ಸೋಯಾ ಚಂಕ್ಸ್ ಮಂಚೂರಿ
ಬೇಕಾಗುವ ಸಾಮಾಗ್ರಿಗಳು
ಸೋಯಾ ಚಂಕ್ಸ್ – 1 ಕಪ್
ಮೊಸರು – 4 ಚಮಚ
ಮೈದಾ ಹಿಟ್ಟು – 2 ಚಮಚ
ಕಾರ್ನ್ ಫ್ಲೋರ್ – 2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
ಮೆಣಸಿನ ಪುಡಿ – 1 ಚಮಚ
ಗರಂ ಮಸಾಲ – 1/2 ಚಮಚ
ಚಾಟ್ ಮಸಾಲಾ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ – 2 ಚಮಚ
ಬೆಳ್ಳುಳ್ಳಿ – 5 ಎಸಳು
ಈರುಳ್ಳಿ – 1
ಹಸಿಮೆಣಸು – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1/2 ಚಮಚ
ರೆಡ್ ಚಿಲ್ಲಿ ಸಾಸ್ – 1 ಚಮಚ
ಟೊಮೆಟೊ ಸಾಸ್ – 1 ಚಮಚ
ಸೋಯಾ ಸಾಸ್ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಹುರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಸೋಯಾ ಚಂಕ್ಸ್ ಅನ್ನು ಬಿಸಿನೀರಿನಲ್ಲಿ 10 ನಿಮಿಷ ನೆನೆಸಿಡಿ. ಬಳಿಕ ತಣ್ಣೀರಿನಲ್ಲಿ ತೊಳೆದು ನೀರನ್ನು ಹಿಂಡಿ ತೆಗೆಯಿರಿ.
ನಂತರ ಒಂದು ಪಾತ್ರೆಗೆ ಮೊಸರು, ಮೈದಾ ಹಿಟ್ಟು, ಕಾರ್ನ್ ಫ್ಲೋರ್, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಮೆಣಸಿನ ಪುಡಿ, ಗರಂ ಮಸಾಲಾ, ಚಾಟ್ ಮಸಾಲಾ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಸೋಯಾ ಚಂಕ್ಸ್ ಹಾಕಿ ಚೆನ್ನಾಗಿ ಬೆರೆಸಿ, ಅರ್ಧ ಗಂಟೆ ಹಾಗೆಯೇ ಬಿಡಿ.
ಬಳಿಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸೋಯಾ ಚಂಕ್ಸ್ ಗಳನ್ನು ಡೀಪ್ ಫ್ರೈ ಮಾಡಿ ಪಕ್ಕದಲ್ಲಿರಿಸಿಕೊಳ್ಳಿ.
ಈಗ ಒಂದು ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ರೆಡ್ ಚಿಲ್ಲಿ ಸಾಸ್, ಟೊಮೆಟೊ ಸಾಸ್, ಸೋಯಾ ಸಾಸ್ ಸೇರಿಸಿ. ಇದಕ್ಕೆ ಕಾರ್ನ್ ಫ್ಲೋರ್ ನೀರಿನಲ್ಲಿ ಕಲೆಸಿ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಹುರಿದಿಟ್ಟುಕೊಂಡ ಸೋಯಾ ಚಂಕ್ಸ್ ಸೇರಿಸಿ ಚೆನ್ನಾಗಿ ಕಲಸಿ. ಕೊನೆಯಲ್ಲಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿದರೆ ಸೋಯಾ ಚಂಕ್ಸ್ ಮಂಚೂರಿ ಸವಿಯಲು ಸಿದ್ಧ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1401728819275481088?s=19
https://twitter.com/SaakshaTv/status/1402118336113221639?s=19
https://twitter.com/SaakshaTv/status/1401392801661792259?s=19
https://twitter.com/SaakshaTv/status/1400611335294132227?s=19
https://twitter.com/SaakshaTv/status/1400669844085821442?s=19
#Saakshatv #cookingrecipe #soyaChuck #Manchurian








