2021ರ ಐಪಿಎಲ್ ಟೂರ್ನಿಗೆ ಮುಹೂರ್ತ ಫಿಕ್ಸ್.. ಏಪ್ರಿಲ್ 9ರಿಂದ ಮೇ 30ರ ತನಕ ಐಪಿಎಲ್ ಸುಗ್ಗಿ

1 min read
IPL 2021 saakshatv bcci

2021ರ ಐಪಿಎಲ್ ಟೂರ್ನಿಗೆ ಮುಹೂರ್ತ ಫಿಕ್ಸ್.. ಏಪ್ರಿಲ್ 9ರಿಂದ ಮೇ 30ರ ತನಕ ಐಪಿಎಲ್ ಸುಗ್ಗಿ

IPL 2021 saakshatv bcci2021ರ ಐಪಿಎಲ್ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದೆ. ಮೂಲಗಳ ಪ್ರಕಾರ ಏಪ್ರಿಲ್ 9ರಿಂದ ಮೇ 30ರವರೆಗೆ ಪ್ರತಿಷ್ಠಿತ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ತಿಳಿದುಬಂದಿದೆ.

ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು, ಕೊಲ್ಕತ್ತಾ ಮತ್ತು ಅಹಮದಬಾದ್ ನಗರಗಳಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆಯಲಿವೆ.
52 ದಿನಗಳ ಕಾಲ 60 ಪಂದ್ಯಗಳ ಈ ಟೂರ್ನಿಯು ಜೈವಿಕ ಸುಕ್ಷತೆಯಡಿಯಲ್ಲಿ ನಡೆಯಲಿದೆ. ಹಾಗೇ ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶವನ್ನು ಬಿಸಿಸಿಐ ಕಲ್ಪಿಸಿದೆ.
2020ರ ಐಪಿಎಲ್ ಟೂರ್ನಿಯು ದುಬೈನ ಮೂರು ಕ್ರೀಡಾಂಗಣಗಳಲ್ಲಿ ನಡೆದಿತ್ತು. ಇದೀಗ ಭಾರತದಲ್ಲಿ ಕೊವೀಡ್ ಆತಂಕ ಕಡಿಮೆಯಾಗಿದ್ದು, ಭಾರತದಲ್ಲೇ ಪಂದ್ಯ ಆಯೋಜನೆ ಮಾಡಲು ಬಿಸಿಸಿಐ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈಗಾಗಲೇ ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಮಷ್ತಾಕ್ ಆಲಿ ಟ್ರೋಫಿ, ವಿಜಯ ಹಜಾರೆ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿದೆ.
IPL 2021 saakshatvಇನ್ನು ಐಪಿಎಲ್ ನ ಬಿಡ್ಡಿಂಗ್ ಪ್ರಕ್ರಿಯೆ ಎಲ್ಲಾ ಮುಗಿದಿದ್ದು, ಎಲ್ಲಾ ಫ್ರಾಂಚೈಸಿಗಳು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ.
ಒಟ್ಟಿನಲ್ಲಿ ಏಪ್ರಿಲ್ ಮೇ ತಿಂಗಳಿನಲ್ಲಿ ಭಾರತದಲ್ಲಿ ಐಪಿಎಲ್ ಸುಗ್ಗಿ ನಡೆಯಲಿದ್ದು, ಅಭಿಮಾನಿಗಳು ಕಾತರದಿಂದ ಪಂದ್ಯ ನೋಡಲು ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd