ADVERTISEMENT
Friday, March 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 10

Author Special Series : ನಿಗೂಢ ಟಿವಿ‌ ಜಗತ್ತು - ಅಧ್ಯಾಯ 10 , ಫ್ಯಾಂಟಸಿ , ಥ್ರಿಲ್ಲಿಂಗ್ ಕಥೆ.. ಮತ್ತೊಂದು ಜಗತ್ತಿನ ಜೊತೆಗೆ ನಿಮ್ಮನ್ನ ಸೇರಿಸುವ ಕಥೆ..

Namratha Rao by Namratha Rao
August 19, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Special series

Saakshatv Special series

Share on FacebookShare on TwitterShare on WhatsappShare on Telegram

(  ಹಿಂದಿನ ಅಧ್ಯಾಯಗಳನ್ನ ಓದಲು , ಲೇಖನದ ಕೊನೆಯಲ್ಲಿ ನೀಡಲಾಗಿರೋ  ಲಿಂಕ್ ಗಳನ್ನ ಕ್ಲಿಕ್ ಮಾಡಿ )

ಅಧ್ಯಾಯ – 10

Related posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

March 6, 2026
ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

March 6, 2026

ಇಲ್ಲಿಯವರೆಗೂ

ಮುಂದಿದ್ದ ಗಿಡಗಳನ್ನ ನೋಡಿಯೇ ಅಲ್ಲೇ ಕಾಲುಗಳು ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ನಿಂತಿದ್ದರು ಎಲ್ಲರೂ…

ಸೈಂಟಿಸ್ಟ್ ಹುಚ್ಚನ ರೀತಿ ತನ್ನ ಹೆಂಡತಿಯ ಮೃತ ದೇಹ ನೋಡುತ್ತಾ ಮಾತನಾಡುತ್ತಿದ್ದಾನೆ..

@@@@@@@@@@@@@@@@@@@@@@@

ಎಲ್ಲರೂ ಆಘಾತದಲ್ಲಿದ್ದಾರೆ,,, ಟೈಮ್ ಓಡ್ತಿದೆ… ಆದ್ರೆ ಹೇಗೆ..???

ಆ ಗಿಡಗಳನ್ನ ಹೇಗೆ ದಾಟುವುದು ಎನ್ನುವ ಪ್ರಶ್ನೆ ಅವರನ್ನ ಕಾಡುತ್ತಿದೆ..

ಮುಂದೆ ಹೆಜ್ಜೆ ಇಡೋದಕ್ಕಾಗಲ್ಲ,,,, ಹಿಂದೆ ವಾಪಸ್ ಹೋಗೋದಾದ್ರೂ ಎಲ್ಲಿಗೆ,, ಮತ್ತೆ ವಾಪಸ್ ಮೊದಲನೇ ಹಂತಕ್ಕಾ..??? ಸಾಧ್ಯವೇ ಇಲ್ಲ…

ಮೋಕ್ಷಿತ್ ಮನಸ್ವಿಯ ತಳಮಳ , ಅವಳ ಸಂಕಟ ನೋಡಿ ಅವಳ ಕೈ ಹಿಡಿದರೆ ,,  ಇತ್ತ ಮನಸ್ವಿ ಅವರಕ್ಕನಿಗೆ ಗೊಂದಲ… ಅಲ್ಲಾ ಈ ಇಬ್ಬರೂ ಅದ್ಯಾವ ಗ್ಯಾಪ್ ಅಲ್ಲಿ ಇಷ್ಟು ಹತ್ತಿರವಾದರು ಎನ್ನುವ ಗೊಂದಲ…

@@@@@@@@@@@@@

ಮೋಕ್ಷಿತ್ ಕೈ ಹಿಡಿಯುತ್ತಿದ್ದ ಹಾಗೆ ಮನಸ್ವಿ ಮೈ ಕಂಪಿಸಿದರೂ ಏನೋ ಒಂದು ನೆಮ್ಮದಿ ಧೈರ್ಯ… ಟೈಮ್ ನೋಡ್ತಾಳೆ… 20 ನಿಮಿಷವಷ್ಟೇ ಬಾಕಿಯಿದೆ.. ಎಲ್ಲರ ಎದೆಯಲ್ಲಿ ಟಿಕ್.. ಟಿಕ್.. ಟಿಕ್.. ಟಿಕ್.. ಎಂಬ ಒಳಧ್ವನಿ..

ಗೊಂದಲ , ಭಯ , ನಿರಾಸೆ ಜೊತೆಗೆ ಮುಂದೇನು ಎಂಬ ಆತಂಕ ಸ್ಪಷ್ಟ…

ಆಗಲೇ ಮನಸ್ವಿಗೆ ತಲೆಗೆ ಏನೋ ಹೊಳೆದು ಟಕ್ ಅಂತ ಅವರ ಮುಂದೆ ನಿಂತವಳ ಕಣ್ಗಳಲ್ಲಿ ಇಣುಕಿದವರಿಗೆ ಅವಳ ಭಾವನೆಯಿಂದ ಹೊಸ ಭರವಸೆ ಹುಟ್ಟಿದ್ದು ಸುಳ್ಳಲ್ಲ,,,,

ಅಂತೆಯೇ ಇತ್ತ ಸೈಂಟಿಸ್ಟ್ ಗೂ ಕುತೂಹಲ ,,,ಏನ್ ಮಾಡೋದಕ್ಕೆ ಹೊರಟಿದ್ದಾಳೆ ಎನ್ನುವ ಪ್ರಶ್ನೆ.. ಟಿವಿ ಸ್ಕ್ರೀನ್ ದಿಟ್ಟಿಸುತ್ತಿದ್ದಾನೆ..

ಮನಸ್ವಿ ತನ್ನ ಬ್ಯಾಗಿನಿಂದ ಒಂದು ಮೂರ್ನಾಲ್ಕು ಚಾಕು ,, ಲೈಟರ್ ತೆಗೆದುಕೊಳ್ತಾಳೆ… ಒಂದು ಪ್ಲಾಸ್ಟಿಕ್ ಕವರ್ ನಲ್ಲಿದ್ದ ಪದಾರ್ಥವನ್ನೆಲ್ಲಾ ಕೆಳಗೆ ಚೆಲ್ಲಿ ಆ ಪ್ಲಾಟಿಕ್ ಕವರ್ ತೆಗೆದುಕೊಳ್ತಾಳೆ.. ಅವಳ ಈ ನಡೆ ಎಲ್ಲರಿಗೂ ಗೊಂದಲ..  ಮೋಕ್ಷಿತ್ ಗೆ ಸ್ವಲ್ಪ ಸ್ವಲ್ಪವೇ ಸುಳಿವು ಸಿಕ್ಕಿತ್ತು..

ನಾಲ್ಕೈದು ಚೂರಿಗಳನ್ನ ಅಲ್ಲಿದ್ದವರಿಗೆ ಕೊಟ್ಟಳು.. ಅವಳು ಮತ್ತೆ ಮೋಕ್ಷಿತ್ ಕೈನಲ್ಲಿ ಗನ್ ಹಿಡಿದರು..

ತೇಜಸ್ವಿ ಕೈಗೆ ಪ್ಲಾಸ್ಟಿಕ್ ಕೊಟ್ಟವಳು ,,, ಅಲ್ಲೇ ಹತ್ತಿರದಲ್ಲೇ ಇದ್ದ ಒಣ ಕೊಂಬೆಗೆ  ಪ್ಲಾಸ್ಟಿಕ್ ಸುತ್ತಿ ,, ಅದರ ಮೇಲೆ ಪೇಪರ್  ಸುತ್ತಿದಳು.. ಈಗ ಎಲ್ಲರಿಗೂ ಸ್ವಲ್ಪ ಸ್ವಲ್ಪ ಅರಿವಿಗೆ ಬಂದಿತ್ತು..

ಈ ಬಾರಿ ಮನಸ್ವಿ ಮತ್ತೊಂದು ಸ್ಮಾರ್ಟ್ ಹೆಜ್ಜೆ ಇಟ್ಟಿದ್ದಳು,,, ಎಲ್ಲರನ್ನೂ ಗುಂಪು ಕರೆದು ಕಿವಿಗಳಲ್ಲಿ ಪ್ಲಾನ್ ಹೇಳಿದ್ದಳು.. ಇದು ಸೈಂಟಿಸ್ಟ್ ಗೆ ಕೇಳಿಸದೇ ಹೋಯ್ತು..

ಅವರ ಈ ಪ್ಲಾನ್ ನಿಂದ ಸೈಂಟಿಸ್ಟ್ ಸಿಟ್ಟಿಗೆದ್ದಿದ್ದ.. ಏನ್ ಪ್ಲಾನ್ ಮಾಡ್ತಿದ್ದಾರೆ ಅರಿವಿಗೆ ಬಾರದೇ ಅವನ ಮುಖದಲ್ಲಿ ಈಗೊಂದು ಸ್ವಲ್ಪ ಹೊತ್ತು ಮುಂಚೆ ಇದ್ದ ಸೈಕೋ ನಗು ಮಾಯವಾಗಿತ್ತು.. ಸಿಟ್ಟು ಆವರಿಸಿತ್ತು..

ಮನಸ್ವಿ ಮೇಲೆ ನೋಡುತ್ತಾ ನಗುವುದು ಹೇಗಿರುತ್ತೆ ಎಂದ್ರೆ ಒಂದ್ ರೀತಿ ಆ ಸೈಟಿಂಸ್ಟ್ ಗೆ ಟಾಂಟ್ ಮಾಡುವಂತೆ ಇರುತ್ತದೆ.. ಇದನ್ನ ಸಹಿಸಲಾಗದೇ ಮತ್ತಷ್ಟು ಕುಪಿತಗೊಳ್ಳುವ ವಿಜ್ಞಾನಿಯ ಕೈ ಮುಷ್ಠಿ ಬಿಗಿಯಾಗಿರುತ್ತೆ..

ಎಲ್ಲರೂ ಅವಳ ಪ್ಲಾನ್ ಕೇಳಿ ಆತಂಕದಲ್ಲೂ ಇರುತ್ತಾರೆ ,, ಹಾಗೆ ಧೈರ್ಯವಾಗಿಯೂ ಇರುತ್ತಾರೆ…

ಎಲ್ಲರೂ ಒಮ್ಮೆ ಟೈಮ್ ನೋಡ್ತಾರೆ ,,,, ಇನ್ನೂ 10 ನಿಮಿಷವಷ್ಟೇ ಬಾಕಿ ಇರುತ್ತೆ… ಮನಸ್ವಿ ಇಶಾರೆ ನೀಡ್ತಿದ್ದಂತೆ ಏಕಾಏಕಿ ಎಲ್ಲರೂ  ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತಾರೆ ತೇಜಸ್ವಿ ಹತ್ತಿರ ಹೋಗ್ತಿದ್ದಂತೆ ತನ್ನ ಕೈನಲ್ಲಿದ್ದ ಕೋಲಿಗೆ ಬೆಂಕಿ ಹಚ್ಚಿ ಕೂಡಲೇ ಮನಸ್ವಿ ಕೈನಿಂದ ಟಾರ್ಚ್ ನೂ ತೆಗೆದುಕೊಂಡು ಎರೆಡೂ ಕೈಗಳಿಂದಲೂ ಆ ಗಿಡಗಳನ್ನ ಬೆಳಕು ಹರಿಸುತ್ತಿದ್ಧಾಳೆ.. ಗಿಡಗಳು ವಿಚಲಿತಗೊಂಡಿವೆ..

ಅದೇ ಸಮಯ ನೋಡಿ ಅವುಗಳನ್ನ ಚಾಕುವಿನಿಂದ ಎಷ್ಟು ಗಿಡಗಳನ್ನ ನಾಶ ಮಾಡಲು ಸಾಧ್ಯವೋ ಅಷ್ಟು ಗಿಡಗಳನ್ನ ಕೊಲ್ಲುತ್ತಾ ಒಂದು  ಅಚ್ಚು ಕಟ್ಟು ದಾರಿ ಮಾಡಿಕೊಂಡು ಮುನ್ನುಗ್ಗುತ್ತಿದ್ದಾರೆ..

ಇದೇ ಸಮಯಕ್ಕೆ ಅಚಾನಕ್ ಆಗಿ ಹಿಂಬದಿಯಿಂದ ತಲೆ ಮೇಲೆ ಎತ್ತಿದ್ದ ಗಿಡ ಮನಸ್ವಿ ಮುಂದೆ ಬಾಗಿದೆ.. ಅದರ ಕೋರೆ ಹಲ್ಲುಗಳನ್ನ ನೋಡಿ ನಡುಗಿದ್ದ ಮನಸ್ವಿ ಕೈನಿಂದ ಗನ್ ಬಿದ್ದು ಬಿಟ್ಟಿತ್ತು.,.

ಮಿಕ್ಕವರೆಲ್ಲಾ ಮುಂದೆ ಹೊರಟು ಹೋಗಿದ್ದರು.. ಮನಸ್ವಿಯನ್ನ ನುಂಗಲು ಗಿಡ ಬಾಯಿ ತೆರೆದಿದೆ.. ಆದ್ರೆ ಅದು ಬಾಯಿ ತೆಗೆದು ಇನ್ನೇನು ಮನಸ್ವಿ ತಲೆ ನುಂಗಬೇಕು ಮನಸ್ವಿಯನ್ನ ತನ್ನತ್ತ ಎಳೆದುಕೊಳ್ಳುವ ಮೋಕ್ಷಿತ್ ಆ ಗಿಡದ ಬಳ್ಳಿಗೆ ಶೂಟ್ ಮಾಡಿದ್ದ.. ಅಲ್ಲಿಂದ ಓಡೋಡಿ ಹೋಗುವಾಗ ಅವಳಿಗೆ ಈಗ ಅಪಾಯದಲ್ಲಿದ್ದೀವಿ ಎಂಬ ವಿಚಾರವೂ ಮರೆತು ಹೋಗಿತ್ತು.. ಕೇವಲ ಅವನಿಗೆ ಆಕರ್ಷಿತಳಾಗಿ ಅವನನ್ನೇ ದಿಟ್ಟಿಸುತ್ತಿದ್ದವಳ ಎದೆಯಲ್ಲಿ ನಗಾರಿ ಬಾರಿಸುವಂತಿದೆ..

ಎಲ್ಲರೂ ಸಿಕ್ಕ ಸಿಕ್ಕ ಬಳ್ಳಿಗಳ ಮಾರಣ ಹೋಮ ಮಾಡಿ ಹಂಗೋ ಹಿಂಗೋ ಗಿಡಗಳಿಂದ ಮುಂದೆ ಬಂದವರಿಗೆ ದೂರದಲ್ಲಿ ಹಸಿರು ಲೈನ್ ಕಂಡಿತ್ತು..  ಖುಷಿಯಲ್ಲಿದ್ದರೂ ಅವರಿಗೆ ಭಯವಾಗಿದ್ದು ಟೈಮ್ ನೋಡಿ.. 20 ಸೆಕೆಂಡ್ ಗಳಷ್ಟೇ ಇದೆ..

ಆ ಹಸಿರು ಗೆರೆ ಸುಮಾರು 200 ಮೀಟರ್ ದೂರವಿದೆ..  ಎಲ್ಲರೂ ಒಮ್ಮೆ ಪರಸ್ಪರ ಮುಖ ನೋಡಿಕೊಂಡವರು ಒಂದ್ ಸೆಕೆಂಡ್ ಟೈಮ್ ವೇಸ್ಟ್ ಮಾಡದೇ ಒಂದೇ ಉಸಿರಲ್ಲಿ ಓಡೋಡಿ ಹೋದವರು ಇನ್ನೊಂದೇ ಒಂದು ಸೆಕೆಂಡ್ ಇದೆ ಅನ್ನೋವಾಗಲೇ ಕಡೆಗೂ ಆ ಲೈನ್ ತಲುಪಿಯೇ   ಬಿಟ್ಟರು.. ಎಲ್ಲರೂ ಅಲ್ಲಿಯೇ ಕೂತು ನಿಟ್ಟುಸಿರು ಬಿಡುತ್ತಿದ್ದಾರೆ..

ಮೋಕ್ಷಿತ್ ಮನಸ್ವಿ ಕುಳಿತಿದ್ದರೆ ,, ಪರಸ್ಪರ ಅವರ ಕಣ್ಣೋಟ ಬೆರೆತು ಅವರ ಮನಸಲ್ಲಿ  ಪ್ರೇಮಗೀತೆ ಕೇಳಿಸುತ್ತಿದೆ..

ಇಬ್ಬರ ಭಾವವೂ ಮುಂದಿರುವವರಿಗೆ ಸ್ಪಷ್ಟ.. ಅವರ ನಡುವೆ ಸಮ್ ತಿಂಗ್ ಸಮ್ ತಿಂಗ್ ನಡೆಯುತ್ತಿದೆ ಅನ್ನೋದನ್ನ ಊಹಿಸಲಾರದಷ್ಟು  ಮೂರ್ಖರೇನೂ ಅಲ್ಲ ಅವರು..

ಆಗಲೇ ಎಲ್ಲರಿಗೂ ಬೆಳಕು ಕಾಣಿಸಿತು.. ಮುಂದಿನ ಹಂತಕ್ಕೆ ಪ್ರವೇಶಿಸಲು ಕಾತರತೆ ಖುಷಿಯಾದ್ರೂ ಭಯಕ್ಕೆ ಕೈ ಕಾಲುಗಳು ಕಂಪಿಸುತ್ತಿವೆ.. ಮುಂದೆ ಹೇಗಿರಲಿದೆ ಎಂಬ ಭಯದಲ್ಲಿ ಎದೆ ಬಡಿತ ಜೋರಾಗಿದೆ..

ಇತ್ತ ಸೈಂಟಿಸ್ಟ್,,,, ಓಕೆ ಓಕೆ ಮನಸ್ವಿ ಇಲ್ಲಿಯವರೆಗೂ ಹೇಗೋ ದಾಟಿ ಬಂದೆ.. ಮುಂದೇನ್ ಮಾಡ್ತಿಯ ಎಂದು ನಗುತ್ತಾ ಕುಳಿತಿದ್ದವನ ನಗು ಹೇಳುತ್ತಿದೆ ಅವರ ಮುಂದಿನ ಹಾದಿ ಅಂದುಕೊಂಡಷ್ಟು ಸುಲಭವಲ್ಲ ಅಂತ..

@@@@@@@@@@

ಬೆಳಕಿನೆಡೆಗೆ ಭಯ ಭಯದಲ್ಲೇ ಹೆಜ್ಜೆ ಇಡುತ್ತಿದ್ದಾರೆ..  ಮನಸ್ವಿ ತನಗೂ ಗೊತ್ತಾಗದಷ್ಟು ಮೋಕ್ಷಿತ್ ಗೆ ಹತ್ತಿರವಾಗಿದ್ದಾಳೆ… ಅವನ ತೋಳುಗಳನ್ನ ಬಿಗಿಯಾಗಿ ಹಿಡಿದಿದ್ದವಳ ಉಸಿರಾಟದ ಶಬ್ಧ ಅವನಿಗೆ ಸ್ಪಷ್ಟವಾಗಿ ಕೇಳಿಸುತ್ತಿದೆ.. ಜೋರಾದ ಅವನೆದೆ ಬಡಿತದ ಢವ ಢವ ಅವಳಿಗೂ ಕೇಳಿಸುತ್ತಿದೆ.. ಇಬ್ಬರಲ್ಲೂ ಏನೋ ಹುಚ್ಚಾಸೆ ಉಗಮವಾಗಿದ್ದಂತೂ ಸ್ಪಷ್ಟ…

ಬೆಳಕು ದಾಟಿ ಮತ್ತೊಂದು ಹಂತ ತಲುಪಿದವರಿಗೆ ಅಲ್ಲಿ ಕಂಡ  ದೃಶ್ಯ ನೋಡಿ ಕುಸಿದು ಬೀಳುವುದೊಂದೇ ಬಾಕಿ..

ಎಲ್ಲರ ಇಡೀ ದೇಹವೇ ಕಂಪಿಸಿತ್ತು…  ಎಂದು ಕ್ಷಣ ಮೈ ಝುಂ ಎಂದು ಎಲ್ಲರ ಎದೆ ಬಡಿತ ನಿಂತೇ ಬಿಡ್ತೇನೋ ಅನ್ನುವ ಹಾಗೆ ನಿಂತಿದ್ದವರ ಗಂಟಲಲ್ಲಿ ಮಾತು ನಿಂತು ಹೋಗಿತ್ತು..

ಅವರ ಮುಂದೆ ಒಂದಷ್ಟು ದೂರದಲ್ಲಿ ಸಾವಿರಾರು ಭಯಾನಕ ಹಾವುಗಳ ಒಂದು ದೊಡ್ಡ ಸೇನೆಯೇ ಇದೆ…

ತೇಜಸ್ವಿ ಭಯಕ್ಕೆ ಇನ್ನೇನು ಕಿರುಚಬೇಕು ಅವಳ ಬಾಯಿಯ ಮೇಲೆ ಕೈ ಇಟ್ಟು ತಡೆದವಳು ಮನಸ್ವಿ ಎಲ್ಲರತ್ತ ನೋಡಿ ಸೈಲೆನ್ಸ್ ಎಂದು ಸನ್ನೆ ಮಾಡಿದ್ದರೂ ಎಲ್ಲರಲ್ಲೂ ಭಯ ಸ್ಪಷ್ಟ..

