( ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ ಲಿಂಕ್ ಗಳನ್ನ ಕ್ಲಿಕ್ ಮಾಡಿ )
ಅಧ್ಯಾಯ – 6
ಮನಸ್ವಿ – ಮೋಕ್ಷಿತ್ ಭೇಟಿ ಆಗಿತ್ತು.. ಅದು ಸಹ ನಿಗೂಢ ಟಿವಿ ಜಗತ್ತಿನಲ್ಲಿ… ಸೈಕೋ ಸೈಂಟಿಸ್ಟ್ ಒಬ್ಬನ ವಿಚಿತ್ರ ಆವಿಷ್ಕಾರದ ಗೇಮ್ ಜಗತ್ತಿನಲ್ಲಿ ಸಿಲುಕಿದ್ದರು.. ಮನಸ್ವಿ ಅಕ್ಕ ತೇಜಸ್ವಿಯೂ ಇಲ್ಲೇ ಸಿಲುಕಿರುವ ವಿಚಾರ ತಿಳಿದಾಗಿತ್ತು ಮನಸ್ವಿಗೆ..
ಈಗ ತಪ್ಪಿಸಿಕೊಳ್ಳುವುದಕ್ಕೆ ದಾರಿ ಯವುದು…?? ಹೇಗೆ ಎನ್ನುವ ಪ್ರಶ್ನೆಯೇ ಅವಳೆದುರಿಗಿದ್ದದ್ದು…!!!
@@@@@@@@@@@@@@
” ಏಳು ಸ್ಟೇಜ್ ಗಳಿದೆ…. ಇಲ್ಲಿಂದ ಮುಂದೆ ಒಂದೆರೆಡು ಸ್ಟೇಜ್ ಗಳನ್ನ ನಾವೆಲ್ಲಾ ನೋಡಿದ್ದೀವಿ.. ಅವರೆಡನ್ನ ದಾಟೋದಕ್ಕೆ ಜೀವ ಬಾಯಿಗೆ ಬರುತ್ತೆ.. ಆದ್ರೆ ಇದುವರೆಗೂ ಮೂರನೇ ಸ್ಟೇಜ್ ದಾಟಲಿಕ್ಕಾಗಿಲ್ಲ…
” ಅದು ಅಪ್ಪಿ ತಪ್ಪಿ ಮುಂದೊಂದು ದಿನ ದಾಟಿದ್ರೂ ,, ಮುಂದಿನ ಸ್ಟೇಜ್ ಗಳು ಯಾವ ರೀತಿ ಇದೆ ಅನ್ನೊದು ಗೊತ್ತಿಲ್ಲ”
ಮೋಕ್ಷಿತನ ಮಾತು ಕೇಳಿ ಹೌಹಾರಿದ್ದಳು ಮನಸ್ವಿ.. ಹೇಗೆ ನಂಬೋದು… ಈ ರೀತಿಯಾಗಿಯೂ ವಿಜ್ಞಾನದಲ್ಲಿ ಆವಿಷ್ಕಾರಗಳಿದೆಯಾ.. ನಿಜ ಜೀವನದಲ್ಲಿ ಹೀಗೂ ಆಗುತ್ತಾ ಎಂದೆಲ್ಲಾ ಯೋಚಿಸುತ್ತಾ ನಿಂತಿದ್ದವಳಿಗೆ ಏನ್ ಮಾಡಬೇಕಂತ ಗೊತ್ತಾಗದ ಗೊಂದಲ…
ಕುಸಿದು ಕೂತವಳು ಕಣ್ಣೀರಿಡುತ್ತಿದ್ದದ್ದನ್ನ ನೋಡಲಾಗದೇ ಅವಳ ಬಳಿ ಕೂತ ಹುಡುಗ.. ಅವಳ ಸನಿಹಕ್ಕೆ ಬಂದವನು ಅವಳನ್ನ ದಿಟ್ಟಿಸಿದ ಪರಿಗೆ ಹುಡುಗಿಯ ಮೈ ಕಂಪಿಸಿತ್ತು…
ಮನಸ್ಸಲ್ಲಿ ಯಾಕೀ ಹೊಸ ಹೊಸ ಅನುಭವ ನನ್ನಲ್ಲಿ ( ಮನಸ್ಸಲ್ಲೇ ಮಾತನಾಡಿಕೊಂಡವಳು ) ಕಣ್ಣೀರು ಒರೆಸಿಕೊಂಡು ಮತ್ತೆ ಮೇಲೆದ್ದು ನಿಲ್ಲುವಳು.. ಅವಳ ಜೊತೆಗೆ ಅವನೂ ನಿಂತೊಡನೆ
ಒಮ್ಮೆಲೆ ಸಿಟ್ಟಲ್ಲಿ ಕೂಗಾಡುವ ಮನಸ್ವಿ …. ಯಾರಾ ಸೈಂಟಿಸ್ಟ್ ಎಲ್ಲಿ ಸಿಗ್ತಾನೆ , ಸಾಯಿಸಿಬಿಡ್ತೀನಿ ಅವನನ್ನ ಸುಮ್ನೆ ಬಿಡೋದಿಲ್ಲ ಎಂದವಳ ಮಾತಿಗೆ ಮೋಕ್ಷಿತ್ ಉತ್ತರಿಸುತ್ತಾ ,,, ಅವನು ಎಲ್ಲಿದ್ದಾನೆ ಏನ್ ಮಾಡ್ತಿದ್ದಾನೋ ಗೊತ್ತಿಲ್ಲ..
” ಆಗಾಗ ಅತನ ಧ್ವನಿಯಷ್ಟೇ ಕೇಳಿಸುತ್ತೆ… ಅವನು ನಿನ್ನ ಜೊತೆಗೂ ಮಾತನಾಡಿ ನಿನಗೆ ರೂಲ್ಸ್ ಹೇಳುತ್ತಾನೆ”
” ರೂಲ್ಸ್ ಮೈ ಪುಟ್.. ಅವನು ಸಿಕ್ಕರೆ ಇಲ್ಲೇ ಕೊಲೆ ಮಾಡ್ತೀನಿ ”
ಅವಳನ್ನ ಸಮಾಧಾನ ಮಾಡುವ ಮೋಕ್ಷಿತ್ ಇಟ್ಸ್ ಇಂಪಾಸಿಬಲ್ ಮನಸ್ವಿ,,, ಇಲ್ಲಿಂದ ಎಸ್ಕೇಪ್ ಆಗಲಿಕ್ಕೆ ದಾರಿ ಇಲ್ಲ, ಚಾನ್ಸ್ ಇಲ್ಲ.. ನಾವಿಲ್ಲೇ ಇರಬೇಕು ಈ ಗೇಮ್ ಒಳಗೆ ಇರುತ್ತೀವಿ… ಇಲ್ಲಿಂದ ಎಲ್ಲೂ ತಪ್ಪಿಸಿಕೊಳ್ಳೋದಕ್ಕೆ ದಾರಿ ಇಲ್ಲ ಎಂದವನ ಮಾತು ಕೇಳಿ ಸಿಟ್ಟಾಗುವ ಮನಸ್ವಿ
” ಇಷ್ಟ್ ಬೇಗ ಸೋಲುಪ್ಪಿದ್ರೆ ಹೇಗೆ ಮಿಸ್ಟರ್ ಮೋಕ್ಷಿತ್ ಅವರೇ ನೋಡೋದಕ್ಕೆ ಮಾತ್ರ ಬಲಶಾಲಿಯಾಗಿ ಕಂಡ್ರೆ ಸಾಕಾಗಲ್ಲ ಧೈರ್ಯ , ಛಲವೂ ಇರಬೇಕಾಗುತ್ತೆ… ”
ಎಂದವಳ ಮಾತಿಗೆ ಕಿರು ನಗು ನಕ್ಕವನು ನಾವು ಒಂದು ವರ್ಷದಿಂದ ಪ್ರಯತ್ನಿಸಿ ,ಪ್ರಯತ್ನಿಸಿ ಸಾಕಾಯ್ತು ನೋ ಯೂಸ್ , ನೀನಂದುಕೊಂಡಷ್ಟು ಸುಲಭ ಅಲ್ಲ ಇಲ್ಲಿ ಎಂದವನ ಮಾತಿಗೆ ಆತ್ಮವಿಶ್ವಾಸದ ಜೊತೆಗೆ ಉತ್ತರಿಸಿದ ಹುಡುಗಿ 😏
” ಫೇಮಸ್ ಫುಡ್ ಫ್ರಾಂಚೈಸಿ ಇನ್ ದ ವರ್ಲ್ಡ್ – ಕೆಎಫ್ ಸಿಯ ಫೌಂಡರ್ ಕೊಲೊನಲ್ ಸಾಂಡರ್ಸ್ ಬಗ್ಗೆ ಗೊತ್ತಾ ನಿಮಗೆ,,, ಅವರಿಗೆ ಯಶಸ್ಸು ಸಿಕ್ಕಿದ್ದು 67 ನೇ ವಯಸ್ಸಲ್ಲಿ…1009 ಸೋತಿದ್ದರು… 1010 ನೇ ಸಲ ಅವರಿಗೆ ಗೆಲುವು ಸಿಕ್ಕಿದ್ದು… ಅವರೇ ಛಲ ಬಿಟ್ಟಿಲ್ಲ… ಹಠ ಬಿಟ್ಟಿಲ್ಲ.. ಪ್ರಯತ್ನ ನಿಲ್ಲಿಸಲಿಲ್ಲ.. ನಾವ್ಯಾಕ್ ಹತಾಶಿತರಾಗಬೇಕು..”
ಎಂದವಳ ಆತ್ಮವಿಶ್ವಾಕ್ಕಾಗಲೇ ಫಿದಾ ಆಗಿದ್ದ ಹುಡುಗ..
ಅವಳು ಮಾತು ಮುಂದುವರೆಸಿದವಳು.. ಮಂತ್ರಮುಗ್ಧನಾಗಿ ಅವಳನ್ನ ನೋಡುತ್ತಾ ನಿಂತಿದ್ದನಷ್ಟೇ ಹುಡುಗ..
” ನಾನು ಹೊರಗೆ ಹೋಗ್ತೇನೆ.. ನೀವೂ ಬರುತ್ತೀರಾ… ನನ್ನ ಅಕ್ಕನೂ ಹೊರಗೆ ಬರುತ್ತಾಳೆ… ನನಗೆ ನಂಬಿಕೆನೂ ಇದೆ ಹಠವೂ ಇದೆ… ನಾವೆಲ್ಲಾ ಹೊರಗೆ ಹೋಗೇ ಹೋಗ್ತೇವೆ ,,, ನೋಡ್ತಿರು ನಿನಗೆ ಹೊರಗೆ ನಾನೇ ಟ್ರೀಟ್ ಕೊಡಿಸ್ತೀನಿ”
ಎಂದವಳ ಮಾತು ಕೇಳಿ ಫಿದಾ ಆಗಿದ್ದ ಹುಡುಗನಲ್ಲಿ ಹೊಸ ಆಸೆ, ಭರವಸೆಯೂ,, ಅವಳ ಮೇಲೊಂದು ಹೊಸ ಭಾವವೂ ಹುಟ್ಟಿತ್ತು..
ಅದೇನನ್ನಿಸ್ತೋ ಹುಡುಗ ಅವಳ ಕೈಹಿಡಿದರೆ ಅವಳು ವಿರೋಧಿಸಲೂ ಇಲ್ಲ.. ಬದಲಾಗಿ ಅವನ ಕಣ್ಣಲ್ಲಿ ದಿಟ್ಟಿಸಿದವಳ ಎದೆ ಬಡಿತ ನೂರರ ಗಡಿ ದಾಟಿತ್ತು.. ಅವನ ಸ್ಥಿತಿಯೂ ಅದೇ..
ಅವಳ ಕೈಹಿಡಿದು ಥ್ಯಾಂಕ್ಸ್ ನನ್ನ ಆತ್ಮವಿಶ್ವಾನ ಹೆಚ್ಚಿಸಿದಕ್ಕೆ.. ಹೊಸ ಭರವಸೆ ಮೂಡಿಸಿದಕ್ಕೆ.. ಎಂದವನ ಮಾತಿನಲ್ಲೊಂದು ಭಾವುಕತೆಯೂ ಇತ್ತು ಖುಷಿಯೂ ಇತ್ತು.. ಹುಡುಗಿ ಅದನ್ನ ಗಮನಿಸಿದ್ದಳು…
ಇಬ್ಬರ ಕಣ್ಣೋಟ ಸೇರಿ ಸೆಕೆಂಡ್ ಗಳಾದ ಮೇಲೆ ಇಬ್ಬರೂ ಮುಜುಗರದಲ್ಲಿ ದೂರಾದರು.. ಹೇಗೆ ಇಲ್ಲಿಂದ ಹೊರ ಹೋಗುವುದು ಮೊದಲು ಅದನ್ನ ಪ್ಲಾನ್ ಮಾಡಬೇಕೆಂದವಳ ಮಾತಿಗೆ ಇನ್ನೇನಾದರೂ ಉತ್ತರಿಸಬೇಕು..
ಅಷ್ಟ್ರಲ್ಲೇ ಅವಳ ಧೈರ್ಯವನ್ನ ಕ್ಷಣಮಾತ್ರಕ್ಕೆ ಕುಗ್ಗಿಸಿದ್ದು , ಅವಳ ಉಸಿರು ನಿಲ್ಲಿಸಿದ್ದು ಅವಳಿಗೂ ಗೊತ್ತಿಲ್ಲದೇ ಭಯದಲ್ಲಿ ಮೋಕ್ಷಿತ್ ಹಿಂದೆ ಬಚ್ಚಿಟ್ಟುಕೊಂಡಿದ್ದು ಅದೊಂದು ಧ್ವನಿ ಕೇಳಿ..
ಗಹಗಹಿಸಿ ನಗುತ್ತಾ ಜೋರು ಧ್ವನಿ ಕೇಳಿತ್ತು… ಆ ಧ್ವನಿ ಮತ್ಯಾರದ್ದೂ ಅಲ್ಲ ಆ ವಿಜ್ಞಾನಿಯದ್ದೇ… ಗಹಗಹಿಸಿ ನಗುತ್ತಿದ್ದವ… ಐ ಲೈಕ್ ಯುವರ್ ಕಾನ್ಫಿಡೆನ್ಸ್.. ಇಷ್ಟು ದಿನ ಎಲ್ಲರೂ ಬೋರಿಂಗ್ ಪ್ಲೇಯರ್ಸ್.. ನೀನು ಸ್ವಲ್ಪ ನನ್ನ ಮತ್ತೆ ನನ್ನ ಹೆಂಡತಿಯನ್ನ ಎಂಟರ್ ಟೈನ್ ಮಾಡಬಹುದು ಅನ್ನಿಸ್ತಿದೆ.. ಓಕೆ ಓಕೆ ಧಾರಾಳವಾಗಿ ಹೋಗು.. ಐ ಪ್ರಾಮೀಸ್ ನೀನು ಎಲ್ಲಾ ಸ್ಟೇಜ್ ಗಳನ್ನ ಕ್ಲಿಯರ್ ಮಾಡಿದ್ರೆ ನೀನಿಲ್ಲಿಂದ ಹೋಗಬಹುದು.. ನನಗೇ ಸವಾಲ್ ಹಾಕಿದ್ಯಾ… ಐ ಲೈಕ್ ಇಟ್… ನೀನೇನಾದ್ರೂ ಏಳನೇ ಸ್ಟೇಜ್ ತಲುಪಿದ್ದೇ ಆದ್ರೆ ನಿಜ ಹೇಳ್ತೀನಿ ನಿನ್ನ ಜೊತೆಗೆ ಇಲ್ಲಿರೋ ಅಷ್ಟು ಜನರನ್ನೂ ನಾನು ಖುದ್ದು ವಾಪಸ್ ಕಳುಹಿಸುತ್ತೇನೆ ಎಂದವನ ಮಾತಿಗೆ ಮೋಕ್ಷಿತ್ ಮನಸ್ವಿ ಪರಸ್ಪರ ಮುಖಗಳನ್ನ ನೋಡಿಕೊಂಡಿದ್ರು..
ಆದ್ರೆ ಮರು ಸೆಕೆಂಡ್ ನಲ್ಲಿ ನಿರಾಸೆಗೊಂಡಿದ್ದರು..
” ಆದ್ರೆ ನೀನು 7 ದಿನಗಳ ಒಳಗೆ 7 ಸ್ಟೇಜ್ ಗಳನ್ನ ದಾಟಿ ತೋರಿಸು.. ಆಗಷ್ಟೇ ಇವರೆಲ್ಲಾ ರಿಲೀಸ್ ಆಗೋದು… ಇಲ್ಲ ನೀನೊಬ್ಲೇ ಇಲ್ಲಿಂದ ಹೋಗೋದು” ಎಂದವನ ಮಾತಿಗೆ ಕೋಪದಲ್ಲಿ ಕಿರುಚುವ ಮನಸ್ವಿ ಸ್ಟಾಪ್ ಇಟ್ ಜಸ್ಟ್ ಸ್ಟಾಪ್ ಇಟ್… ಯಾಕೀತರ ಎಲ್ಲಾ ಮಾಡ್ತಿದ್ಯಾ… ಮನುಷ್ಯರು ಆಟದ ವಸ್ತುಗಳಲ್ಲ.. ಯಾಕ್ ಈತರ ವಿಕೃತವಾಗಿ ನಮ್ಮನ್ನೆಲ್ಲಾ ಈ ರೀತಿ ಟಾರ್ಚರ್ ಮಾಡ್ತಿದ್ಯಾ ಎಂದವಳ ಮಾತಿಗೆ ಪ್ರತಿಕ್ರಿಯೆ ಬರಲಿಲ್ಲ..
ಮನಸ್ವಿ ಟೆನ್ಷನ್ ಹೆಚ್ಚಾಗಿತ್ತು… ಗೊಂದಲವಿತ್ತು…
– ನಿಹಾರಿಕಾ ರಾವ್ –
– ನಿಹಾರಿಕಾ ರಾವ್ –
ಗಮನಿಸಿ : ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…
ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..
ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…
ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..
ಮೊದಲ ಅಧ್ಯಾಯ
ಅಧ್ಯಾಯ – 2
Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)
ಅಧ್ಯಾಯ – 3
ಅಧ್ಯಾಯ – 4
ಅಧ್ಯಾಯ – 5








