ನಿಪ್ಪಟ್ಟು
ಬೇಕಾಗುವ ಸಾಮಗ್ರಿಗಳು
ಅಕ್ಕಿ ಹಿಟ್ಟು-1 ಕಪ್
ಹುರಿದಿರುವ ನೆಲಗಡಲೆ/ಶೇಂಗಾ-1/4 ಕಪ್
ಹುರಿಗಡಲೆ-1/4 ಕಪ್
ತೆಂಗಿನ/ಒಣಕೊಬ್ಬರಿ ತುರಿ-1/4 ಕಪ್
ಇಂಗು-ಚಿಟಿಕೆಯಷ್ಟು
ಎಳ್ಳು-1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮೆಣಸಿನ ಪುಡಿ – 1ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪು ಸ್ವಲ್ಪ
ಹೆಚ್ಚಿದ ಕರಿಬೇವು – ಸ್ವಲ್ಪ
ಬಿಸಿ ಎಣ್ಣೆ – 2 ಚಮಚ
ಹುರಿಯಲು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ನೆಲಕಡಲೆ ಮತ್ತು ಹುರಿಗಡಲೆಯನ್ನು ತರಿ ತರಿಯಾಗಿ ಹುಡಿ ಮಾಡಿ ನಂತರ ಬಾಣಲೆಯಲ್ಲಿ ಅಕ್ಕಿ ಹಿಟ್ಟನ್ನು ಸ್ವಲ್ಪ ಬಿಸಿಯಾಗುವವರೆಗೆ ಹುರಿಯಿರಿ.
ನಂತರ ಅದಕ್ಕೆ ತರಿತರಿಯಾಗಿ ಹುಡಿ ಮಾಡಿದ ನೆಲಕಡಲೆ ಮತ್ತು ಹುರಿಗಡಲೆ ಪುಡಿ, ತೆಂಗಿನ/ಒಣಕೊಬ್ಬರಿ ತುರಿ, ಇಂಗು, ಎಳ್ಳು, ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿಸೊಪ್ಪು, ಕರಿಬೇವು, ಬಿಸಿ ಎಣ್ಣೆ, ಅಗತ್ಯವಿರುವಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಚೆನ್ನಾಗಿ ಕಲಸಿ. ಅಂಗೈಗೆ ಎಣ್ಣೆ ಸವರಿ, ಹಿಟ್ಟನ್ನು
ತಟ್ಟಿ. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ನಿಪ್ಪಟ್ಟನ್ನು ಚೆನ್ನಾಗಿ ಕರಿಯಿರಿ. ರುಚಿಯಾದ ಗರಿಗರಿಯಾದ ನಿಪ್ಪಟ್ಟು ಸವಿಯಲು ಸಿದ್ಧವಾಗಿದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸೇವಿಸಬೇಕಾದ ಹಣ್ಣು ಮತ್ತು ತರಕಾರಿಗಳು#immunity #rainseason https://t.co/Gu4P3MbPKT
— Saaksha TV (@SaakshaTv) June 28, 2021
ನೇಂದ್ರ ಬಾಳೆಕಾಯಿ ಸಿಪ್ಪೆಯ ಬಜ್ಜಿ#Saakshatv #cooking #recipe https://t.co/JzmosmX0TY
— Saaksha TV (@SaakshaTv) July 1, 2021
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz
— Saaksha TV (@SaakshaTv) June 27, 2021
ವೈಟ್ ರೈಸ್ Vs ಬ್ರೌನ್ ರೈಸ್ – ಯಾವುದು ದೇಹಕ್ಕೆ ಉತ್ತಮ – ಇಲ್ಲಿದೆ ಪೌಷ್ಟಿಕತಜ್ಞೆ ನೀಡಿರುವ ಮಾಹಿತಿ#Saakshatv #healthtips #rice https://t.co/tCTUXeFGEs
— Saaksha TV (@SaakshaTv) July 1, 2021
ಬ್ಯಾಂಕಿನ ಯಾವ ಕೆಲಸಗಳನ್ನು ವಾಟ್ಸಾಪ್ ಮೂಲಕ ನಿಭಾಯಿಸಬಹುದು ಮತ್ತು ಅದರ ಪ್ರಕ್ರಿಯೆ ಏನು#WhatsApp #chat https://t.co/0yPB6IOm6y
— Saaksha TV (@SaakshaTv) June 26, 2021
#Saakshatv #cooking #nippattu