ಅನ್ನ ಉಳಿದಿದ್ದರೆ ತಯಾರಿಸಿ ರುಚಿಯಾದ ಕಟ್ಲೆಟ್

1 min read
Saakshatv cooking recipe Leftover rice Cutlets

ಅನ್ನ ಉಳಿದಿದ್ದರೆ ತಯಾರಿಸಿ ರುಚಿಯಾದ ಕಟ್ಲೆಟ್

ಬೇಕಾಗುವ ಸಾಮಾಗ್ರಿಗಳು

1 ½ ಕಪ್ ಉಳಿದ ಅನ್ನ
½ ಕಪ್ ಸಿಪ್ಪೆ ಸುಲಿದ ಮತ್ತು ಕತ್ತರಿಸಿದ ಆಲೂಗಡ್ಡೆ
¼ ಕಪ್ ಕತ್ತರಿಸಿದ ಕ್ಯಾಪ್ಸಿಕಂ
¼ ಕಪ್ ತುರಿದ ಕ್ಯಾರೆಟ್
¼ ಕಪ್ ಸ್ವೀಟ್ ಕಾರ್ನ್
1-2 ಟೀಸ್ಪೂನ್ ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್
¼ ಟೀಸ್ಪೂನ್ ಆಮ್ಚೂರ್ ಪೌಡರ್ / ಡ್ರೈ ಮಾವಿನ ಪುಡಿ (optional)
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
½ ಟೀಸ್ಪೂನ್ ಅರಿಶಿನ ಪುಡಿ
1 ಟೀಸ್ಪೂನ್ ಗರಂ ಮಸಾಲ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
1 ಟೀಸ್ಪೂನ್ ಸಕ್ಕರೆ (optional)
2-3 ಟೀಸ್ಪೂನ್ ಕಾರ್ನ್ ಫ್ಲೋರ್
ಹುರಿಯಲು ಎಣ್ಣೆ
Saakshatv cooking recipe Leftover rice Cutlets

ಮಾಡುವ ವಿಧಾನ

ಮೊದಲಿಗೆ ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ.

ಅದರಲ್ಲಿ ಅನ್ನ, ಆಲೂಗಡ್ಡೆ, ತುರಿದ ಕ್ಯಾರೆಟ್, ಶುಂಠಿ-ಹಸಿರು ಮೆಣಸಿನಕಾಯಿ ಪೇಸ್ಟ್, ಕತ್ತರಿಸಿದ ಕ್ಯಾಪ್ಸಿಕಂ ಮತ್ತು ಸ್ವೀಟ್ ಕಾರ್ನ್ ಸೇರಿಸಿ.

ಈಗ ಆಮ್ಚೂರ್ ಪೌಡರ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ.

ಕಾರ್ನ್ ಫ್ಲೋರ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣವು ತೇವವಾಗಿದ್ದರೆ ಸ್ವಲ್ಪ ಕಾರ್ನ್ ಫ್ಲೋರ್ ಸೇರಿಸಿ. ಚೆನ್ನಾಗಿ ನಾದಿ.

ಈಗ ಸಣ್ಣ ನಿಂಬೆ ಗಾತ್ರದ ಚೆಂಡನ್ನು ಮಾಡಿ, ಅದನ್ನು ಚಪ್ಪಟೆ ಮಾಡಿ

ನಂತರ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ‌ಮಾಡಿ. ಎಣ್ಣೆ ಸಾಕಷ್ಟು ಬಿಸಿಯಾದ ನಂತರ, 2-3 ಕಟ್ಲೆಟ್‌ಗಳನ್ನು ಬಿಸಿ ಎಣ್ಣೆಯಲ್ಲಿ ಬಿಡಿ ಮತ್ತು ಎರಡೂ ಬದಿ ಗೋಲ್ಡನ್ ಬ್ರೌನ್ ಆಗುವವರೆಗೆ ಅದನ್ನು ಮಧ್ಯಮ ಉರಿಯಲ್ಲಿ ಹುರಿದು ತೆಗೆಯಿರಿ.

ಬಿಸಿ ಚಟ್ನಿ ಅಥವಾ ಕೆಚಪ್ ನೊಂದಿಗೆ ಉಳಿದ ಅನ್ನದಿಂದ ತಯಾರಿಸಿದ ಕಟ್ಲೆಟ್‌ಗಳನ್ನು ಸವಿಯಿರಿ.
wearing masks

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ‌ಕುಟುಂಬದ ಆರೋಗ್ಯ ನಮ್ಮ ‌ಕೈಯಲ್ಲಿದೆ. ಇದು ‌ಸಾಕ್ಷಾಟಿವಿ ಕಳಕಳಿ

#Saakshatv #cookingrecipe #Leftover #riceCutlets

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd