ತಂಪಾದ ಆರೋಗ್ಯಕರ ರಾಗಿ ಅಂಬಲಿ

1 min read
Saakshatv cooking recipe raagi ambali

ತಂಪಾದ ಆರೋಗ್ಯಕರ ರಾಗಿ ಅಂಬಲಿ

ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು – 3 ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಜೀರಿಗೆ ಪುಡಿ – 1/4 ಚಮಚ
ನೀರು – 2 ಕಪ್
ಮೊಸರು/ ಮಜ್ಜಿಗೆ – 1‌ಕಪ್
ರುಚಿಗೆ ತಕ್ಕಷ್ಟು ‌ಉಪ್ಪು
ಕೊತ್ತಂಬರಿ ಸೊಪ್ಪು – ಸ್ವಲ್ಪ
Saakshatv cooking recipe raagi ambali

ಮಾಡುವ ವಿಧಾನ
ಮೊದಲಿಗೆ ‌ಸ್ವಲ್ಪ ನೀರಿನಲ್ಲಿ ರಾಗಿ ಹಿಟ್ಟನ್ನು ಗಂಟಿಲ್ಲದಂತೆ ಕಲಸಿ. ಬಳಿಕ ಒಂದು ಪಾತ್ರೆಯಲ್ಲಿ ಎರಡು ಲೋಟ ನೀರನ್ನು ಬಿಸಿ ಮಾಡಿ, ಅದು ಕುದಿಯಲು ಪ್ರಾರಂಭಿಸಿದಾಗ ಕಲಸಿಟ್ಟ ರಾಗಿಯ ಹಿಟ್ಟನ್ನು ಸೇರಿಸಿ. ನಿಧಾನವಾಗಿ ಕೈಯಾಡಿಸುತ್ತಾ 2-3 ನಿಮಿಷ ಕುದಿಸಿ. ಬಳಿಕ ಕೆಳಗಿಳಿಸಿ, ತಣ್ಣಗಾಗಲು ಬಿಡಿ.
ತಣ್ಣಗಾದ ಬಳಿಕ ‌ಅದಕ್ಕೆ ಮೊಸರು/ಮಜ್ಜಿಗೆ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ಉಪ್ಪು ಸೇರಿಸಿದರೆ ಆರೋಗ್ಯಕರ ರಾಗಿ ಅಂಬಲಿ ಸಿದ್ದ

#Saakshatv #cookingrecipe #raagiambali

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd