ಐಒಸಿಎಲ್ – ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

1 min read
Saakshatv job IOCL Recruitment Saakshatv job IOCL Apprentice Saakshatv job IOCL Apprentice

ಐಒಸಿಎಲ್ – ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ Saakshatv job IOCL apprentice

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ತಾಂತ್ರಿಕ ಮತ್ತು ತಾಂತ್ರಿಕೇತರ ಅಪ್ರೆಂಟಿಸ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ವೆಬ್‌ಸೈಟ್- iocl.com ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯನ್ನು ಮಾರ್ಚ್ 7 ರಂದು ಮುಕ್ತಾಯಗೊಳ್ಳುತ್ತದೆ. Saakshatv job IOCL apprentice

IOCL 57 vacancies Saakshatv IOCL Recruitment Saakshatv job IOCL Recruitment Saakshatv job IOCL apprentice

ಖಾಲಿ ಇರುವ 346 ಹುದ್ದೆಗಳಿಗೆ ನೇಮಕಾತಿ ಚಾಲನೆ ನಡೆಯಲಿದ್ದು, ಈ ಪೈಕಿ ಸಾಮಾನ್ಯ ವಿಭಾಗ – 179, ಒಬಿಸಿ- 80, ಎಸ್‌ಟಿ- 36, ಇಡಬ್ಲ್ಯೂಎಸ್- 26, ಎಸ್‌ಸಿ -25, ಪಿಡಬ್ಲ್ಯೂಬಿಡಿ -12 ಹುದ್ದೆಗಳಿವೆ.

ಶಿಕ್ಷಣ: ಶಿಕ್ಷಣದ ಅರ್ಹತೆಯು ಹುದ್ದೆಗೆ ಅನುಗುಣವಾಗಿ ಬದಲಾಗುತ್ತದೆ. ಐಟಿಐ ಪ್ರಮಾಣೀಕರಣದೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾದವರು ಅಥವಾ ಮೂರು ವರ್ಷದ ಡಿಪ್ಲೊಮಾ ಪ್ರಮಾಣಪತ್ರ ಪಡೆದವರು ಸಹ ಅರ್ಜಿ ಸಲ್ಲಿಸಬಹುದು.

ವಯಸ್ಸು: ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳನ್ನು ಮೀರಬಾರದು. ಎಸ್‌ಸಿ / ಎಸ್‌ಟಿ / ಒಬಿಸಿ (ಎನ್‌ಸಿಎಲ್) / ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಸರ್ಕಾರದ ಮಾನದಂಡಗಳ ಪ್ರಕಾರ ವಯಸ್ಸಿನಲ್ಲಿ ಸಡಿಲಿಕೆ ಇದೆ.

Job opportunities IOCL Saakshatv job IOCL apprentice

ಪರೀಕ್ಷೆಯ ಮಾದರಿ

ಲಿಖಿತ ಪರೀಕ್ಷೆಯು ವಸ್ತುನಿಷ್ಠ ಪ್ರಕಾರದ ಬಹು-ಆಯ್ಕೆಯ ಪ್ರಶ್ನೆಗಳೊಂದಿಗೆ (ಎಂಸಿಕ್ಯೂ) 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತವೆ. ಪರೀಕ್ಷೆಯನ್ನು ಪೂರ್ಣಗೊಳಿಸಲು ಅಭ್ಯರ್ಥಿಗಳಿಗೆ 90 ನಿಮಿಷ ಸಮಯಾವಕಾಶ. ಆಯ್ಕೆ ಪ್ರಕ್ರಿಯೆಗೆ ಅರ್ಹತೆ ಪಡೆಯಲು ಅವರು ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 40 ಶೇಕಡಾ ಅಂಕಗಳನ್ನು ಗಳಿಸಬೇಕಾಗುತ್ತದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ ವಿಭಾಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಕನಿಷ್ಠ ಅರ್ಹತಾ ಅಂಕಗಳು ಶೇಕಡಾ 35 ಆಗಿರಬೇಕು.

ಹೆಚ್ಚಿನ ವಿವರಗಳಿಗಾಗಿ, ಅಭ್ಯರ್ಥಿಗಳು- iocl.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಸಾಕ್ಷಾಟಿವಿ ಉದ್ಯೋಗ ಮಾಹಿತಿಗಾಗಿ ಗೂಗಲ್ ನಲ್ಲಿ Saakshatv job ಎಂದು ಸರ್ಚ್ ಮಾಡಿ.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd