳು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ತಣ್ಣಗಾಗಿಸಿ.
ಬಳಿಕ ಮಿಕ್ಸರ್ ಜಾರ್ ಗೆ ಇದನ್ನು ಹಾಕಿ, ಸ್ವಲ್ಪ ಇಂಗು ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಹುಡಿ ಮಾಡಿ.
ನಂತರ ತವಾ ಬಿಸಿ ಮಾಡಿ ಸ್ವಲ್ಪ ತುಪ್ಪ ಸವರಿ. ಇಡ್ಲಿಯ ಎರಡೂ ಬದಿಗಳನ್ನು ಅರ್ಧ ನಿಮಿಷ ಹುರಿಯಿರಿ. ನಂತರ ರುಬ್ಬಿದ ಪುಡಿಯನ್ನು ಸೇರಿಸಿ. ಇಡ್ಲಿಗೆ ಮಸಾಲೆ ಹುಡಿಯನ್ನು ಚೆನ್ನಾಗಿ ಬೆರೆಸಿ. ಈಗ ಮಸಾಲೆ ಪೋಡಿ ಇಡ್ಲಿ ಸವಿಯಲು ಸಿದ್ಧವಾಗಿದೆ. ಇದನ್ನು ಬಿಸಿಯಾಗಿ ಬೆಳಿಗ್ಗೆಯ ಬ್ರೇಕ್ ಫಾಸ್ಟ್ ಆಗಿ ಅಥವಾ ಸಂಜೆಯ ಸ್ಯಾಕ್ಸ್ ಆಗಿ ಸೇವಿಸಬಹುದು.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೋವಿಡ್ ಮೂರನೇ ಅಲೆ ವಿರುದ್ಧ ಹೋರಾಡಲು ನಮ್ಮಲ್ಲಿರಬೇಕಾದ ವೈದ್ಯಕೀಯ ಉಪಕರಣಗಳು#covid19 #gadgets https://t.co/E3KSaV0PI2
— Saaksha TV (@SaakshaTv) July 6, 2021
ಗೋಬಿ ಮಂಚೂರಿ#Saakshatv #cookingrecipe #GobiManchurian https://t.co/3Fb4h6qjQF
— Saaksha TV (@SaakshaTv) July 6, 2021
ಹವಾಮಾನ ವೈಪರೀತ್ಯಗಳಿಂದ ಬರುವ ವೈರಲ್ ಜ್ವರ ತಡೆಗಟ್ಟುವ ಮನೆಮದ್ದುಗಳು#Saakshatv #healthtips #homeremedies #viralfever https://t.co/CAhmrC2ASD
— Saaksha TV (@SaakshaTv) July 6, 2021
ಮೊಬೈಲ್ ನಲ್ಲಿ ಮರೆತುಹೋದ ಪಾಸ್‌ವರ್ಡ್ ಅನ್ನು ಅನ್ಲಾಕ್ ಮಾಡುವುದು ಹೇಗೆ?#patternlock #smartphone https://t.co/mv1dweEJ0m
— Saaksha TV (@SaakshaTv) July 5, 2021
#Saakshatv #cookingrecipe #masalapodiidli