ವಾಪಸ್ ಹೋಗುವ ಮನಸ್ಸು..

ಆಗಲೇ ಗೇಮ್ ಹುಡುಗಿಯ ಧ್ವನಿ ಕೇಳಿಸಿತು..

Wellcome To Stage 3 –  snakes Land

 

– ನಿಹಾರಿಕಾ ರಾವ್ –

ಗಮನಿಸಿ :  ಪ್ರತಿ ದಿನ ಬೆಳಿಗ್ಗೆ 6 . 30 ಗಂಟೆಗೆ ಹಾಗೂ ಸಂಜೆ 6 . 30 ರ ಸಮಯಕ್ಕೆ  Saakshatv Special Series ( ಲೇಖಕರ ವಿಶೇಷ / Author Special ) ಸೀರೀಸ್ ನ ಪ್ರಕಟಿಸಲಾಗುತ್ತದೆ…

ನಮ್ಮ ವೆಬ್ ಸೈಟ್ ನ ‘ ಎಸ್ ಸ್ಪೆಷಲ್ / Saakshatv Special’ ಕ್ಯಾಟಗಿರಿಯಲ್ಲಿ ಎಲ್ಲಾ ಅಧ್ಯಾಯಗಳು ಲಭ್ಯವಿರುತ್ತವೆ..

ಇನ್ನೂ ಗೂಗಲ್ ನಲ್ಲಿ ‘ Saakshatv Special Series’ ಎಂದೂ ಸಹ ಸರ್ಚ್ ಮಾಡಿ ವಿಶೇಷ , ವಿಭಿನ್ನ ಕಥೆಗಳನ್ನ ಓದಬಹುದು…

ಇದೇ ರೀತಿ ಆಸಕ್ತಿದಾಯಕ , ವಿಭಿನ್ನ ಹಾಗೂ ರೋಚಕ ಕಥೆಗಳು , ಲೇಖನಗಳು , ಜೊತೆಗೆ ನ್ಯೂಸ್ ಅಪ್ ಡೇಟ್ ಗಳಿಗಾಗಿ ನಮ್ಮ ” Saakshatv” ಫಾಲೋ ಮಾಡಿ..

ಮೊದಲ ಅಧ್ಯಾಯ – 1

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 1

ಅಧ್ಯಾಯ – 2

Saakshatv Special series – ನಿಗೂಢ ಟಿವಿ ಜಗತ್ತು – ಅಧ್ಯಾಯ 2 ( ಅದ್ಭುತ ಫ್ಯಾಂಟಸಿ ಜಗತ್ತು)

ಅಧ್ಯಾಯ – 3

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 3

ಅಧ್ಯಾಯ – 4

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 4

ಅಧ್ಯಾಯ – 5

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 5

ಅಧ್ಯಾಯ – 6

Saakshatv Special Series : ನಿಗೂಢ ಟಿವಿ‌ ಜಗತ್ತು – ಅಧ್ಯಾಯ 6

 

 

Tags: fantasyniguda tvSaakshatv Special Series
ShareTweetSendShare
Join us on:

Related Posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

by Shwetha
March 6, 2026
0

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕ ಮುಳುಗಿಸಿರುವ ಘಟನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಘಟನೆಯ ಬಗ್ಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,...

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

by Shwetha
March 6, 2026
0

ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ, ಸಣ್ಣ ಉದ್ಯಮಿಗಳಿಗೆ ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಭಾರತೀಯ ಅಂಚೆ ಇಲಾಖೆಯು...

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

by Shwetha
March 6, 2026
0

ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಾಗೂ ಸಿನಿಮಾಗಳ ಮೂಲಕವೂ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲಿಯೂ ಆತಂಕ ಸೃಷ್ಟಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ,...

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

by Shwetha
March 6, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದೂ ಮಹಾಸಾಗರದಲ್ಲಿ ತನ್ನ ಯುದ್ಧನೌಕೆಯನ್ನು ಹೊಡೆದುರುಳಿಸಿದ ಅಮೆರಿಕದ...

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

by Shwetha
March 6, 2026
0

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram