ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 4 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 17, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Special series

Saakshatv Special series

Share on FacebookShare on TwitterShare on WhatsappShare on Telegram

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

 

Related posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

March 6, 2026
ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

March 6, 2026

ಅಧ್ಯಾಯ – 4

ಟಿವಿಯೊಳಗೆ ಸೀದಾ ಪ್ರವೇಶ ಮಾಡಿಬಿಟ್ಟದ್ದಳು ಮನಸ್ವಿ…

@@@@@@@

ಇತ್ತ ಇಡೀ ಬಂಗಲೆ ಸುತ್ತಾಡಿದ್ದವರಿಗೆ ಈಗ ಅರಿವಿಗೆ ಬಂದಾಗಿತ್ತು ಮನಸ್ವಿ ಕಾಣೆಯಾಗಿರುವ ವಿಚಾರ..

ಎಲ್ಲರೂ ಗಾಬರಿ…😳😳😳 ಒಂದೇ ಸಮನೇ ಮನಸ್ವಿಗಾಗಿ ಕೂಗುತ್ತಾ ಕಿರುಚಾಡುತ್ತಾ ,,, ಹುಡುಕಾಟ ನಡೆಸಿದವರಿಗೆ ಮನಸ್ವಿ ಎಲ್ಲೂ ಸಿಕ್ಕದೇ ಹೋದಾಗ ಎಲ್ಲರೂ ಆತಂಕಗೊಂಡಿದ್ದರು..

ಆತಂಕದಲ್ಲಿ‌ ಎಲ್ಲರೂ ಮಾಧವ ಬಲವಂತವಾಗಿ ಇಲ್ಲಿಗೆ ಕರೆದುಕೊಂಡು‌ಬಂದದಕ್ಕೆ  ಅವನನ್ನ‌ ದೂಷಿಸಲಾರಂಭಿಸಿದ್ದರು..

ಮಾಧವ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ..‌ಅವನಲ್ಲೂ ಭಯ ಸ್ಪಷ್ಟ..

ಆಗಲೇ ಜಾನ್ ದೃಷ್ಟಿ ಹೋಗಿದ್ದು ಮೇಲಿದ್ದ ಅದೊಂದು ಮೂಲೆ ಕೊಠಡಿ ಮೇಲೆ..  ಜಾನ್ ಅತ್ತ ಕೈ ತೋರಿಸುವ ಕಡೆಗೆಲ್ಲರೂ ನೋಡುತ್ತಾ ಅತ್ತ ಕಡೆಗೆ ಓಡೋಡಿ ಹೋಗುವರು…

ಹೋದವರಿಗೆ ದೊಡ್ಡ ಆಘಾತವೇ ಕಾದಿತ್ತು…  ಯಾಕೆಂದರೆ ಅಲ್ಲಿ‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು ಮತ್ತೆ ಯಾರೂ‌ ಅಲ್ಲ ಮನಸ್ವಿ..

ಒಮ್ಮೆಲೆ ಎಲ್ಲರಿಗೂ ಜೀವ ಬಾಯಿಗೆ ಬಂದಿತ್ತು..

ಸುನೇನಾ ಕಿರುಚಾಡುತ್ತಾ ಅವಳನ್ನ ಎಷ್ಟೇ ಅಲುಗಾಡಿಸಿದರೂ  ಅವಳು ಮಾತ್ರ ಆ ಉ ಅಂತಿಲ್ಲ.. ಕಣ್ಬಿಡ್ತಿಲ್ಲ.. ಕೈ ಕಾಲುಗಳನ್ನ‌ ಅಲುಗಾಡಿಸುತ್ತಿಲ್ಲ…‌

ಎಲ್ಲರೂ ಏನ್ ಮಾಡೋದೋ ಗೊತ್ತಾಗದ ಸ್ಥಿತಿಯಲ್ಲಿ ನಿಂತಿದ್ದಾಗಲೇ..

“ದಬದಬದಬ ದಬದಬದಬ”  ಎಂಬ ಸದ್ದು ಕೇಳಿ ಎಲ್ಲರ ಉಸಿರು ಬಿಗಿಯಾಗಿದ್ದು ಸುಳ್ಳಲ್ಲ..

ಎಲ್ಲರೂ ಒಟ್ಟಾಗಿ ಒಂದು ಲೈನ್ ನಲ್ಲಿ‌ ನಿಂತವರು ಪರಸ್ಪರ ಮುಖ ನೋಡಿಕೊಳ್ತಿದ್ರೆ ಭಯಕ್ಕೆ ರೇಷ್ಮ , ಮೇರಿ ಕಣ್ಣೀರು ಹಾಕುತ್ತಿದ್ದರೆ,, ಸುನೇನಾ ಮನಸ್ವಿ‌ ನೋಡಿ ಅಳ್ತಿದ್ದಳು.. ಮಾಧವ್ ಜಾನ್ ಗಾಬರಿಯಾಗಿದ್ದರು…

ಇವರೆಲ್ಲಾ‌ ಭಯ ಹೆಚ್ಚಿಸಿದ್ದು ಯಾರೋ ಒಂದಷ್ಟು ಜನರು‌ ಮೆಟ್ಟಿಲೇರಿ ಬಂದ ಸದ್ದು …. ಆ ಸದ್ದಿಗೆ ಹೌಹಾರಿದವರು‌ ಒಬ್ಬರಿಗೊಬ್ಬರು ಅಂಟಿಕೊಂಡರು.. ದಬಾರ್ ಎಂದು ಬಾಗಿಲ ಬಳಿ ಬಂದವರ ಸದ್ದಿಗೆ ಬೆಚ್ಚಿ ಬಿದ್ದವರಿಗೆ ಆಘಾತವಾಗಿದ್ದು ತಮ್ಮ‌ ಟೀಮ್ ಇಂಚಾರ್ಜ್ , ಗ್ರಾಮಸ್ಥರು ಒಂದಿಬ್ಬರು ಹಾಗೂ ಫಾರೆಸ್ಟ್ ಆಫಿಸರ್ ಗಳ ಕ್ರೋಧ ನೋಡಿ..

ಅವರ ಇಂಚಾರ್ಜ್ ಬಂದವರೇ ಸಿಟ್ಟಲ್ಲಿ ಎಲ್ಲರನ್ನೂ ಗುರಾಯಿಸುತ್ತಾ ಇನ್ನೇನಾದರೂ ಹೇಳಬೇಕಿತ್ತು.. ಅಲ್ಲಿ ಬಿದ್ದಿದ್ದ ಮನಸ್ವಿಯತ್ತ ಎಲ್ಲರ‌ ಚಿತ್ತ ಹೋಯಿತು…

ಮನಸ್ವಿ ನೋಡಿ ಗಾಬರಿಯಾಗಿ ಅರಚುತ್ತಾ ಕೇಳಿದವರಿಗೆ ಮಾಧವ ವಿಷಯ ತಿಳಿಸಿದಾಗ ಸಿಟ್ಟಲ್ಲಿ ಫಾರೆಸ್ಟ್ ಆಫೀಸರ್ ಗಳು ಎಲ್ಲರನ್ನೂ ಬೈದು ಅಲ್ಲಿಂದ ಹೊರಟು ಮನಸ್ವಿಯನ್ನ ಕೂಡಲೇ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಾರೆ…

ಇತ್ತ ಫಾರೆಸ್ಟ್ ಆಫಿಸರ್ ಗಳು ಇಂಚಾರ್ಜ್ ಗಳು ಕೋಪಗೊಂಡಿದ್ರೆ ,, ಬಾಕಿ‌ ಎಲ್ಲರೂ ಶಾಕ್ ಆಗಿರುತ್ತಾರೆ.. ಇನ್ನೂ ಆಘಾತದಲ್ಲಿದ್ದರು.. ಮನಸ್ವಿ ಬಗ್ಗೆ ಚಿಂತಿತರಾಗಿದ್ದರು.. ಎಲ್ಲರೂ ಮಾಧವನನ್ನೇ ದೂಷಿಸಲಾರಂಭಿಸಿದ್ದರು.. ಮಾಧವನೂ ತನ್ನ ತಪ್ಪೆಂದು ಒಪ್ಪಿದ್ದನಾದರೂ ಅದ್ರಿಂದೇನ್ ಪ್ರಯೋಜನ..

ಪಟ್ಟಣದ ಆಸ್ಪತ್ರೆಗೆ ಸೇರಿಸಿಯಾಗಿತ್ತು… ವೈದ್ಯರಿಗೆ ಅದೇ ಬಂಗಲೆಗೆ ಪ್ರವೇಶಿಸಿದ ನಂತರ ಹೀಗಾಗಿದೆ ಎಂದ ಫಾರೆಸ್ಟ್ ಆಫೀಸರ್ ಗಳ ಮಾತು ಕೇಳಿ ಒಂದ್ ಕಡೆ ಗೊಂದಲ‌ ಮತ್ತೊಂದ್ ಕಡೆ ಸಿಟ್ಟು ಎರೆಡೂ ಮೂಡಿಯಾಗಿತ್ತು…‌

ಅಲ್ಲಿಗೆ ಹೋಗಲು ಬಿಟ್ಟಿದ್ದಕ್ಕೆ ಬೈದರೆ, ಅಲ್ಲಿಗೆ ಹೋದವರೆಲ್ಲಾ ಯಾಕೆ ಹೀಗೆ ಮಾಯವಾಗ್ತಿದ್ದಾರೆಂಬ ಗೊಂದಲ , ಸವಾಲುಗಳು,,

ಐಸಿಯುಗೆ ಕರೆದೊಯ್ದರೂ … ಎಲ್ಲರೂ ವೈದ್ಯರು ಏನ್ ಹೇಳ್ತಾರೆ ಅನ್ನೋ ಚಿಂತೆ…‌ಐಸಿಯುನಿಂದ ವೈದ್ಯರು ಆಚೆ ಬರುತ್ತಿದ್ದ ಹಾಗೆ ಅನೌನ್ಸ್ ಮಾಡಿದ್ದು ಆಕೆ ಕೋಮಾ ತಲುಪಿದ್ದಾಳೆ… ಥೇಟ್ ಅದೇ ರೀತಿ … ಒಂದು ವರ್ಷದ ಹಿಂದೆ‌ ಹೇಗೆ  7 ಮಂದಿ ಕೋಮಾ ತಲುಪಿದ್ದರೋ ಅದೇ ರೀತಿ…

ಕೋಮಾ… ಈ ಪದ ಕೇಳ್ತಿದ್ದ ಹಾಗೆ ಎಲ್ಲರ ಉಸಿರು ಒಂದ್ ಕ್ಷಣ ನಿಂತುಹೋಗಿಬಿಟ್ಟಿತ್ತು..

ಮಾಧವ ಗೋಳಾಡಲಾರಂಭಿಸಿದ್ದ.. ಇದೆಲ್ಲಾ ಆಗಿದ್ದು ನನ್ನಿಂದದಲೇ ಅವರ ಮನೆಯವರಿಗದೇನ್ ಉತ್ತರ ಕೊಡಲಿ‌ ಎಂದು ಗೋಳಾಡುತ್ತಿದ್ದವನ ಸಮಾಧಾನ ಮಾಡೋ ಮನಸ್ಸು ಯಾರಿಗೂ ಇರಲಿಲ್ಲ.. ಅವನ ಮೇಲೆ ಸಿಟ್ಟು ಕಡಿಮೆಯಾಗಿರಲಿಲ್ಲವಾದರೂ ಮನಸ್ವಿ ಈ ಸ್ಥಿತಿಗೆ ನಾವೂ ಕಾರಣವೆಂಬ ಪಾಪಪ್ರಜ್ಞೆ ಎಲ್ಲರನ್ನೂ ಕಾಡತೊಡಗಿತ್ತು.. ಕಣ್ಣೀರು ಜಾರತೊಡಗಿತ್ತು… ಮರು‌ದಿನ ಎಲ್ಲರೂ ವಾಪಸ್ ಸಿಟಿಗೆ ಬಂದಿದ್ದರು.. ಮನಸ್ವಿಯನ್ನ ಅಲ್ಲಿಯ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಕರೆ ತರಲಾಗಿತ್ತು..

ಈ ವಿಚಾರ ತಿಳಿಯುತ್ತಿದ್ದ ಹಾಗೆ ಮನಸ್ವಿ ತಂದೆ ತಾಯಿ‌ ಗೋಳಾಡುತ್ತಾ ಬಂದವರು ಮನಸ್ವಿ‌ ಬಳಿ ಕುಳಿತು‌ ಕಿರುಚಾಡುತ್ತಾ ,,  ” ಅಮ್ಮ‌ ಪ್ಲೀಸ್ ಕಣ್ಬಿಡೋ‌ ಮಗಳೇ.. ನೋಡೋ ಪಪ್ಪಾ‌ ಬಂದಿದ್ದೀನಿ” ಎಂದು ಗೋಳಾಡ್ತಿದ್ದರೆ.. ತಾಯಿ ಎದೆ ಬಡೆದುಕೊಂಡು ಅಲ್ಲೇ ನೆಲದ ಮೇಲೆ ಕುಸಿದು‌ಕುಳಿತಿದ್ದರು..

ಇವರಿಬ್ಬರ ನೋವು ನೋಡಿ‌ ಮಾಧವ ಮತ್ತೆಲ್ಲರೂ ದುಃಖಕ್ಕೆ ಕುಗ್ಗಿಹೋಗುತ್ತಾರೆ.. ಪಶ್ಚಾತಾಪದ ಜೊತೆಗೆ ನಾವು ಅವಳಂತೆಯೆ ಕೋಮಾ ಹೋಗಬೇಕಿತ್ತು.. ಯಾಕ್ ಚನಾಗಿದ್ದೀವಿ‌ ಅನ್ಸೋದಕ್ಕೆ ಶುರುವಾಗುತ್ತೆ..

ಮಾಧವನ ದೂಷಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.. ಅವನ ಜೊತೆಗೆ ಮಾತನಾಡುವ ಮನಸ್ಸೂ ಯಾರಿಗೂ ಇರಲಿಲ್ಲ..

ಆಗಲೇ ಅವರಮ್ಮನ ಮಾತು‌ ಕೇಳಿ ಎಲ್ಲರೂ ಗಾಬರಿಯಾಗಿದ್ದು.. ಎಷ್ಟ್ ಬೇಡ ಬೇಡ ಎಂದ್ರೂ ಕೊನೆಗೂ ನಿಮ್ಮಕ್ಕನ ಸ್ಥಿತಿಗೆ ಕಾರಣ ಹುಡುಕೇ ಹುಡುಕುತ್ತೀನಿ‌ ಎಂದು‌ ಹೋದವಳು ನೀನೂ ಅವಳ ಸ್ಥಿತಿಗೆ ತಲುಪಿಬಿಟ್ಟೆಲ್ಲಾ ಮಗಳೇ.. ನಾವೇನ್ ಮಾಡೋದು.. ನೀವಿಬ್ಬರೂ ಈ ಸ್ಥಿತಿಯಲ್ಲಿ ಜೀವಂತ ಹೆಣವಾಗಿ‌ ಬಿದ್ದಿರುವುದನ್ನ ಹೇಗೆ ಸಹಿಸೋದು ಎಂದು‌ ಗೋಳಾಡ್ತಿದ್ದರೆ.. ಮಾಧವ ಒಳಗೆ ಬಂದವನು ಆಂಕಲ್ ಸಾರಿ ನಾವಲ್ಲಿಗೆ ಹೋಗಬಾರದಿತ್ತು ಎಲ್ಲಾ ನಮ್ಮಿಂದಲೇ ಆದದ್ದು ಎಂದವನಿಗೆ ಉತ್ತರಿಸುವ ಮನಸ್ವಿ ತಂದೆ.. ನೀವು ಹೋಗಿಲ್ಲ‌ ಅಂದರೂ ಅವಳೊಬ್ಬಳೇ ಆದ್ರೂ ಹೋಗ್ತಿದ್ದಳು ಎಂದವರ ಮಾತಿಗೆ ಎಲ್ಲರೂ ಶಾಕ್..

ಅವಳ ಅಕ್ಕ ಒಂದು ವರ್ಷದ ಹಿಂದೆ ಅಲ್ಲಿಗೆ ಹೋದ 7 ಜನರ ಗುಂಪಲ್ಲಿ ಒಬ್ಬಳಾಗಿದ್ದಳು.. ಅವಳು ಇದೇ ಸ್ಥಿತಿಯಲ್ಲಿ ಸಿಕ್ಕಿದ್ದು ಆ ಏಳೂ ಜನರದ್ದೂ ಅದೇ ಪರಿಸ್ಥಿತಿ..‌ ಮನೆಯಲ್ಲಿ ಅವಳೂ ಜೀವಂತ ಶವವಾಗಿ‌ ಮಲಗಿದ್ದಾಳೆ… ಇಲ್ಲಿ ಇನ್ನೊಬ್ಬಳೆಂದು ಕಣ್ಣೀರಿಡುವಾಗ ಎಲ್ಲರಿಗೂ ಮನಸ್ವಿ‌ ಬಂದ ಕಾರಣ ಸ್ಪಷ್ಟವಾಗಿತ್ತು… ಹಾಗೆ ಆ ಏಳೂ ಜನರ ಪೈಕಿ ಮನಸ್ವಿ ಅಕ್ಕ ತೇಜಸ್ವಿ ಒಬ್ಬರೆಂಬುದು ಖುಚಿತವಾಗಿ , ಜೊತೆಗೆ ಮನಸ್ವಿ ಇದೇ ಸ್ಥಳವನ್ನೇಕೆ ಆಯ್ದುಕೊಂಡಿದ್ದಳು ಸ್ಪಷ್ಟವೂ ಆಗಿ ಮತ್ತಷ್ಟು ಆಘಾತದಲ್ಲಿದ್ದರು…

@@@@@@@

ಇತ್ತ ಮನಸ್ವಿ ಟಿವಿಯಗಿನ ಪ್ರಪಂಚಕ್ಕೆ ಪ್ರವೇಶಿಸಿದ ಮೇಲೆ ಪ್ರಜ್ಞೆ ತಪ್ಪಿದವಳು ಕಣ್ಬಿಟ್ಟಾಗ ಅಲ್ಲಿನ ದೃಶ್ಯ ನೋಡಿ ಹೌಹಾರಿದ್ದಳು.. ಅದೊ‌ಂದು ವಿಭಿನ್ನವಾದ ಲೋಕ ,,, ಬಿಸಿಲಿದೆ.. ಬೆಳಕಿದೆ.. ಮಳೆಯ ಲಕ್ಷಣವಿಲ್ಲವಾದರೂ ಪರ್ವತದ ತಪ್ಪಲಲ್ಲಿ ಕಾಮನ ಬಿಲ್ಲಿದೆ…

ಕಾಡಲ್ಲಿ‌ ಮನೆಗಳಿವೆ ಅಂಗಡಿಗಳಿಗೆ… ಜನರೇನೋ ಓಡಾಡ್ತಿದಾರೆ.. ಆದ್ರೆ ಒಬ್ಬರೂ ಮಾತನಾಡ್ತಿಲ್ಲ… ಒಬ್ಬರ ಮುಖ ಒಬ್ಬರು ನೋಡ್ತಿಲ್ಲ… ಕಣ್ಮುಚ್ವಿ ನಡೆಯುತ್ತಿದಾರೆ ಪ್ರತಿಯೊಬ್ಬರೂ…

ಗಿಡ ಮರಗಳಿವೆ ಆದರೆ ಹಳದಿ‌ ಬಣ್ಣದಲ್ಲಿ … ಅವಳು ನಡೆಯುತ್ತಿದ್ದಾಳೆ ಭಯದಲ್ಲೇ ಅನುಮಾನದಲ್ಲೇ … ಪಕ್ಕದಲ್ಲೇ ಹರಿಯುತ್ತಿದ್ದೆ ನದಿ ಗುಲಾಬಿ‌ ಬಣ್ಣದಲ್ಲಿ..

ಭಯದಲ್ಲಿ‌ ನಡುಗುತ್ತಿದ್ದ ಮನಸ್ವಿ ತಾನು ಹೇಗೆ ಇಲ್ಲಿಗೆ ಬಂದೆ.. ಇದೆಂತ ಲೋಕ  ಎಂದು ಯೋಚಿಸುತ್ತ ಕಣ್ಮುಚ್ಚಿದವಳು ಕಣ್ಬಿಟ್ಟಾಗ ಎದೆ ಬಡಿತ ಜೋರಾಗಿತ್ತು..

ಟಿವಿ‌ ಒಳಗೆ ಬಂದಿದ್ದೀನಿ.. ಇದ್ ಹೇಗ್ ಸಾಧ್ಯ… ನೋ….  ನೋನೋನೋನೋ…!!! ಇದ್…‌ ಇದ್ ಹೇಗ್ ಸಾಧ್ಯ.. ಹೌ ಈಸ್ ಇಟ್ ಪಾಸಿಬಲ್… ನೋ ಇಟ್ ಕಾಂಟ್ ಬಿ…

ಹೇಗೆ…??? ಹೌ..

??? ನಾನು ಟಿವಿಯೊಳಗೆ ಹೇಗ್ ಬಂದೆ..

ಇದೆಲ್ಲಾ ಏನ್ ನಡೀತಿದೆ.. ಇದೆಂತಾ ಪ್ರಪಂಚ..

ಈ ಜನ… ಈ‌ ಜನ ಇಷ್ಟ್ ವಿಚಿತ್ರವಾಗಿ ಕಣ್ಮುಚ್ಚೇ ನಡಿಯುತ್ತಿದ್ದಾರೆ ಯಾಕೆ.. ಇವರನ್ನ ಯಾರನ್ನಾದ್ರೂ ಮಾತನಾಡಿಸಿದ್ರೆ ಹೇಳ್ತಾರಾ.. ಏನಾದ್ರೂ ಗೊತ್ತಾಗಬಹುದಾ..?? ವಾಪಸ್ ಹೋಗಲಿಕ್ಕೆ ದಾರಿ ಸಿಗಬಹುದಾ..???

ಎಂದುಕೊಂಡವಳು ಹೋದವಳೇ ಓರ್ವ ಹೆಂಗಸನ್ನ ಮುಟ್ಟಿ ,, ಹಾಯ್ ಆಂಟಿ  ಎಂದವಳ ಒಂದೇ ಒಂದು ಧ್ವನಿ … ಅಷ್ಟೇ…. ಪ್ರತಿಯೊಬ್ಬರೂ ಕಣ್ಬಿಟ್ಟು ಅವಳತ್ತ ತಿರುಗಿದವರ ಕಣ್ಗಳಲ್ಲಿ ಮಾಯವಾಗಿದ್ದ ಕಪ್ಪು ಗುಡ್ಡೆ ನೋಡಿಯೇ ಅರಿವಾಗಿದ್ದು ಹುಡುಗಿಗೆ ಅವರ್ಯಾರೂ ಅಸಲಿಗೆ ಮನುಷ್ಯರಾಗಿರಲಿಲ್ಲ… ಬದಲಾಗಿ‌ ಝೋಂಬಿಗಳಾಗಿದ್ದರು….. (zombies )

( ಹಾಗಂತ ಈ ಕಥೆ ದೆವ್ವ ಭೂತದಲ್ಲಾ ಮುಂದೆ ಗೊತ್ತಾಗುತ್ತೆ… ಈ ಗೇಮ್ ಜಗತ್ತು ಎಷ್ಟೂ ರೋಚಕ ಅಂತ)

@@@@@@

ಕಮೆಂಟ್ ಮಾಡಿ ತಿಳಿಸಿ ಪ್ಲೀಸ್ ಕಥೆ ಹೇಗಿದೆ ಅಂತ..

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

ಮೊದಲ ಅಧ್ಯಾಯ

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

Tags: fantasymysterious tvnigooda tvSaakshatv Special Series
ShareTweetSendShare
Join us on:

Related Posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

by Shwetha
March 6, 2026
0

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕ ಮುಳುಗಿಸಿರುವ ಘಟನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಘಟನೆಯ ಬಗ್ಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,...

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

by Shwetha
March 6, 2026
0

ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ, ಸಣ್ಣ ಉದ್ಯಮಿಗಳಿಗೆ ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಭಾರತೀಯ ಅಂಚೆ ಇಲಾಖೆಯು...

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

by Shwetha
March 6, 2026
0

ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಾಗೂ ಸಿನಿಮಾಗಳ ಮೂಲಕವೂ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲಿಯೂ ಆತಂಕ ಸೃಷ್ಟಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ,...

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

by Shwetha
March 6, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದೂ ಮಹಾಸಾಗರದಲ್ಲಿ ತನ್ನ ಯುದ್ಧನೌಕೆಯನ್ನು ಹೊಡೆದುರುಳಿಸಿದ ಅಮೆರಿಕದ...

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

by Shwetha
March 6, 2026
0

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram