ನಮಗೆ ನಾವೇ ಸ್ವಯಂ ನಿರ್ಬಂಧಗಳನ್ನು ಹೇರಿ ಕೊರೋನಾ ಸೋಂಕನ್ನು ಓಡಿಸೋಣ..

1 min read
partial lockdown

ನಮಗೆ ನಾವೇ ಸ್ವಯಂ ನಿರ್ಬಂಧಗಳನ್ನು ಹೇರಿ ಕೊರೋನಾ ಸೋಂಕನ್ನು ಓಡಿಸೋಣ..

ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಹಿಂದಿನ ಅಲೆಗೆ ಹೋಲಿಸಿದರೆ ಇಂದು ಪರಿಸ್ಥಿತಿ ಹೆಚ್ಚು ಗಂಭೀರವಾಗಿದೆ. ಆದರೆ ಸಾರ್ವಜನಿಕರು ಮಾತ್ರ ಕೊರೋನಾ ಸೋಂಕಿನ ಬಗ್ಗೆ ಉಡಾಫೆ ಮನೋಭಾವ ಹೊಂದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮಾಸ್ಕ್ ಧರಿಸದೆ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಈ ವೈರಲ್ ಸೋಂಕು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೋನಾ ಬಗ್ಗೆ ಎಚ್ಚರಿಕೆಯಿರಲಿ ಎನ್ನುವ ಸರ್ಕಾರವನ್ನು, ವೈದ್ಯರನ್ನು, ಖಳನಾಯಕರಾಗಿ ನೋಡುವ, ಹಣ ಮಾಡಲು ಹೆದರಿಕೆ ಹುಟ್ಟಿಸುತ್ತಿದೆ ಎನ್ನುವ ಮನೋಭಾವದ ಜೊತೆಗೆ ಇತರರ ದಾರಿತಪ್ಪಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ.
Bangalore

 

ಕೊರೋನಾ ಮೊದಲನೆಯ ಅಲೆ ನಮ್ಮ ಕಣ್ಣ ಮುಂದೆಯೇ  ಪಾಠವನ್ನು ಕಲಿಸಿದರೂ ಅದರಿಂದ ನಾವು ಪಾಠವನ್ನು ಕಲಿಯದೆ  ಹೋದದ್ದು ಮಾತ್ರ ದುರಂತವೇ ಸರಿ.

ಕಳೆದ ಬಾರಿ ಕೊರೋನಾ ತಡೆಗೆ ಲಾಕ್ ಡೌನ್ ಹೇರಿದ್ದ ಪರಿಣಾಮವಾಗಿ ಏನೇನಾಯಿತು ಎನ್ನುವುದು ನಮ್ಮ ಕಣ್ಣ ಮುಂದಿದೆ. ಇನ್ನೊಮ್ಮೆ ಆ ಪರಿಸ್ಥಿತಿ ಎದುರಾದರೆ ಮುಂದಿನ ದಿನಗಳನ್ನು ಊಹಿಸಿಕೊಳ್ಳುವುದು ಅಸಾಧ್ಯ.

ಒಂದೆಡೆ ಜಾತ್ರೆ ಸಮಾರಂಭವಾದರೆ ಮತ್ತೊಂದೆಡೆ ಚುನಾವಣಾ ಪ್ರಚಾರ.. ಇನ್ನೊಂದೆಡೆ ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರುವ ಜನರು..‌ ಇವೆಲ್ಲವುಗಳ ಜೊತೆ ಜನರ ಬಗ್ಗೆ ಕಾಳಜಿ ವಹಿಸುವುದನ್ನು ಮರೆತು ಕೆಸರೆರೆಚಾಟದಲ್ಲಿ‌ ತೊಡಗಿರುವ ರಾಜಕೀಯ ಪಕ್ಷಗಳು.. ಕೊರೋನಾ ಸೋಂಕಿನ ಬಗ್ಗೆ ತಲೆಗೆಡಿಸಿಕೊಳ್ಳದೆ ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ಅತಿಬುದ್ಧಿವಂತರು.

ಸರ್ಕಾರದ ಪ್ರತಿಯೊಂದು ಕ್ರಮಗಳನ್ನು ಟೀಕಿಸುವ, ಅದರಲ್ಲಿ ತಪ್ಪನ್ನು ಹುಡುಕಿ ತೋರಿಸುವ ನಾವು ಮೊದಲು ಯೋಚಿಸಬೇಕಿರುವುದು ಕೊರೋನಾ ತಡೆಗಟ್ಟುವಲ್ಲಿ ನಮ್ಮ ಪಾತ್ರವೇನು ? ಕೊರೋನಾ ಸೋಂಕಿನ ಬಗ್ಗೆ ಉಡಾಫೆ ವರ್ತನೆ ತೋರಿಸುತ್ತಿರುವ ನಾವು ಮೊದಲು ಯೋಚಿಸಬೇಕಿರುವುದು ನಮ್ಮಿಂದ ನಮ್ಮ ಮನೆಯ ಸದಸ್ಯರು ಕೊರೋನಾ ಸೋಂಕಿಗೆ ಬಲಿಯಾದರೆ ಇದಕ್ಕೆ ಹೊಣೆ ಯಾರು?

ಕೊರೋನಾ ಸೋಂಕಿನ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ ನಿಜ ಆದರೆ ಆ ಮಾರಕ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಕೊರೋನಾ ‌ತಡೆಗಟ್ಟಲು ನಾವು ಮಾಡಬೇಕಿರುವುದು ಕೆಲವೇ ಕೆಲವು ಮುನ್ನೆಚ್ಚರಿಕೆಗಳನ್ನು ಪಾಲಿಸುವುದು.

ಮಾಸ್ಕ್ ಧರಿಸುವುದು
ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು
ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳುವುದು
ಜನಸಂದಣಿಯಿಂದ ದೂರವಿರುವುದು
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ಸೇವನೆ
45 ವರ್ಷಕ್ಕಿಂತ ಮೇಲ್ಪಟ್ಟವರು ಕೊರೋನಾ ವ್ಯಾಕ್ಸಿನೇಷನ್‌ ತೆಗೆದುಕೊಳ್ಳುವುದು.

ಕೊರೋನಾ ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಂಡಾಗ

ಕೊರೋನಾ ಪರೀಕ್ಷೆಗೆ ಒಳಪಡುವುದು
ಇನ್ನೊಬ್ಬರಿಗೆ ಹರಡದಂತೆ ಸ್ವಯಂ ಕ್ವಾರಂಟೈನ್ ಆಗುವುದು
ವೈದ್ಯರು ಸೂಚಿಸಿದಂತೆ ಔಷಧಿಗಳ ಸೇವನೆ
Corona

ಆದರೆ ಇಷ್ಟನ್ನೂ ಪಾಲಿಸಲು ನಿರಾಕರಿಸುವವರು ಬಹಳಷ್ಟು ಜನರು ನಮ್ಮ ನಡುವೆ ಇದ್ದಾರೆ. ಕಾಲ ಮೀರಿ ಹೋದ ಮೇಲೆ ಚಿಂತಿಸಿ ಪ್ರಯೋಜನವೇನು.‌ ಸರ್ಕಾರದ ನಿಯಮಗಳು ಏನೇ ಇರಲಿ..‌ ಇತರರ ಅಭಿಪ್ರಾಯಗಳು ಯಾವುದೇ ಆಗಿರಲಿ.. ನಾವು ಇತರರಿಗೂ ಒಳ್ಳೆಯದನ್ನು ಬಯಸುವ ನಿಸ್ವಾರ್ಥಿ‌ ಜನರಾಗಿರದ್ದಿದ್ದರೂ ತೊಂದರೆಯಿಲ್ಲ.. ‌ಆದರೆ ನಮ್ಮನ್ನೇ ನಂಬಿರುವ ನಮ್ಮ ಕುಟುಂಬದ ಬಗ್ಗೆ ಯೋಚಿಸೋಣ.. ನಮ್ಮ ಕುಟುಂಬ ಸದಸ್ಯರನ್ನು ಕೊರೋನಾ ಸೋಂಕಿನಿಂದ ರಕ್ಷಿಸೋಣ. ಕೊರೋನಾ ಸೋಂಕು ನಿಯಂತ್ರಣಕ್ಕೆ ನಮಗೆ ನಾವೇ ಸ್ವಯಂ ನಿರ್ಬಂಧಗಳನ್ನು ಹೇರಿಕೊಂಡು ಪಾಲಿಸೋಣ..

#Saakshatv #Staysafe #coronainfection

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd